This page has not been fully proofread.

ವಿವೇಕಚೂಡಾಮಣಿ
 
[೪೮೬
 
೪೮೫, ಮಹಾತ್ಮನೂ ಸಂಗರಹಿತನೂ ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೂ
ನಿತ್ಯಾದಯಾನಂದರಸ, ಸ್ವರೂಪನೂ ಭೂಮನೂ ಸದಾ
ಸಮುದ್ರನೂ ಗುರುವೂ ಆದ ನಿನಗೆ ಪುನಃಪುನಃ ನಮಸ್ಕಾರಗಳು.
 
ಅಪಾರ.ದಯಾ
 

 
ಯತ್ಕಟಾಕ್ಷ-ಶಶಿ-ಸಾಂದ್ರ-ಚಂದ್ರಿಕಾ-
ಪಾತ-ಧೂತ-ಭವತಾಪಜಶ್ರಮಃ ।
ಪ್ರಾಪ್ತವಾನಹಮಖಂಡ-ವೈಭವಾ-
ನಂದಮಾತ್ಮಪದಮಕ್ಷಯಂ ಕ್ಷಣಾತ್ ॥ ೪೮೬ ॥
 
ಯತ್-ಕಟಾಕ್ಷ-ಶಶಿ- ಸಾಂದ್ರ- ಚಂದ್ರಿಕಾ- ಪಾತ- ಧೂತ-ಭವತಾಪಜ-
ಶ್ರಮಃ = ಯಾವನ ಕಡೆಗಣ್ಣಿನ ನೋಟವೆಂಬ ಚಂದ್ರನ ದಟ್ಟವಾದ ಬೆಳದಿಂಗಳಿನ
ಪ್ರಸರಣದ ಮೂಲಕ ಸಂಸಾರದ ಕೇಶದಿಂದ ಉಂಟಾದ ಶ್ರಮವನ್ನು ಹೋಗಲಾಡಿಸಿ
ಕೊಂಡ ಅಹಂ- ನಾನು ಅಕ್ಷಯಂ ಅಕ್ಷಯವಾದ ಅಖಂಡ ವೈಭವಾನಂದಂ =
ಅಖಂಡ ವೈಭವಾನಂದವಾದ ಆತ್ಮಪದಂ = ಪರಮಪದವನ್ನು ಕ್ಷಣಾತ್ - ಕ್ಷಣ
ಮಾತ್ರದಲ್ಲಿ ಪ್ರಾಪ್ತವಾನ್ - ಹೊಂದಿದೆನೋ [ಅಂಥ ಗುರುವಿಗೆ ನಮಸ್ಕಾರ].
 

 
೪೮೬. ಯಾವನ ಕಡೆಗಣ್ಣಿನ ನೋಟವೆಂಬ ಚಂದ್ರನ ದಟ್ಟವಾದ ಬೆಳ
ದಿಂಗಳಿನ ಪ್ರಸರಣದ ಮೂಲಕ ಸಂಸಾರಕೇಶದಿಂದ ಉಂಟಾದ ಶ್ರಮವನ್ನು
ಹೋಗಲಾಡಿಸಿಕೊಂಡ ನಾನು ಅಕ್ಷಯವೂ ಅಖಂಡ ವೈಭವಾನಂದವೂ ಆದ
ಪರಮಪದವನ್ನು ಕ್ಷಣಮಾತ್ರದಲ್ಲಿ ಹೊಂದಿದೆನೋ (ಅಂಥ ಗುರುವಿಗೆ
ನಮಸ್ಕಾರ).
 
ಧನ್ನೊಹಂ ಕೃತಕೃತ್ಯೋಽಹಂ ವಿಮುಕೋsಹಂ ಭವಗ್ರಹಾತ್ ।
ನಿತ್ಯಾನಂದ-ಸ್ವರೂಪೋsಹಂ ಪೂರ್ಣೋಽಹಂ ತ್ವದನುಗ್ರಹಾತ್
 
॥ ೪೮೭
 
C
 
ತ್ವತ್ ಅನುಗ್ರಹಾತ್ - ನಿಮ್ಮ ಅನುಗ್ರಹದಿಂದ ಅಹಂ = ನಾನು ಧನ್ಯಃ -
ಧನ್ಯನು, ಅಹಂ ಕೃತಕೃತ್ಯ- ಕೃತಕೃತ್ಯನು, ಅಹಂ ಭವಗ್ರಹಾತ್-ಭವಬಂಧದಿಂದ
ವಿಮುಕ್ತಃ - ವಿಮುಕ್ತನು, ಅಹಂ ನಿತ್ಯಾನಂದಸ್ವರೂಪಃ ನಿತ್ಯಾನಂದಸ್ವರೂಪನು,
ಅಹಂ ಪೂರ್ಣಃ - ಪರಿಪೂರ್ಣನು.
 
೪೮೭, ನಿಮ್ಮ ಅನುಗ್ರಹದಿಂದ ನಾನು ಧನ್ಯನೂ ಕೃತಕೃತ್ಯನೂ ಆದೆನು,
ಸಂಸಾರಬಂಧದಿಂದ ವಿಮುಕ್ತನಾದೆನು; ನಾನು ನಿತ್ಯಾನಂದಸ್ವರೂಪನು,
ಪರಿಪೂರ್ಣನು,