This page has been fully proofread once and needs a second look.

ಪರಬ್ರಹ್ಮ-ಅಂಬುಧೇಃ = ಆತ್ಮಾನಂದವೆಂಬ ಅಮೃತಪ್ರವಾಹದಿಂದ ತುಂಬಿರುವ ಪರ-
ಬ್ರಹ್ಮವೆಂಬ ಸಮುದ್ರದ, ವೈಭವಂ = ವೈಭವವನ್ನು, ವಾಚಾ = ವಾಕ್ಕಿನಿಂದ, ವಕ್ತುಂ =
ಹೇಳುವುದಕ್ಕೆ, ಅಶಕ್ಯಮ್ ಏವ = ಸಾಧ್ಯವೇ ಇಲ್ಲ, ಮನಸಾ ವಾ = ಮನಸ್ಸಿನಿಂದ,
ಮಂತುಂ = ತಿಳಿಯುವುದಕ್ಕೆ, ನ ಶಕ್ಯತೇ = ಸಾಧ್ಯವೇ ಇಲ್ಲ.
 
೪೮೧. ಸಮುದ್ರದಲ್ಲಿ ಸಿಡಿದುಬಿದ್ದ ಆಲಿಕಲ್ಲಿನಂತೆ[^೧] ನನ್ನ ಮನಸ್ಸು
ಯಾವ ಸಮುದ್ರದ ಅಂಶಾಂಶದ ಅಲ್ಪಭಾಗದಲ್ಲಿ[^೨] ಲಯವಾಗಿ, ಈಗ[^೩] ಆನಂದ-
ಸ್ವರೂಪದಿಂದ ಸುಖವನ್ನು ಪಡೆಯಿತೋ ಅಂಥ ಆತ್ಮಾನಂದವೆಂಬ ಅಮೃತ
ಪ್ರವಾಹದಿಂದ ತುಂಬಿರುವ ಪರಬ್ರಹ್ಮವೆಂಬ ಸಮುದ್ರದ ವೈಭವವನ್ನು ಮಾತಿ-
ನಿಂದ ಹೇಳುವುದಕ್ಕೆ ಸಾಧ್ಯವೇ ಇಲ್ಲ, ಮನಸ್ಸಿನಿಂದ ತಿಳಿಯುವುದಕ್ಕೂ
ಸಾಧ್ಯವಿಲ್ಲ.
 
[^೧] ಮಳೆಯ ಜೊತೆಯಲ್ಲಿ ಬೀಳುವ ಆಲಿಕಲ್ಲು ಸಮುದ್ರದಲ್ಲಿ ಬಿದ್ದೊಡನೆಯೇ
ಕರಗಿ ನೀರಾಗುವಂತೆ.
[^೨] ಅವ್ಯಕ್ತವು ಪರಬ್ರಹ್ಮದ ಒಂದಂಶವಾಗಿದೆ. ಸೂತ್ರಾತ್ಮನು ಅವ್ಯಕ್ತದ ಅಂಶ-
ವಾಗಿದ್ದಾನೆ. ವಿರಾಟ್ಟುರುಷನು ಸೂತ್ರಾತ್ಮನ ಅಂಶವಾಗಿದ್ದಾನೆ. ಮನಸ್ಸು ಕರಗಿ
ಲಯವಾಗಲು ಈ ವಿರಾಟ್ಟುರುಷನ ಆನಂದವೇ ಸಾಕು.
[^೩] ಸಮಾಧಿಯಿಂದ ಬಹಿಃಪ್ರಜ್ಞನಾದ ಮೇಲೆ.
 
ಕ್ವ ಗತಂ ಕೇನ ವಾ ನೀತಂ ಕುತ್ರ ಲೀನಮಿದಂ ಜಗತ್ ।
ಅಧುನೈವ ಮಯಾ ದೃಷ್ಟಂ ನಾಸ್ತಿ ಕಿಂ ಮಹದದ್ಭುತಮ್ ॥೪೮೨ ॥
 
ಇದಂ ಜಗತ್ = ಈ ಜಗತ್ತು, ಕ್ವ ಗತಂ = ಎಲ್ಲಿ ಹೋಯಿತೋ, ಕೇನ ವಾ =
ಯಾರಿಂದ, ನೀತಂ = ಒಯ್ಯಲ್ಪಟ್ಟಿತೋ, ಕುತ್ರ = ಎಲ್ಲಿ, ಲೀನಂ = ಲಯವಾಯಿತೋ
[ನಾನು ಅರಿಯೆನು]; ಅಧುನಾ ಏವ = ಈಗ ತಾನೇ, ಮಯಾ = ನನ್ನಿಂದ, ದೃಷ್ಟಂ =
ನೋಡಲ್ಪಟ್ಟಿತ್ತು; [ಈಗ] ನ ಅಸ್ತಿ = ಇಲ್ಲವಾಗಿದೆ, ಕಿಂ ಮಹತ್ ಅದ್ಭುತಂ =
ಎಂಥ ಮಹದಾಶ್ಚರ್ಯ!
 
೪೮೨. ಈ ಜಗತ್ತು ಎಲ್ಲಿ ಹೋಯಿತೋ ಯಾರಿಂದ ಒಯ್ಯಲ್ಪಟ್ಟಿತೋ
ಎಲ್ಲಿ ಲಯವಾಯಿತೋ (ನಾನು ಅರಿಯೆನು). ಈಗ ತಾನೇ ಅದನ್ನು
ನೋಡಿದ್ದೆನು, ಈಗ ಇಲ್ಲವಾಗಿದೆ! ಎಂಥ ಮಹದಾಶ್ಚರ್ಯ!
 
ಕಿಂ ಹೇಯಂ ಕಿಮುಪಾದೇಯಂ ಕಿಮನ್ಯತ್ಕಿಂ ವಿಲಕ್ಷಣಮ್ ।
ಅಖಂಡಾನಂದ-ಪೀಯೂಷ-ಪೂರ್ಣೆ ಬ್ರಹ್ಮ-ಮಹಾರ್ಣವೇ ॥ ೪೮೩ ॥