This page has not been fully proofread.

೨೪೨
 
ವಿವೇಕಚೂಡಾಮಣಿ
 
[೪೮೨
 
ಪರಬ್ರಹ್ಮ, ಅಂಬುಧೇಃ = ಆತ್ಮಾನಂದವೆಂಬ ಅಮೃತಪ್ರವಾಹದಿಂದ ತುಂಬಿರುವ ಪರ
ಬ್ರಹ್ಮವೆಂಬ ಸಮುದ್ರದ ವೈಭವಂ = ವೈಭವವನ್ನು ವಾಚಾ ವಾಕ್ಕಿನಿಂದ ವಸ್ತುಂ
ಹೇಳುವುದಕ್ಕೆ ಅಶ ಕಮ್ ಏನ = ಸಾಧ್ಯವೇ ಇಲ್ಲ, ಮನಸಾ ವಾ ಮನಸ್ಸಿನಿಂದ
ಮಂತುಂ = ತಿಳಿಯುವುದಕ್ಕೆ ನ ಶಕ್ಯತೇ- ಸಾಧ್ಯವೇ ಇಲ್ಲ.
 
೪೮೧, ಸಮುದ್ರದಲ್ಲಿ ಸಿಡಿದುಬಿದ್ದ ಆಲಿಕಲ್ಲಿನಂತೆ ನನ್ನ ಮನಸ್ಸು
ಯಾವ ಸಮುದ್ರದ ಅಂಶಾಂಶದ ಅಲ್ಪಭಾಗದಲ್ಲಿ ಲಯವಾಗಿ, ಈಗ ಆನಂದ
ಸ್ವರೂಪದಿಂದ ಸುಖವನ್ನು ಪಡೆಯಿತೋ ಅಂಥ ಆತ್ಮಾನಂದವೆಂಬ ಅಮೃತ
ಪ್ರವಾಹದಿಂದ ತುಂಬಿರುವ ಪರಬ್ರಹ್ಮವೆಂಬ ಸಮುದ್ರದ ವೈಭವವನ್ನು ಮಾತಿ
ನಿಂದ ಹೇಳುವುದಕ್ಕೆ ಸಾಧ್ಯವೇ ಇಲ್ಲ, ಮನಸ್ಸಿನಿಂದ ತಿಳಿಯುವುದಕ್ಕೂ
ಸಾಧ್ಯವಿಲ್ಲ.
 
[೧ ಮಳೆಯ ಜೊತೆಯಲ್ಲಿ ಬೀಳುವ ಆಲಿಕಲ್ಲು ಸಮುದ್ರದಲ್ಲಿ ಬಿದ್ದೊಡನೆಯೇ
 
ಕರಗಿ ನೀರಾಗುವಂತೆ.
 
ಇ ಅವ್ಯಕ್ತವು ಪರಬ್ರಹ್ಮದ ಒಂದಂಶವಾಗಿದೆ. ಸೂತ್ರಾತ್ಮನು ಅವ್ಯಕ್ತದ ಅಂಶ
ವಾಗಿದ್ದಾನೆ. ವಿರಾಟ್ಟುರುಷನು ಸೂತ್ರಾತ್ಮನ ಅಂಶವಾಗಿದ್ದಾನೆ.
ಲಯವಾಗಲು ಈ ವಿರಾಟ್ಟುರುಷನ ಆನಂದವೇ ಸಾಕು.
೩ ಸಮಾಧಿಯಿಂದ ಬಹಿಃಪ್ರಜ್ಞನಾದ ಮೇಲೆ.
 
ಮನಸ್ಸು ಕರಗಿ
 
ಕೈ ಗತಂ ಕೇನ ವಾ ನೀತಂ ಕುತ್ರ ಲೀನಮಿದಂ ಜಗತ್ ।
ಅಧುನೈವ ಮಯಾ ದೃಷ್ಟಂ ನಾಸ್ತಿ ಕಿಂ ಮಹದದ್ಭುತಮ್ ॥೪೮೨ ॥
 
ಇದಂ ಜಗತ್ ಈ ಜಗತ್ತು ಕೈ ಗತಂ= ಎಲ್ಲಿ ಹೋಯಿತೋ, ಕೇನ ವಾ=
ಯಾರಿಂದ ನೀತಂ = ಒಯ್ಯಲ್ಪಟ್ಟಿತೋ, ಕುತ್ರ - ಎಲ್ಲಿ ಲೀನಂ = ಲಯವಾಯಿತೋ
[ನಾನು ಅರಿಯೆನು]; ಅಧುನಾ ಏವ – ಈಗ ತಾನೇ ಮಯಾ - ನನ್ನಿಂದ ದೃಷ್ಟಂ
ನೋಡಲ್ಪಟ್ಟಿತ್ತು; [ಈಗ ನ ಅಸ್ತಿ - ಇಲ್ಲವಾಗಿದೆ, ಕಿಂ ಮಹತ್ ಅದ್ಭುತಂ
ಎಂಥ ಮಹದಾಶ್ಚರ್ಯ!
 
೪೮೨, ಈ ಜಗತ್ತು ಎಲ್ಲಿ ಹೋಯಿತೋ ಯಾರಿಂದ ಒಯ್ಯಲ್ಪಟ್ಟಿತೋ
ಎಲ್ಲಿ ಲಯವಾಯಿತೋ (ನಾನು ಅರಿಯೆನು). ಈಗ ತಾನೇ ಅದನ್ನು
 
ನೋಡಿದ್ದೆನು, ಈಗ ಇಲ್ಲವಾಗಿದೆ! ಎಂಥ ಮಹದಾಶ್ಚರ್ಯ!
 
ಕಿಂ ಹೇಯಂ ಕಿಮುಪಾದೇಯಂ ಕಿಮನ್ಯಂ ವಿಲಕ್ಷಣಮ್ ।
ಅಖಂಡಾನಂದ-ಪೀಯೂಷ-ಪೂರ್ಣೆ ಬ್ರಹ್ಮ-ಮಹಾರ್ಣವೇ
 
॥ ೪೮೩ ॥