This page has not been fully proofread.

೪೮೧]
 
ವಿವೇಕಚೂಡಾಮಣಿ
 
೪೭೯, ಪರಬ್ರಹ್ಮದಲ್ಲಿ ಮನಸ್ಸನ್ನು ಸ್ವಲ್ಪ ಹೊತ್ತು ನಿಲ್ಲಿಸಿ, (ಅನಂತರ)
ಬಹಿರ್ಮುಖನಾಗಿ ಪರಮಾನಂದದಿಂದ ಈ ಮಾತನ್ನು ಹೇಳಿದನು:
[೧ ಪ್ರಾರಬ್ಧವಶದಿಂದ]
 
မှာ
 
ಬುದ್ಧಿರ್ವಿನಷ್ಟಾ ಗಲಿತಾ ಪ್ರವೃತ್ತಿ-
ರ್ಬಹ್ಮಾತ್ಮನೋರೇಕತಯಾಧಿಗತ್ಯಾ ।
ಇದಂ ನ ಜಾನೇಷ್ಯನಿದಂ ನ ಜಾನೇ
 
ಕಿಂ ವಾ ಕಿಯಾ ಸುಖಮಸ್ಯಪಾರಮ್ ॥ ೪೮೦
ಬ್ರಹ್ಮ. ಆತ್ಮನೋಃ - ಬ್ರಹ್ಮ ಮತ್ತು ಆತ್ಮ-ಇವರ ಏಕತಯಾ ಅಧಿಗತ್ಯಾ
ಐಕ್ಯಜ್ಞಾನದಿಂದ ನನ್ನ ಬುದ್ಧಿಃ = ಮನಸ್ಸು ವಿನಷ್ಟಾ -ನಾಶವಾಯಿತು, ಪ್ರವೃತ್ತಿ
ಪ್ರವೃತ್ತಿಯು ಗಲಿತಾ - ಶಿಥಿಲವಾಯಿತು; ಇದಂ ನ ಜಾನೇ ಇದು ಎಂಬುದನ್ನು
ಅರಿಯೆನು, ಅನಿದಂ ನ ಜಾನೇ - ಇದಲ್ಲವೆಂಬುದನ್ನು ಅರಿಯೆನು, ಅಪಾರಂ =
ಕೊನೆಯಿಲ್ಲದ ಸುಖಂ = ಆನಂದವು ಕಿಂ ವಾ ಯಾವುದೋ ಕಿಯತ್ ವಾ ಆಸ್ತಿ -
ಎಷ್ಟಿದೆಯೊ [ನಾನು ಅರಿಯೆನು].
 
೪೮೦. ಜೀವಾತ್ಮ ಮತ್ತು ಪರಮಾತ್ಮ-ಇವರ ಐಕ್ಯಜ್ಞಾನದಿಂದ
ಮನಸ್ಸು ನಾಶವಾಯಿತು; ಹೊರಗಿನ ಪ್ರವೃತ್ತಿಯು ಶಿಥಿಲವಾಯಿತು;
'ಇದು' ಎಂಬುದನ್ನು ಅರಿಯೆನು, 'ಇದಲ್ಲ' ಎಂಬುದನ್ನೂ ಅರಿಯೆನು.
ಅಪಾರವಾದ ಆನಂದವು ಯಾವುದೊ ಎಷ್ಟಿದೆಯೊ (ಅರಿಯೆನು).
 
[೧ ಚಿತ್ತ ವೃತ್ತಿಗಳೆಲ್ಲ ನಾಶವಾಯಿತು ಎಂದರ್ಥ.]
 
ವಾಚಾ ವಸ್ತು ಮಶಕ್ಯಮೇವ ಮನಸಾ ಮಂತುಂ ನ ವಾ ಶಕ್ಯತೇ
ಸ್ವಾನಂದಾಮೃತ-ಪೂರಪೂರಿತ ಪರಬ್ರಹ್ಮಾಂಬುಧೇರ್ವೆಭವಮ್ ।
ಅಂಭೋರಾಶಿ-ವಿಶೀರ್ಣ-ವಾರ್ಷಿಕ-ಶಿಲಾಭಾವಂ ಭಜನ್ನೇ ಮನೋ
ಯಸ್ಕಾಂಶಾಂಶಲವೇ ವಿಲೀನವಧುನಾನಂದಾತ್ಮನಾ ನಿರ್ವತಮ್
 
॥ ೪೮೧ ॥
 
=
 
ಅಂಭೋರಾಶಿ- ವಿಶೀರ್ಣ ವಾರ್ಷಿಕ ಶಿಲಾಭಾವಂ- ಸಮುದ್ರದಲ್ಲಿ ಸಿಡಿದು
ಬಿದ್ದ ಆಲಿಕಲ್ಲಿನ ರೂಪವನ್ನು ಭಜತ್ = ಹೊಂದಿದ ಮೇ – ನನ್ನ ಮನಃ – ಮನಸ್ಸು
ಯಸ್ಯ = ಯಾವ ಸಮುದ್ರದ ಅಂಶಾಂಶ ಲವೇ = ಅಂಶದ ಅಂಶದ ಅಲ್ಪಭಾಗದಲ್ಲಿ
ವಿಲೀನಂ - ವಿಲೀನವಾಗಿ ಆಧುನಾ – ಈಗ ಆನಂದಾತ್ಮನಾ - ಆನಂದಸ್ವರೂಪದಿಂದ
ನಿರ್ವತಂ- ಸುಖವನ್ನು ಪಡೆಯಿತೊ, [ಅಂಥ] ಸ್ವ. ಆನಂದ ಅಮೃತ ಪೂರ ಪೂರಿತ.