This page has been fully proofread once and needs a second look.

ವೇದಾಂತ-ಸಿದ್ಧಾಂತ-ನಿರುಕ್ತಿರೇಷಾ
ಬ್ರಹ್ಮೈವ ಜೀವಃ ಸಕಲಂ ಜಗಚ್ಚ ।
ಅಖಂಡರೂಪಸ್ಥಿತಿರೇವ ಮೋಕ್ಷೋ
ಬ್ರಹ್ಮಾದ್ವಿತೀಯೇ ಶ್ರುತಯಃ ಪ್ರಮಾಣಮ್ ॥ ೪೭೭ ॥
 
ಜೀವಃ = ಜೀವನು, ಸಕಲಂ ಜಗತ್ ಚ = ಸಮಸ್ತ ಜಗತ್ತು, ಬ್ರಹ್ಮ ಏವ =
ಬ್ರಹ್ಮವೇ, ಅಖಂಡರೂಪಸ್ಥಿತಿಃ ಏವ = ಬ್ರಹ್ಮಸ್ವರೂಪದಲ್ಲಿರುವುದೇ, ಮೋಕ್ಷಃ =
ಮೋಕ್ಷವು -- ಏಷಾ = ಇದು, ವೇದಾಂತ-ಸಿದ್ಧಾಂತ-ನಿರುಕ್ತಿಃ = ವೇದಾಂತಸಿದ್ಧಾಂತದ
ಕೊನೆಯ ನಿರ್ಣಯ; ಬ್ರಹ್ಮ-ಅದ್ವಿತೀಯೇ = ಬ್ರಹ್ಮವು ಅದ್ವಿತೀಯವು ಎಂಬುದಕ್ಕೆ,
ಶ್ರುತಯಃ = ಉಪನಿಷತ್ತುಗಳೇ, ಪ್ರಮಾಣಂ = ಪ್ರಮಾಣವು.
 
೪೭೭. ಜೀವನ ಸಮಸ್ತ ಜಗತ್ತೂ ಬ್ರಹ್ಮವೇ, ಬ್ರಹ್ಮಸ್ವರೂಪದಲ್ಲಿ-
ರುವುದೇ ಮೋಕ್ಷವು-- ಇದು ವೇದಾಂತಸಿದ್ಧಾಂತದ ಕೊನೆಯ ನಿರ್ಣಯ.
ಬ್ರಹ್ಮವು ಅದ್ವಿತೀಯವು ಎಂಬುದಕ್ಕೆ ಉಪನಿಷತ್ತುಗಳೇ ಪ್ರಮಾಣವು.
 
ಇತಿ ಗುರುವಚನಾಚ್ಛ್ರುತಿಪ್ರಮಾಣಾತ್
ಪರಮವಗಮ್ಯ ಸತತ್ತ್ವಮಾತ್ಮಯುಕ್ತ್ಯಾ ।
ಪ್ರಶಮಿತಕರಣಃ ಸಮಾಹಿತಾತ್ಮಾ
ಕ್ವಚಿದಚಲಾಕೃತಿರಾತ್ಮನಿಷ್ಠಿತೋಽಭೂತ್ ॥ ೪೭೮ ॥
 
ಇತಿ = ಹೀಗೆ, ಗುರುವಚನಾತ್ = ಗುರೂಪದೇಶದಿಂದಲೂ, ಶ್ರುತಿಪ್ರಮಾ-
ಣಾತ್ = ಶ್ರುತಿಪ್ರಮಾಣದಿಂದಲೂ, ಆತ್ಮಯುಕ್ತ್ಯಾ = ತನ್ನ ಯುಕ್ತಿಯಿಂದಲೂ
ಪರಂ ಸತತ್ತ್ವಂ- ಪರಮಾತ್ಮತತ್ತ್ವವನ್ನು, ಅವಗಮ್ಯ = ತಿಳಿದುಕೊಂಡು, ಪ್ರಶ-
ಮಿತಕರಣಃ = ಇಂದ್ರಿಯಗಳನ್ನೆಲ್ಲ ನಿಗ್ರಹಿಸಿದವನಾಗಿ, ಸಮಾಹಿತಾತ್ಮಾ = ಸಮಾಹಿತ-
ಚಿತ್ತನಾಗಿ, ಕ್ವಚಿತ್ = ಒಂದು ಏಕಾಂತಪ್ರದೇಶದಲ್ಲಿ, ಅಚಲಾಕೃತಿಃ = ನಿಶ್ಚಲವಾದ
ಆಕಾರವುಳ್ಳವನಾಗಿ, ಆತ್ಮನಿಷ್ಠಿತಃ ಅಭೂತ್ = ಬ್ರಹ್ಮನಿಷ್ಠನಾದನು.
 
೪೭೮. ಹೀಗೆ ಗುರೂಪದೇಶದಿಂದಲೂ ಶ್ರುತಿ ಪ್ರಮಾಣದಿಂದಲೂ ತನ್ನ
ಯುಕ್ತಿಯಿಂದಲೂ ಪರಮಾತ್ಮತತ್ತ್ವವನ್ನು ತಿಳಿದುಕೊಂಡು, ಇಂದ್ರಿಯ-
ಗಳನ್ನೆಲ್ಲ ನಿಗ್ರಹಿಸಿ, ಚಿತ್ತವನ್ನು ನಿರುದ್ಧಗೊಳಿಸಿ, ಒಂದು ಏಕಾಂತಪ್ರದೇಶ-
ದಲ್ಲಿ ನಿಶ್ಚಲವಾಗಿ ಕುಳಿತು ಬ್ರಹ್ಮನಿಷ್ಠನಾದನು.
 
ಕಿಂಚಿತ್ಕಾಲಂ ಸಮಾಧಾಯ ಪರೇ ಬ್ರಹ್ಮಣಿ ಮಾನಸಮ್ ।
ವ್ಯುತ್ಥಾಯ ಪರಮಾನಂದಾದಿದಂ ವಚನಮಬ್ರವೀತ್ ॥ ೪೭೯ ॥