This page has not been fully proofread.

ವಿವೇಕಚೂಡಾಮಣಿ
 
೪೭೦. ವಿಷಯೇಚ್ಛೆಗಳನ್ನು ತೊರೆದು, ಭೋಗಗಳನ್ನು ತ್ಯಜಿಸಿ, ಶಾಂತ
ರಾಗಿ, ಇಂದ್ರಿಯಗಳನ್ನು ಪೂರ್ಣವಾಗಿ ನಿಗ್ರಹಿಸಿದ ಮಹನೀಯರಾದ ಯತಿ
ಗಳು ಈ ಪರತತ್ತ್ವವನ್ನು ತಿಳಿದುಕೊಂಡು, ಕಡೆಗೆ ಆತ್ಮಜ್ಞಾನ ಪ್ರಸಾದದಿಂದ
ಪರಮಾನಂದವನ್ನೇ ಹೊಂದಿರುತ್ತಾರೆ.
 
೪೭೨]
 
ಭವಾನಪೀದಂ ಪರತತ್ತ್ವಮಾತ್ಮನಃ
 
ಸ್ವರೂಪಮಾನಂದಘನಂ ವಿಚಾರ್ಯ ।
ವಿಧೂಯ ಮೋಹಂ ಸ್ವಮನಃಪ್ರಕಲ್ಪಿತಂ
ಮುಕ್ತಃ ಕೃತಾರ್ಥ ಭವತು ಪ್ರಬುದ್ಧ
 
೨೩೭
 
॥ ೪೭೧ ॥
 
ಭವಾನ್ ಅಪಿ= ನೀನು ಕೂಡ ಆತ್ಮನಃ, ಆತ್ಮನ ಸ್ವರೂಪಂ - ಸ್ವರೂಪವಾದ
ಆನಂದಘನಂ= ಆನಂದಘನವಾದ ಪರತಂ = ಪರತತ್ತ್ವವನ್ನು ವಿಚಾರ್ಯ-
ವಿವೇಚಿಸಿ, ಸ್ವ-ಮನಃ- ಪ್ರಕಲ್ಪಿತಂ ನಿನ್ನ ಮನಸ್ಸಿನಲ್ಲಿ ಕಲ್ಪಿತವಾಗಿರುವ ಮೋಹಂ
ಮೋಹವನ್ನು ವಿಧೇಯ- ಕೊಡವಿಕೊಂಡು, ಪ್ರಬುದ್ಧಃ ಜ್ಞಾನಿಯಾಗಿ ಮುಕ್ತ-
ಮುಕ್ತನಾಗಿ ಕೃತಾರ್ಥಃ ಭವತು - ಕೃತಾರ್ಥನಾಗು.
 
೪೭೧. ನೀನು ಕೂಡ ಈ ಆತ್ಮನ ಸ್ವರೂಪವಾಗಿರುವ ಆನಂದಘನವಾದ
ಪರತತ್ತ್ವವನ್ನು ವಿವೇಚಿಸಿ, ನಿನ್ನ ಮನಸ್ಸಿನಲ್ಲಿ ಕಲ್ಪಿತವಾಗಿರುವ ಮೋಹ
ವನ್ನು ಕೊಡವಿಕೊಂಡು, ಜ್ಞಾನಿಯೂ ಮುಕ್ತನೂ ಆಗಿ ಕೃತಾರ್ಥನಾಗು.
 
ಸಮಾಧಿನಾ ಸಾಧು ವಿನಿಶ್ಚಲಾತ್ಮನಾ
 
ಪಶ್ಯಾತ್ಮತತ್ವಂ ಸ್ಪುಟಬೋಧ-ಚಕ್ಷುಷಾ ।
ನಿಃಸಂಶಯಂ ಸಮೃಗವೇಕ್ಷಿತಶ್ಚ
 
H
 
ಚ್ಯುತಃ ಪದಾರ್ಥ್ ನ ಪುನರ್ವಿಕಲ್ಪತೇ ॥ ೪೭೨ ।
ಸಾಧು - ಚೆನ್ನಾಗಿ ವಿನಿಶ್ಚಲ. ಆತ್ಮನಾ = ನಿಶ್ಚಲವಾದ ಮನಸ್ಸಿನಿಂದ ಕೂಡಿ
ರುವ ಸಮಾಧಿನಾ - ಸಮಾಧಿಯಿಂದ ಸ್ಪುಟ ಬೋಧ ಚಕ್ಷುಷಾ = ಸ್ಪುಟವಾದ
ಜ್ಞಾನದೃಷ್ಟಿಯಿಂದ ಆತ್ಮತತ್ತ್ವಂ ಆತ್ಮತತ್ತ್ವವನ್ನು ಪಶ್ಯ- ಸಾಕ್ಷಾತ್ಕರಿಸು; ಶ್ರುತಃ
ಶ್ರವಣ ಮಾಡಿದ ಪದಾರ್ಥಃ = ಪದಾರ್ಥವು ಸಮ್ಯಕ್ = ಚೆನ್ನಾಗಿ ನಿಃಸಂಶಯಂ -
ಸಂಶಯವಿಲ್ಲದೆ ಅವೇಕ್ಷಿತಃ ಚೇತ್- ಗ್ರಹಿಸಲ್ಪಟ್ಟರೆ ಪುನಃ ಮತ್ತೆ ನ ವಿಕಲ್ಪತೇ-
ಸಂಶಯವನ್ನುಂಟುಮಾಡುವುದಿಲ್ಲ.
 
೪೭೨, ಚೆನ್ನಾಗಿ ನಿಶ್ಚಲವಾದ ಮನಸ್ಸಿನಿಂದ ಕೂಡಿದ ಸಮಾಧಿಯಿಂದ
ಸ್ಪುಟವಾದ ಜ್ಞಾನದೃಷ್ಟಿಯ ಮೂಲಕ ಆತ್ಮತತ್ತ್ವವನ್ನು ಸಾಕ್ಷಾತ್ಕರಿಸು.