This page has been fully proofread once and needs a second look.

ಬ್ರಹ್ಮ= ಬ್ರಹ್ಮವು, ಪ್ರತ್ಯಕ್ = [ಎಲ್ಲರ] ಒಳಗಿರತಕ್ಕದ್ದು, ಏಕರಸಂ = ಸಮ
ರಸವಾದದ್ದು, ಪೂರ್ಣಂ = ಪೂರ್ಣವು, ಅನಂತಂ = ಅನಂತವು, ಸರ್ವತೋ-
ಮುಖಂ = ಸರ್ವವ್ಯಾಪಿಯು; [ಉಳಿದುದು ಹಿಂದಿನಂತೆಯೆ].
 
೪೬೫,. ಬ್ರಹ್ಮವು ಎಲ್ಲರ ಒಳಗಿರತಕ್ಕದ್ದು, ಸಮರಸವಾದದ್ದು,
ಪೂರ್ಣವು, ಅನಂತವು, ಸರ್ವವ್ಯಾಪಿಯು; ಏಕವೂ ಅನ್ವಯವೂ ಆಗಿರು-
ವುದು. ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.
 
ಅಹೇಯವನುಪಾದೇಯವನಾಧೇಯಮನಾಶ್ರಯಮ್ ।
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ ॥ ೪೬೬ ॥
 
ಬ್ರಹ್ಮ= ಬ್ರಹ್ಮವು, ಅಹೇಯಂ = ಬಿಡತಕ್ಕದ್ದಲ್ಲ, ಅನುಪಾದೇಯಂ = ತೆಗೆದು-
ಕೊಳ್ಳತಕ್ಕದ್ದಲ್ಲ, ಅನಾಧೇಯಂ = ಆಧೇಯವಿಲ್ಲದ್ದು, ಅನಾಶ್ರಯಂ = ಆಧಾರ-
ವಿಲ್ಲದ್ದು ; [ಉಳಿದುದು ಹಿಂದಿನಂತೆಯೆ].
 
೪೬೬. ಬ್ರಹ್ಮವನ್ನು ಬಿಡುವುದಕ್ಕಾಗುವುದಿಲ್ಲ,[^೧] ತೆಗೆದುಕೊಳ್ಳುವುದ-
ಕ್ಕಾಗುವುದಿಲ್ಲ; ಅದಕ್ಕೆ ಆಧೇಯವಾಗಲಿ ಆಧಾರವಾಗಲಿ ಇಲ್ಲ; ಇದು
ಏಕವೂ ಅದ್ವಯವೂ ಆಗಿರುವುದು. ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ
ಇಲ್ಲ.
 
[^೧] ಏಕೆಂದರೆ ಇದು ಎಲ್ಲದರ ಆತ್ಮನಾಗಿರುವುದು.
[^೨] ಪ್ರಪಂಚವೇ ಇಲ್ಲದಿರುವುದರಿಂದ ಇದು ಯಾವುದಕ್ಕೂ ಆಧಾರವಾಗಲಾರದು.]
 
ನಿರ್ಗುಣಂ ನಿಷ್ಕಲಂ ಸೂಕ್ಷ್ಮಂ ನಿರ್ವಿಕಲ್ಪಂ ನಿರಂಜನಮ್ ।
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ ॥ ೪೬೭ ॥
 
ಬ್ರಹ್ಮ = ಬ್ರಹ್ಮವು, ನಿರ್ಗುಣಂ = ಗುಣರಹಿತವಾದದ್ದು, ನಿಷ್ಕಲಂ = ಅವಯವ-
ರಹಿತವಾದದ್ದು, ಸೂಕ್ಷ್ಮ = ಸೂಕ್ಷ್ಮವಾದದ್ದು, ನಿರ್ವಿಕಲ್ಪ = ವಿಕಲ್ಪರಹಿತ-
ವಾದದ್ದು, ನಿರಂಜನಂ = ಅಂಜನ-ರಹಿತವಾದದ್ದು ; [ಉಳಿದುದು ಹಿಂದಿನಂತೆಯೆ].
 
೪೬೭. ಬ್ರಹ್ಮವು ನಿರ್ಗುಣವೂ[^೧] ನಿಷ್ಕಲವೂ ಸೂಕ್ಷ್ಮವೂ ನಿರ್ವಿಕಲ್ಪವೂ
ನಿರಂಜನವೂ[^೨] ಏಕವೂ ಅದ್ವಯವೂ ಆಗಿರುವುದು. ಈ ಬ್ರಹ್ಮದಲ್ಲಿ ನಾನಾ-
ತ್ವವು ಸ್ವಲ್ಪವೂ ಇಲ್ಲ.
 
[^೧] ಪ್ರಾಣವೇ ಮೊದಲಾದ ಹದಿನಾರು ಕಲೆಗಳಿಲ್ಲದ್ದು.
[^೨] ಅವಿದ್ಯೆಯೆಂಬ ಆವರಣದಿಂದ ವರ್ಜಿತವಾದದ್ದು.]