This page has not been fully proofread.

೨೩೪
 
ವಿವೇಕಚೂಡಾಮಣಿ
 
೪೬೧-೪೬೨, ಮೂಲವಾದ ಅಜ್ಞಾನದೊಂದಿಗೆ ಅದರ ಕಾರ್ಯವು
ಜ್ಞಾನದಿಂದ ನಾಶವಾಗುವುದಾದರೆ 'ಈ ದೇಹವು ಹೇಗೆ ನಿಂತಿರುವುದು??
ಎಂದು ಸಂದೇಹಪಡುವ ಜಡರನ್ನು ಸಮಾಧಾನಪಡಿಸಲು ಶ್ರುತಿಯು ಬಾಹ್ಯ
ದೃಷ್ಟಿಯಿಂದ ಪ್ರಾರಬ್ದವನ್ನು ಹೇಳುತ್ತದೆಯೇ ಹೊರತು ಜ್ಞಾನಿಗಳಿಗೆ
ದೇಹವೇ ಮೊದಲಾದುವು ನಿಜವಾಗಿಯೂ ಇರುವುವೆಂದು ಉಪದೇಶಿಸು
ವುದಕ್ಕಲ್ಲ.
 
[೪೬೩
 
ಪರಿಪೂರ್ಣಮನಾದ್ಯಂತಮಪ್ರಮೇಯಮವಿಕ್ರಿಯಮ್ ।
ಏಕಮೇವಾದ್ವಯಂ ಬ್ರಹ್ಮ ದೇಹ ನಾನಾಸ್ತಿ ಕಿಂಚನ ॥ ೪೬೩ ।
 
ಬ್ರಹ್ಮ-ಬ್ರಹ್ಮವು ಪರಿಪೂರ್ಣ೦ ಪರಿಪೂರ್ಣವಾದುದು, ಅನಾದಿ. ಅಂತಂ= ಆದಿ.
ಅಂತಗಳಿಲ್ಲದ್ದು, ಅಪ್ರಮೇಯಂ ಪ್ರಮಾಣಗಳಿಗೆ ಗೋಚರವಲ್ಲದ್ದು, ಅವಿಕ್ರಿಯಂ
ವಿಕಾರವಿಲ್ಲದ್ದು, ಏಕಮ್ ಏವ = ಸಜಾತೀಯ ಭೇದವಿಲ್ಲದ್ದು, ಅದ್ವಯಂ=
ವಿಜಾತೀಯ ಭೇದವಿಲ್ಲದ್ದು ; ಇಹ – ಈ ಬ್ರಹ್ಮದಲ್ಲಿ ನಾನಾ - ನಾನಾತ್ವವು ಕಿಂಚನ
ಸ್ವಲ್ಪವೂ ನ ಅಸ್ತಿ ಇಲ್ಲ.
 
೪೬೩. ಬ್ರಹ್ಮವು ಪರಿಪೂರ್ಣವಾದದ್ದು, ಆದಿ ಅಂತಗಳಿಲ್ಲದ್ದು, ಪ್ರಮಾ
ಣಗಳಿಗೆ ಗೋಚರವಲ್ಲದ್ದು, ವಿಕಾರವಿಲ್ಲದ್ದು, ಸಜಾತೀಯ ಭೇದವಿಲ್ಲದ್ದು,
ವಿಜಾತೀಯ. ಭೇದವಿಲ್ಲದ್ದು; ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.
 
ಸದ್ಧನಂ ಚಿದ್ಧನಂ ನಿತ್ಯಮಾನಂದಘನಮಕ್ರಿಯಮ್ ।
ಏಕಮೇವಾದ್ವಯಂ ಬ್ರಹ್ಮ ದೇಹ ನಾನಾಸ್ತಿ ಕಿಂಚನ
 
ಬ್ರಹ್ಮ ಬ್ರಹ್ಮವು ಸದ್ ಘನಂ – ಸತ್- ಶರೀರವು, ಚಿದ್
ಶರೀರವು, ನಿತ್ಯಂ = ನಿತ್ಯವೂ ಆನಂದಘನಂ = ಆನಂದಶರೀರವು,
ನಿಷ್ಕ್ರಿಯವು; [ಉಳಿದುದು ೪೬೩ರಂತೆ],
 
॥ ೪೬೪ ॥
 
H
 
ನಂ ಚಿತ್.
ಅಕ್ಸಿಯಂ
 
೪೬೪, ಬ್ರಹ್ಮವು ಸಚ್ಛರೀರವು, ಚಿಚ್ಛರೀರವು, ನಿತ್ಯವೂ ಆನಂದಶರೀ
ರವು, ನಿಷ್ಕ್ರಿಯವು; 'ಏಕವೂ ಅದ್ವಯವೂ ಆಗಿರುವುದು; ಈ ಬ್ರಹ್ಮದಲ್ಲಿ
ನಾನಾತ್ವವು ಸ್ವಲ್ಪವೂ ಇಲ್ಲ.
 
[" ಎಂದರೆ ಸಚ್ಚಿದಾನಂದಸ್ವರೂಪವು.
 
ಪ್ರತ್ಯಗೇಕರಸಂ ಪೂರ್ಣಮನಂತಂ ಸರ್ವತೋಮುಖಮ್ ।
ಏಕಮೇವಾದ್ವಯಂ ಬ್ರಹ್ಮ ದೇಹ ನಾನಾಸ್ತಿ ಕಿಂಚನ ॥ ೪೬೫ ॥