This page has been fully proofread once and needs a second look.

ದಲ್ಲಿ ಕಂಡ ವಿಷಯದ ನೆನಪು ಹೇಗೋ ಹಾಗೆ ಬ್ರಹ್ಮವಿದನಿಗೆ ಊಟಮಾಡು-
ವುದು ಬಿಡುವುದು ಮೊದಲಾದುವುಗಳಲ್ಲಿ ನೆನಪು ಮಾತ್ರ ಇರುತ್ತದೆ.
 
ಕರ್ಮಣಾ ನಿರ್ಮಿತೋ ದೇಹಃ ಪ್ರಾರಬ್ಧಂ ತಸ್ಯ ಕಲ್ಪ್ಯತಾಮ್ ।
ನಾನಾದೇರಾತ್ಮನೋ ಯುಕ್ತಂ ನೈವಾತ್ಮಾ ಕರ್ಮ-ನಿರ್ಮಿತಃ ॥ ೪೫೭ ॥
 
ದೇಹಃ = ದೇಹವು, ಕರ್ಮಣಾ = ಕರ್ಮದಿಂದ, ನಿರ್ಮಿತಃ = ನಿರ್ಮಿತವಾಗಿದೆ;
ತಸ್ಯ = ಅದಕ್ಕೆ, ಪ್ರಾರಬ್ಧಂ = ಪ್ರಾರಬ್ಧವು, ಕಲ್ಪ್ಯತಾಂ = ಕಲ್ಪಿಸಲ್ಪಡಲಿ; [ಆದರೆ,
ಅನಾದೇಃ = ಅನಾದಿಯಾದ, ಆತ್ಮನಃ = ಆತ್ಮನಿಗೆ, ನ ಯುಕ್ತಂ = ಯುಕ್ತವಲ್ಲ.
ಆತ್ಮಾ= ಆತ್ಮನು, ಕರ್ಮ-ನಿರ್ಮಿತಃ ನ ಏವ = ಕರ್ಮದಿಂದ ನಿರ್ಮಿತನೇ ಆಗಿಲ್ಲ]
 
೪೫೭. ದೇಹವು ಕರ್ಮದಿಂದ ನಿರ್ಮಿತವಾಗಿದೆ; ಅದಕ್ಕೆ ಪ್ರಾರಬ್ಧ-
ವನ್ನು ಕಲ್ಪಿಸಬಹುದು. ಆದರೆ ಅನಾದಿಯಾದ ಆತ್ಮನಿಗೆ ಅದನ್ನು ಕಲ್ಪಿಸು-
ವುದು ಯುಕ್ತವಲ್ಲ; (ಏಕೆಂದರೆ) ಆತ್ಮನು ಕರ್ಮದಿಂದ ನಿರ್ಮಿತನೇ ಆಗಿಲ್ಲ.
 
ಅಜೋ ನಿತ್ಯಃ ಶಾಶ್ವತ ಇತಿ ಬ್ರೂತೇ ಶ್ರುತಿರಮೋಘವಾಕ್ ।
ತದಾತ್ಮನಾ ತಿಷ್ಠತೋಽಸ್ಯ ಕುತಃ ಪ್ರಾರಬ್ಧ-ಕಲ್ಪನಾ ॥ ೪೫೮ ॥
 
ಅಜಃ = - ಜನ್ಮರಹಿತನು, ನಿತ್ಯಃ = ನಿತ್ಯನು, ಶಾಶ್ವತಃ = ಶಾಶ್ವತನು, ಇತಿ =
ಎಂದು, ಅಮೋಘವಾಕ್ = ಸತ್ಯವಚನವುಳ್ಳ, ಶ್ರುತಿಃ = ಶ್ರುತಿಯು, ಬ್ರೂತೇ =
ಹೇಳುತ್ತದೆ; ತದಾತ್ಮನಾ = ಆ ಆತ್ಮಸ್ವರೂಪದಿಂದ, ತಿಷ್ಠತಃ = ಇರುತ್ತಿರುವ, ಅಸ್ಯ =
ಇವನಿಗೆ, ಪ್ರಾರಬ್ಧ-ಕಲ್ಪನಾ = ಪ್ರಾರಬ್ಧದ ಕಲ್ಪನೆಯು, ಕುತಃ = ಎಲ್ಲಿಂದ ಬರುವುದು?
 
೪೫೮,. (ಆತ್ಮನು) ಜನ್ಮರಹಿತನು ನಿತ್ಯನು ಶಾಶ್ವತನು--ಎಂದು ಸತ್ಯ
ವಚನವುಳ್ಳ ಶ್ರುತಿಯು ಹೇಳುತ್ತದೆ.[^೧] ಆ ಆತ್ಮಸ್ವರೂಪದಿಂದ ಇರುತ್ತಿರುವ
ಯೋಗಿಗೆ ಪ್ರಾರಬ್ಧದ ಸಂಬಂಧ ಎಲ್ಲಿಂದ ಬರುವುದು?
 
[^೧] ಅಜೋ ನಿತ್ಯಃ ಶಾಶ್ವತೋsಯಂ ಪುರಾಣಃ (ಕಠ ಉ. ೧. ೨. ೧೮).]
 
ಪ್ರಾರಬ್ಧಂ ಸಿಧ್ಯತಿ ತದಾ ಯದಾ ದೇಹಾತ್ಮನಾ ಸ್ಥಿತಿಃ ।
ದೇಹಾತ್ಮಭಾವೋ ನೈವೇಷ್ಟಃ ಪ್ರಾರಬ್ಧಂ ತ್ಯಜತಾಮತಃ ॥ ೪೫೯ ॥
 
ಯದಾ = ಯಾವಾಗ, ದೇಹ-ಆತ್ಮನಾ = ದೇಹಾತ್ಮಭಾವದಿಂದ, ಸ್ಥಿತಿಃ = ಸ್ಥಿತಿಯು,
[ಇರುವುದೋ] ತದಾ = ಆಗ, ಪ್ರಾರಬ್ಧಂ = ಪ್ರಾರಬ್ಧವು, ಸಿಧ್ಯತಿ = ಸಿದ್ಧಿಸುವುದು;
ದೇಹಾತ್ಮಭಾವಃ = ದೇಹಾತ್ಮಭಾವವು, ನ ಏವ ಇಷ್ಟಃ = ಇಷ್ಟವೇ ಇಲ್ಲ; ಆತಃ =
ಆದುದರಿಂದ, ಪ್ರಾರಬ್ಧಂ = ಪ್ರಾರಬ್ಧವು, ತ್ಯಜತಾಂ = ಬಿಡಲ್ಪಡಲಿ.