This page has not been fully proofread.

ವಿವೇಕಚೂಡಾಮಣಿ
 
'ನನ್ನದು' 'ಇದು' ಎಂಬ ಭಾವನೆಯನ್ನು ಮಾಡುವುದಿಲ್ಲ; ಮತ್ತೇನೆಂದರೆ
ತನ್ನ ಸ್ವರೂಪದಲ್ಲಿಯೇ ಎಚ್ಚತ್ತಿರುತ್ತಾನೆ.
 
೪೫೬]
 
೨೩೧
 
ನ ತಸ್ಯ ಮಿಥ್ಯಾರ್ಥಸಮರ್ಥನೇಚ್ಛಾ
ನ ಸಂಗ್ರಹಸ್ತಜ್ಜಗತೋsಪಿ ದೃಷ್ಟಃ ।
ತತ್ರಾನುವೃತ್ತಿರ್ಯದಿ ಚೇನ್ಮಷಾರ್ಥ
 
ನ ನಿದ್ರಯಾ ಮುಕ್ತ ಇತೀಷ್ಯತೇ ಧ್ರುವಮ್ ॥ ೪೫೫ ॥
ತಸ್ಯ-ಅವನಿಗೆ ಮಿಥ್ಯಾರ್ಥ ಸಮರ್ಥನ. ಇಚ್ಛಾ = ಮಿಥ್ಯಾ ವಸ್ತುಗಳ ಸಮರ್ಥನ
ದಲ್ಲಿ ಬಯಕೆಯು ನ - ಇರುವುದಿಲ್ಲ; ತಜ್ಜ ಗತಃ -
$ = ಆ ಸ್ವಪ್ನಜಗತ್ತಿನ ಸಂಗ್ರಹಃ
ಆಪಿ ಸಂಗ್ರಹವೂ ಕೂಡ ನ ದೃಷ್ಟಃ = ಕಂಡುಬರುವುದಿಲ್ಲ; ತತ್ರ ಮೃಷಾರ್ಥ-
ಆ ಅನೃತವಸ್ತುವಿನಲ್ಲಿ ಅನುವೃತ್ತಿಃ ಚೇತ್ ಯದಿ - ಅನುವರ್ತನವಿದ್ದರೆ ಸಃ =
ಅವನು ನಿದ್ರಯಾ - ನಿದ್ರೆಯಿಂದ ನ ಮುಕ್ತಃ ಇತಿ - ಬಿಡಲ್ಪಟ್ಟ ವನಲ್ಲವೆಂದು
ಇಪ್ಯತೇ - ತಿಳಿಯಲ್ಪಡುತ್ತದೆ, ಧ್ರುವಂ = ಇದು ನಿಶ್ಚಯವು.
 
೪೫೫, ಅವನಿಗೆ ಮಿಥ್ಯಾವಸ್ತುಗಳ ಸಮರ್ಥನದಲ್ಲಿ ಬಯಕೆಯು ಇರುವು
ದಿಲ್ಲ; ಆ ಸ್ವಪ್ನ ಜಗತ್ತಿನ ಸಂಗ್ರಹವೂ ಕೂಡ ಕಂಡುಬರುವುದಿಲ್ಲ. ಆ
ಅನೃತವಸ್ತುವಿನಲ್ಲಿ ಅನುವರ್ತನವಿದ್ದರೆ ಅವನು ನಿದ್ರೆಯಿಂದ ಎಚ್ಚತ್ತಿಲ್ಲವೆಂದು
ತಿಳಿಯಲ್ಪಡುತ್ತದೆ. ಇದು ನಿಶ್ಚಯವು.
 
ತದ್ವತ್ ಪರೇ ಬ್ರಹ್ಮಣಿ ವರ್ತಮಾನ
ಸದಾತ್ಮನಾ ತಿಷ್ಯತಿ ನಾನ್ಯ ದೀಕ್ಷತೇ ।
ಸ್ಮೃತಿರ್ಯಥಾ ಸ್ವಪ್ನವಿಲೋಕಿತಾರ್ಥ
 
ತಥಾ ವಿದಃ ಪ್ರಾಶನ-ಮೋಚನಾದ್
 
॥ ೪೫೬ ॥
 
ತದ್ವತ್ , ಹಾಗೆಯೇ ಪರೇ ಬ್ರಹ್ಮಣಿ = ಪರಬ್ರಹ್ಮದಲ್ಲಿ ವರ್ತಮಾನಃ -
ಇರುವವನು ಸದಾತ್ಮನಾ = ಬ್ರಹ್ಮಭಾವದಿಂದಲೇ ತಿಷ್ಠತಿ - ಇರುತ್ತಾನೆ, ಅನ್ಯತ್ =
ಬೇರೆ ಯಾವುದನ್ನೂ ನ ಈಕ್ಷತೇ = ನೋಡುವುದಿಲ್ಲ; ಸ್ವಪ್ನ ವಿಲೋಕಿತ ಅರ್ಥ-
ಸ್ವಪ್ನದಲ್ಲಿ ಕಂಡ ವಿಷಯದಲ್ಲಿ ಸ್ಮೃತಿಃ – ನೆನಪು ಯಥಾ - ಹೇಗೋ
ಹಾಗೆಯೇ ವಿದಃ = ಬ್ರಹ್ಮವಿದನಿಗೆ ಪ್ರಾಶನ ಮೋಚನ. ಆದ್
ಬಿಡುವುದು ಮೊದಲಾದುವುಗಳಲ್ಲಿ [ನೆನಪು ಮಾತ್ರ ಇರುತ್ತದೆ]
 
ತಥಾ -
ಊಟಮಾಡುವುದು
 
೪೫೬. ಹಾಗೆಯೇ ಪರಬ್ರಹ್ಮದಲ್ಲಿ ಲೀನವಾದ ಮನಸ್ಸುಳ್ಳವನು ಬ್ರಹ್ಮ
ಭಾವದಿಂದಲೇ ಇರುತ್ತಾನೆ, ಬೇರೆ ಯಾವುದನ್ನೂ ನೋಡುವುದಿಲ್ಲ. ಸ್ವಪ್ನ