This page has been fully proofread once and needs a second look.

ವನ್ನು ಅರಿತುಕೊಂಡಾಗ ಜ್ಞಾನಿಗೂ ಹಾಗೆಯೇ (ಸಂಸಾರವೃತ್ತಿಯು ಹಿಂಜರಿ-
ಯುತ್ತದೆ).
 
ನಿದಿಧ್ಯಾಸನಶೀಲಸ್ಯ ಬಾಹ್ಯ ಪ್ರತ್ಯಯ ಈಕ್ಷ್ಯತೇ ।
ಬ್ರವೀತಿ ಶ್ರುತಿರೇತಸ್ಯ ಪ್ರಾರಬ್ಧಂ ಫಲದರ್ಶನಾತ್ ॥ ೪೪೪ ॥
 
ನಿದಿಧ್ಯಾಸನ-ಶೀಲಸ್ಯ = ನಿದಿಧ್ಯಾಸನವನ್ನು ಮಾಡುತ್ತಿರುವವನಿಗೆ, ಬಾಹ್ಯ
ಪ್ರತ್ಯಯಃ = ಬಾಹ್ಯ ವಿಷಯಗಳ ಜ್ಞಾನವು, ಈಕ್ಷ್ಯತೇ = ಕಂಡುಬರುತ್ತದೆ; ಶ್ರುತಿಃ =
ಶ್ರುತಿಯು, ಏತಸ್ಯ = ಇವನಿಗೆ-- ಫಲದರ್ಶನಾತ್ = ಕರ್ಮಫಲವು ಕಂಡುಬರುತ್ತಿರು-
ವುದರಿಂದ-- ಪ್ರಾರಬ್ಧಂ = ಪ್ರಾರಬ್ಧ ಕರ್ಮವನ್ನು, ಬ್ರವೀತಿ = ಹೇಳುತ್ತದೆ.
 
೪೪೪. ಸಮಾಧಿಶೀಲವಾದ ಜ್ಞಾನಿಗೆ ಬಾಹ್ಯ ವಿಷಯಗಳ ಜ್ಞಾನವು[^೧]
ಕಂಡುಬರುತ್ತದೆ. ಹೀಗೆ ಅವನಿಗೆ ಕರ್ಮಫಲದ ಅನುಭವವು ಕಂಡುಬರು-
ತ್ತಿರುವುದರಿಂದ ಪ್ರಾರಬ್ಧ ಕರ್ಮವಿದೆಯೆಂದು[^೨] ಶ್ರುತಿಯು ಹೇಳುತ್ತದೆ.[^೩]
 
[^೧] ಉಪದೇಶ ಭೋಜನ ಇವೇ ಮೊದಲಾದ ವ್ಯವಹಾರ.
[^೨] ೪೫೦ನೆಯ ಶ್ಲೋಕವನ್ನು ನೋಡಿ.
[^೩] 'ಅವನಿಗೆ ಎಲ್ಲಿಯವರೆಗೆ ಮೋಕ್ಷವಾಗುವುದಿಲ್ಲವೋ ಅಲ್ಲಿಯವರೆಗೆ ವಿಳಂಬ'
ತಸ್ಯ ತಾವದೇವ ಚಿರಂ ಯಾವನ್ನ ವಿಮೋಕ್ಷ್ಯೇ (ಛಾಂದೋಗ್ಯ ಉ. ೬. ೧೪, ೨). ]
 
ಸುಖಾದ್ಯನುಭವೋ ಯಾವತ್ ತಾವತ್ ಪ್ರಾರಬ್ಧಮಿಷ್ಯತೇ ।
ಫಲೋದಯಃ ಕ್ರಿಯಾಪೂರ್ವೋ ನಿಷ್ಕ್ರಿಯೋ ನ ಹಿ ಕುತ್ರಚಿತ್ ॥ ೪೪೫ ॥
 
ಸುಖಾದಿ-ಅನುಭವಃ = ಸುಖಾದಿಗಳ ಅನುಭವವು, ಯಾವತ್ = ಎಲ್ಲಿಯ-
ವರೆಗೆ ಇರುವುದೊ, ತಾವತ್ = ಅಲ್ಲಿಯವರೆಗೆ, ಪ್ರಾರಬ್ಧಂ = ಪ್ರಾರಬ್ಧವು, ಇಷ್ಯತೇ =
ಇರುವುದೆಂದು ಸ್ವೀಕರಿಸಲ್ಪಟ್ಟಿದೆ; ಹಿ = ಏಕೆಂದರೆ, ಫಲೋದಯಃ = ಫಲೋತ್ಪತ್ತಿಯು,
ಕ್ರಿಯಾಪೂರ್ವಃ = ಕರ್ಮವನ್ನು ಮೊದಲೇ ಹೊಂದಿರಬೇಕು, ಕುತ್ರಚಿತ್ = ಎಲ್ಲಿಯೂ,
ನಿಷ್ಕ್ರಿಯಃ = ಕರ್ಮವಿಲ್ಲದೆ, ನ = ಆಗುವುದಿಲ್ಲ.
 
೪೪೫. ಸುಖದುಃಖಾದಿಗಳ ಅನುಭವವು ಎಲ್ಲಿಯವರೆಗೆ ಇರುವುದೊ
ಅಲ್ಲಿಯವರೆಗೆ ಪ್ರಾರಬ್ಧ ಕರ್ಮವನ್ನು ಒಪ್ಪಿಕೊಳ್ಳಬೇಕು; ಏಕೆಂದರೆ ಫಲ-
ವುಂಟಾಗುವುದಕ್ಕೆ ಮೊದಲು ಕರ್ಮವು ಕಾರಣವಾಗಿರಬೇಕು. ಎಲ್ಲಿಯೂ
ಕರ್ಮವಿಲ್ಲದೆ ಫಲವುಂಟಾಗಲಾರದು.