This page has been fully proofread once and needs a second look.

೪೨೫. ಯಾವನು ಬ್ರಹ್ಮದಲ್ಲಿಯೇ ಅಂತಃಕರಣವನ್ನು ಲಯಮಾಡಿ-
ಕೊಂಡು ಸರ್ವವಿಕಾರ-ರಹಿತನಾಗಿ ಸರ್ವಕರ್ಮರಹಿತನಾಗಿ ಯಾವಾಗಲೂ
ಆನಂದವನ್ನು ಹೊಂದಿರುವನೋ ಆ ಯತಿಯು ಸ್ಥಿತಪ್ರಜ್ಞನು.
 
ಬ್ರಹ್ಮಾತ್ಮನೋಃ ಶೋಧಿತಯೋರೇಕಭಾವಾವಗಾಹಿನೀ ।
ನಿರ್ವಿಕಲ್ಪಾ ಚ ಚಿನ್ಮಾತ್ರಾ ವೃತ್ತಿಃ ಪ್ರಜ್ಞೆತಿ ಕಥ್ಯತೇ ।
ಸುಸ್ಥಿತಾಽಸೌ ಭವೇದ್ಯಸ್ಯ ಸ್ಥಿತಪ್ರಜ್ಞಃ ಸ ಉಚ್ಯತೇ ॥ ೪೨೬ ॥
 
ಶೋಧಿತಯೋಃ = ಶೋಧಿಸಲ್ಪಟ್ಟ, ಬ್ರಹ್ಮಾತ್ಮನೋಃ = ಪರಮಾತ್ಮ-ಜೀವಾತ್ಮರ,
ಏಕಭಾವ-ಅವಗಾಹಿನೀ = ಐಕ್ಯಭಾವವನ್ನು ಗ್ರಹಿಸುವ, ನಿರ್ವಿಕಲ್ಪಾ = ನಿರ್ವಿಕಲ್ಪ-
ವಾದ, ಚಿನ್ಮಾತ್ರಾ ಚ = ಚಿನ್ಮಾತ್ರವಾದ, ವೃತ್ತಿಃ = ವೃತ್ತಿಯು, ಪ್ರಜ್ಞಾ ಇತಿ = ಪ್ರಜ್ಞೆ-
ಯೆಂದು, ಕಥ್ಯತೇ = ಹೇಳಲ್ಪಡುತ್ತದೆ; ಯಸ್ಯ = ಯಾವನಿಗೆ, ಅಸೌ = ಈ ಪ್ರಜ್ಞೆಯು,
ಸುಸ್ಥಿತಾ ಭವೇತ್ = ಸ್ಥಿರವಾಗಿರುವುದೊ, ಸಃ = ಅವನು, ಸ್ಥಿತಪ್ರಜ್ಞಃ = ಸ್ಥಿತಪ್ರಜ್ಞ-
ನೆಂದು, ಉಚ್ಯತೇ = ಹೇಳಲ್ಪಡುತ್ತಾನೆ.
 
೪೨೬. (ತತ್, ತ್ವಮ್ ಎಂಬ ಪದಗಳಿಗೆ ವಾಚ್ಯರಾಗಿರುವ) ಪರ-
ಮಾತ್ಮ, ಜೀವಾತ್ಮ-- ಇವರನ್ನು ಶೋಧಿಸಿ[^೧] ಐಕ್ಯಭಾವವನ್ನು ಗ್ರಹಿಸುವ,
ನಿರ್ವಿಕಲ್ಪವೂ ಚಿನ್ಮಾತ್ರವೂ ಆದ ವೃತ್ತಿಯು ಪ್ರಜ್ಞೆ ಎಂದು ಹೇಳಲ್ಪಡು-
ತ್ತದೆ. ಯಾವನಿಗೆ ಈ ಪ್ರಜ್ಞೆಯು ಸ್ಥಿರವಾಗಿರುವುದೋ ಅವನು ಸ್ಥಿತಪ್ರಜ್ಞನು
ಎನಿಸುತ್ತಾನೆ.
 
[^೧] ೨೪೧ನೆಯ ಶ್ಲೋಕವನ್ನು ನೋಡಿ.]
 
ಯಸ್ಯ ಸ್ಥಿತಾ ಭವೇತ್ ಪ್ರಜ್ಞಾ ಯಸ್ಕಾನಂದೋ ನಿರಂತರಃ ।
ಪ್ರಪಂಚೋ ವಿಸ್ಮೃತಪ್ರಾಯಃ ಸ ಜೀವನ್ಮುಕ್ತ ಇಷ್ಯತೇ ॥ ೪೨೭ ॥
 
ಯಸ್ಯ = ಯಾವನ, ಪ್ರಜ್ಞಾ = ಪ್ರಜ್ಞೆಯು, ಸ್ಥಿತಾ ಭವೇತ್ = ಸ್ಥಿತವಾಗಿರು-
ವುದೊ, ಯಸ್ಯ = ಯಾವನ, ಆನಂದಃ = ಆನಂದವು, ನಿರಂತರಃ = ನಿರಂತರವಾಗಿರು-
ವುದೊ, [ಯಾವನಿಗೆ] ಪ್ರಪಂಚಃ = ಪ್ರಪಂಚವು, ವಿಸ್ಮೃತಪ್ರಾಯಃ = ಮರೆತು-
ಹೋದಂತೆ ಆಗಿರುವುದೊ, ಸಃ = ಅವನು, ಜೀವನ್ಮುಕ್ತಃ = ಜೀವನ್ಮುಕ್ತನೆಂದು, ಇಷ್ಯತೇ =
ಹೇಳಲ್ಪಡುತ್ತಾನೆ.
 
೪೨೭. ಯಾವನ ಪ್ರಜ್ಞೆಯು ಸ್ಥಿತವಾಗಿರುವುದೊ ಯಾವನ ಆನಂದವು
ನಿರಂತರವಾಗಿರುವುದೋ ಯಾವನಿಗೆ ಪ್ರಪಂಚವು ಮರೆತುಹೋದಂತೆ ಆಗಿರು-
ವುದೊ ಅವನು ಜೀವನ್ಮುಕ್ತನು ಎನಿಸುತ್ತಾನೆ.