This page has not been fully proofread.

ವಿವೇಕಚೂಡಾಮಣಿ
 
ಬ್ರಹ್ಮಾಕಾರತಯಾ ಸದಾ ಸ್ಥಿತತಯಾ ನಿರ್ಮುಕ್ತ-ಬಾಹ್ಯಾರ್ಥಧೀ
ರನ್ಯಾವೇದಿತ-ಭೋಗ್ಯಭೋಗ-ಕಲನೋ ನಿದ್ರಾಲುವಾಲವತ್ ।
ಸ್ವಪ್ಯಾಲೋಕಿತ ಲೋಕವಜ್ಜಗದಿದಂ ಪಶ್ಯನ್ ಕ್ವಚಿಲ್ಲ ಬಧೀ
ರಾಸ್ತೆ ಕಶ್ಚಿದನಂತ-ಪುಣ್ಯ ಫಲಭುಗ್ ಧನ್ಯಃ ಸ ಮಾನೆ ಭುವಿ
 
॥ ೪೨೪ ॥
 
೨೧೮
 
[
 
ಬ್ರಹ್ಮಾಕಾರತಯಾ - ಬ್ರಹ್ಮರೂಪದಿಂದಲೇ ಸದಾ = ಯಾವಾಗಲೂ ಸ್ಥಿತ.
ತಯಾ ಇರುವುದರಿಂದ ನಿರ್ಮುಕ್ತ. ಬಾಹ್ಯ. ಅರ್ಥ ಧೀಃ = ಬಾಹ್ಯ ವಿಷಯಗಳ
ಜ್ಞಾನವೇ ಇಲ್ಲದವನಾಗಿ, ನಿದ್ರಾಲುವತ್ = ನಿದ್ರೆಯುಳ್ಳವನಂತೆ ಬಾಲವತ್
ಮಗುವಿನಂತೆ ಅನ್ಯ. ಆವೇದಿತ ಭೋಗ್ಯ-ಭೋಗಕಲನಃ = ಇತರರಿಂದ ತಿಳಿಸಲ್ಪಟ್ಟ
ಭೋಗ್ಯವಸ್ತುಗಳ ಅನುಭವವುಳ್ಳವನಾಗಿ, ಇದಂ ಜಗತ್ – ಈ ಜಗತ್ತನ್ನು ಸ್ವಪ್ನ.
ಆಲೋಕಿತ. ಲೋಕವತ್ - ಕನಸಿನಲ್ಲಿ ನೋಡಲ್ಪಟ್ಟ ಲೋಕದಂತೆ ಪಶ್ಯನ್ -
ನೋಡುವವನಾಗಿ, ಕ್ವಚಿತ್ = ಯಾವಾಗಲೋ ಲಬ್ಧ ಧೀಃ = ಎಚ್ಚರಗೊಂಡವನಾಗಿ,
ಅನಂತ ಪುಣ್ಯಫಲ ಭುಕ್ - ಅನಂತಪುಣ್ಯಫಲವನ್ನು ಅನುಭವಿಸುವ ಕಶ್ಚಿತ್ -
ಯಾವನೋ ಒಬ್ಬನು ಆಸ್ತೇ = ಇರುತ್ತಾನೆ; ಸಃ = ಅವನು ಭುವಿ = ಭೂಲೋಕದಲ್ಲಿ
ಧನ್ಯಃ – ಧನ್ಯನು ಮಾನ್ಯಃ – ಮಾನ್ಯನು.
 

 
೪೨೪. ಬ್ರಹ್ಮರೂಪದಿಂದಲೇ ಯಾವಾಗಲೂ ಇರುವುದರಿಂದ ಬಾಹ್ಯ
ವಿಷಯಗಳ ಜ್ಞಾನವೇ ಇಲ್ಲದವನಾಗಿ, ನಿದ್ರಿಸುತ್ತಿರುವವನಂತೆ, ಮಗುವಿನಂತೆ
ಇತರರಿಂದ ಕೊಡಲ್ಪಟ್ಟ ಭೋಗ್ಯವಸ್ತುಗಳನ್ನು ಅನುಭವಿಸುತ್ತ, ಈ ಜಗತ್ತನ್ನು
ಕನಸಿನಲ್ಲಿ ಕಾಣುವ ಲೋಕದಂತೆ ನೋಡುತ್ತ, ಯಾವಾಗಲೋ ಒಮ್ಮೆ
ಬಹಿರ್ಮುಖವಾದ ಜ್ಞಾನವುಳ್ಳವನಾಗಿ ಅನಂತ ಪುಣ್ಯ ಫಲವನ್ನು ಅನುಭವಿ
ಸುವ ಯಾವನೋ ಒಬ್ಬನು ಇರುತ್ತಾನೆ; ಭೂಲೋಕದಲ್ಲಿ ಅವನೇ ಧನ್ಯನು
ಮತ್ತು ಮಾನ್ಯನು.
 
ಸ್ಥಿತಪ್ರಜ್ಞ ಯತಿರಯಂ ಯಃ ಸದಾನಂದಮಶ್ನುತೇ ।
ಬ್ರಹ್ಮಣ್ಯವ ವಿಲೀನಾತ್ಮಾ ನಿರ್ವಿಕಾರೋ ವಿನಿಪ್ರಿಯಃ ॥ ೪೨೫ ॥
 
ಯಃ - ಯಾವನು ಬ್ರಹ್ಮಣಿ ಏವ = ಬ್ರಹ್ಮದಲ್ಲಿಯೇ ವಿಲೀನಾತ್ಮಾ = ಲಯ
ವಾದ ಅಂತಃಕರಣವುಳ್ಳವನೂ ನಿರ್ವಿಕಾರಃ - ನಿರ್ವಿಕಾರನೊ ವಿನಿಷ್ಕ್ರಿಯಃ
ನಿಷ್ಕ್ರಿಯನೊ ಸದಾ- ಯಾವಾಗಲೂ ಆನಂದಮ್ ಅನ್ನು ತೇ = ಆನಂದವನ್ನು
ಹೊಂದಿರುವನೋ ಅಯಂ = ಈ ಯತಿಃ = ಯತಿಯು ಸ್ಥಿತಪ್ರಜ್ಞಃ = ಸ್ಥಿತಪ್ರಜ್ಞನು,