This page has been fully proofread once and needs a second look.

೪೨೩]
 
ವಿವೇಕಚೂಡಾಮಣಿ
 
ಅಜ್ಞಾನ-ಹೃದಯಗ್ರಂಥೇರ್ವಿನಾಶೋ
ಅನಿಚೂರ್ವಿಷಯಃ ಕಿ೦ ನು ಪ್ರವೃ ಕಾರಣಂ ಸ್ವತಃ
 
ಯದ್ಯಶೇಷತಃ
 
೨೧೭
 

ಅನಿಚ್ಛೋರ್ವಿಷಯಃ ಕಿಂ ನು ಪ್ರವೃತ್ತೇಃ ಕಾರಣಂ ಸ್ವತಃ
॥ ೪೨೨ ॥
 
"

 
ಅಜ್ಞಾನ-ಹೃದಯ- ಗ್ರಂಥಃ -ಥೇಃ = ಅಜ್ಞಾನವೆಂಬ ಹೃದಯದ ಗ್ರಂಥಿಯ
,
ವಿನಾಶಃ := ವಿನಾಶವು, ಅಶೇಷತಃ ಯದಿ = ಸಂಪೂರ್ಣವಾಗಿ ಉಂಟಾದರೆ [ಆಗ}
],
ಅನಿಚ್ಛಃ-ಛೋಃ=ಇಚ್ಛಿಸದವನಿಗೆ, ವಿಷಯಃ -= ವಿಷಯವು, ಸ್ವತಃ= ತಾನೇ, ಪ್ರವೃತ್ತೇಃ =

ಪ್ರವೃತ್ತಿಗೆ, ಕಾರಣಂ ಕಿಂ ನು= ಕಾರಣವಾಗುತ್ತದೆಯೇ?
 

 
೪೨೨. ಅಜ್ಞಾನವೆಂಬ ಹೃದಯಗ್ರಂಥಿಯು ಸಂಪೂರ್ಣವಾಗಿ ನಾಶ
-
ವಾಗಿದ್ದರೆ ಯಾವುದನ್ನೂ ಇಚ್ಛಿಸದವನಿಗೆ ವಿಷಯವು ತಾನಾಗಿಯೇ ಪ್ರವೃತ್ತಿಗೆ

ಕಾರಣವಾಗುತ್ತದೆಯೇ?
 

 
ವಾಸನಾಽನುದಯೋ ಭೋಗ್ಯೇ ವೈರಾಗ್ಯಸ್ಯ ತದಾವಧಿಃ ।

ಅಹಂಭಾವೋದಯಾಭಾವೋ ಬೋಧಸ್ಯ ಪರಮಾವಧಿಃ ।

ಲೀನವೃತ್ತೇರನುತ್ಪತ್ತಿರ್ಮಯರ್ಾರ್ಯಾದೋಪರತೇಸ್ತು ಸಾ ॥ ೪೨೩
 
||
 
[ಯದಾ -= ಯಾವಾಗ] ಭೋಗ್ಯ -ಯೇ = ವಿಷಯಭೋಗದಲ್ಲಿ, ವಾಸನಾ -ಅನು.
-
ದಯಃ -= ವಾಸನೆಯು ಉಂಟಾಗುವುದಿಲ್ಲವೊ, ತದಾ.= ಆಗ, ವೈರಾಗ್ಯಸ್ಯ= ವೈರಾಗ್ಯದ
,
ಅವಧಿಃ -= ಎಲ್ಲೆಯು; ಅಹಂಭಾವ. -ಉದಯ. -ಅಭಾವಃ -= ಅಹಂಕಾರೋದಯದ

ಶೂನ್ಯತೆಯೇ, ಬೋಧಸ್ಯ -= ಜ್ಞಾನದ, ಪರಮಾವಧಿಃ= ಕೊನೆಯ ಎಲ್ಲೆಯು; ಲೀನ
-
ವೃತ್ತ -ತೇಃ = ಲಯವಾದ ಅಂತಃಕರಣವೃತ್ತಿಯ, ಸಾ ಅನುತ್ಪತ್ತಿ -ತಿಃ = ಆ ಅನುತ್ಪತ್ತಿಯೇ
,
ಉಪರತೇಃ = ಉಪರತಿಯ, ಮರ್ಯಾದಾ -= ಎಲ್ಲೆಯು.
 
=>
 

 
೪೨೩. ಯಾವಾಗ ವಿಷಯಭೋಗದಲ್ಲಿ ವಾಸನೆಯು ಉಂಟಾಗುವು
-
ದಿಲ್ಲವೋ ಆಗ ವೈರಾಗ್ಯದ ಎಲ್ಲೆಯನ್ನು ಸೇರಿದಂತಾಗುವುದು; ಅಹಂಭಾವವು

ಉಂಟಾಗದಿರುವುದೇ ಜ್ಞಾನದ ಕೊನೆಯ ಎಲ್ಲೆ; ಮತ್ತು ಲಯವಾದ ಅಂತಃ
-
ಕರಣವೃತ್ತಿಯು ಪುನಃ ಉತ್ಪನ್ನವಾಗದಿರುವುದೇ ಉಪರತಿಯ ಎಲ್ಲೆಯು.
 

 
['ಬ್ರಹ್ಮಲೋಕವನ್ನು ತೃಣವೆಂದು ಭಾವಿಸುವುದು ವೈರಾಗ್ಯದ ಎಲ್ಲೆಯು; ದೇಹಾ
-
ತ್ಮದ ಐಕ್ಯದಂತೆ ಜೀವ -ಪರಮಾತ್ಮರ ಐಕ್ಯವಾದಾಗ ಜ್ಞಾನವು ಸಮಾಪ್ತಿಯನ್ನು

ಹೊಂದುತ್ತದೆ; ಸುಷುಪ್ತಿಯಲ್ಲಿರುವ ಹಾಗೆ ದೈದ್ವೈತಪ್ರಪಂಚವು ಲಯವಾಗುವುದು

ಉಪರತಿಯ ಎಲ್ಲೆಯು' ಬ್ರಹ್ಮಲೋಕ -ತೃಣೀಕಾರೋ ವೈರಾಗ್ಯ ಸಾಸ್ಯಾವಧಿರ್ಮತಃ
|
ದೇಹಾತ್ಮವತ್ ಪರಾತ್ಮತ್ವ. -ದಾರ್ಥ್ಡ್ಯೇ ಬೋಧಃ ಸಮಾಪ್ಯತೇ || ಸುಪ್ತನನ್
ತಿವದ್
ವಿಸ್ಮೃತಿಃ ಸೀಮಾ ಭವೇದುಪರಮಸ್ಯ ಹಿ! | (ಪಂಚದಶಿಯ ಚಿತ್ರದೀಪಪ್ರಕರಣ-

೨೮೫-೨೮೬). ]