This page has not been fully proofread.

[
 
ದುಃಖೇಷು ಪ್ರಾಪ್ತವಾದ ದುಃಖಗಳಲ್ಲಿ ಅನುದ್ವೇಗಃ ಉದ್ವೇಗವಿಲ್ಲ
ದಿರುವುದು ವಿದ್ಯಾಯಾಃ – ಜ್ಞಾನದ ಪ್ರಸ್ತುತಂ – ಮುಖ್ಯವಾದ ಫಲಂ - ಫಲವು;
ಭ್ರಾಂತಿ ವೇಲಾಯಾಂ = ಭ್ರಾಂತಿಯ ಕಾಲದಲ್ಲಿ ಜುಗುಪ್ಪಿತಂ - ಅಸಹ್ಯಕರವಾದ
ಯತ್ - ಯಾವ ನಾನಾ ಕರ್ಮ, ಅನೇಕ ವಿಧವಾದ ಕರ್ಮವು ಕೃತಂ = ಮಾಡಲ್ಪ
ಟಿತೊ ತತ್, ಅದನ್ನು ಪಶ್ಚಾತ್ . ಅನಂತರ ವಿವೇಕೇನ - ವಿವೇಕದಿಂದ ನರಃ -
ಮನುಷ್ಯನು ಕರ್ತುಂ = ಮಾಡಲು ಕಥಮ್ ಅರ್ಹತಿ ಹೇಗೆ ಯೋಗ್ಯನಾಗುತ್ತಾನೆ?
 
೨೧೬
 
ವಿವೇಕಚೂಡಾಮಣಿ
 
೪೨೦. ದುಃಖಗಳು ಪಾಪ್ತವಾದಾಗ ಉದ್ವೇಗಪಡದಿರುವುದೇ ಜ್ಞಾನದ
ಮುಖ್ಯವಾದ ಫಲವು. ಮನುಷ್ಯನು ಭ್ರಾಂತಿಯ ಕಾಲದಲ್ಲಿ ಯಾವ ಅಸಹ್ಯ
ಕರವಾದ ನಾನಾ ಕರ್ಮವನ್ನು ಮಾಡಿದ್ದರೂ ಅದನ್ನು ಅನಂತರ ವಿವೇಕ
ವಿರುವಾಗಲೂ ಹೇಗೆ ತಾನೇ ಮಾಡಿಯಾನು?
 
ವಿದ್ಯಾಫಲಂ ಸ್ವಾದಸತೋ ನಿವೃತ್ತಿ
ಪ್ರವೃತ್ತಿರಜ್ಞಾನಫಲಂ ತದೀಕ್ಷಿತಮ್ ।
ತಜ್ಞಾಜ್ಞಯೋರ್ಯಗತೃಷ್ಠಿ ಕಾದ್
 
ನೋಚೇದ್ವಿದಾಂ ದೃಷ್ಟ ಫಲಂ ಕಿಮಸ್ಮಾತ್ ॥ ೪೨೧ ॥
ಅಸತಃ - ಅಸದ್ವಸ್ತುವಿನಿಂದ ನಿವೃತ್ತಿಃ - ಹಿಂತಿರುಗುವುದೇ ವಿದ್ಯಾಫಲಂ
ಸ್ಯಾತ್ - ಜ್ಞಾನದ ಫಲವಾಗುತ್ತದೆ; ಪ್ರವೃತ್ತಿಃ - [ಅಸದ್ವಸ್ತುವಿನಲ್ಲಿ ಪ್ರವೃತ್ತನಾಗು
ವುದೇ ಅಜ್ಞಾನಫಲಂ ಅಜ್ಞಾನದ ಫಲವು; ಮೃಗತೃಷ್ಟಿಕಾದೌ ಬಿಸಿಲು ದುರೆ
ಮೊದಲಾದುವುಗಳಲ್ಲಿ ತಜ್ಞ- ಅಜ್ಞಯೋಃ = ಅದನ್ನು ಅರಿತವನು ಮತ್ತು ಅರಿಯ
ದವನು- ಇವರ ವಿಷಯದಲ್ಲಿ ತತ್ - ಅದು ಈಕ್ಷಿತಂ ಕಂಡುಬರುತ್ತದೆ; ನ ಉ
ಚೇತ್ - ಹಾಗಿಲ್ಲದೆ ಹೋದರೆ ವಿದಾಂ = ಜ್ಞಾನಿಗಳಿಗೆ ಅಸ್ಮಾತ್ - ಇದಕ್ಕಿಂತಲೂ
ದೃಷ್ಟ ಫಲಂ ಕಿ = ದೃಷ್ಟ ಫಲವು ಯಾವುದಿದ್ದೀತು?
 
7
 
೪೨೧. ಅಸದ್ವಸ್ತುವಿನಿಂದ ಹಿಂತಿರುಗುವುದೇ ಜ್ಞಾನದ ಫಲವು. ಅಸ
ಸ್ತುವಿನ ಕಡೆಗೆ ನುಗ್ಗುವುದೇ ಅಜ್ಞಾನದ ಫಲವು. ಬಿಸಿಲುದುರೆ ಮೊದಲಾ
ದುವುಗಳನ್ನು ಅರಿತವನಲ್ಲಿ ಅಥವಾ ಅರಿಯದವನಲ್ಲಿ ಇದು ಕಂಡುಬರುತ್ತದೆ.
ಹಾಗಿಲ್ಲದಿದ್ದರೆ ಜ್ಞಾನಿಗಳಿಗೆ ಇದಕ್ಕಿಂತಲೂ ದೃಷ್ಟಫಲವು ಮತ್ತಾವುದಿರು
 
ವುದು?
 
[೧ ಬಿಸಿಲುದುರೆಯನ್ನು ಅರಿತವನಿಗೆ ಯಾವ ಭ್ರಮೆಯೂ ಉಂಟಾಗುವುದಿಲ್ಲ;
ಅದನ್ನು ಅರಿಯದವನು ಮಾತ್ರ ನೀರಿದೆಯೆಂದು ಭಾವಿಸಿಕೊಂಡು ನುಗ್ಗುತ್ತಾನೆ.
ಹಾಗೆಯೇ ಜಗತ್ತು ಜ್ಞಾನಿಗೆ ಕಾಣಿಸಿಕೊಂಡರೂ ಅವನು ಅದರ ವಿಲಾಸಗಳಿಂದ
ಮೋಹಿತನಾಗುವುದಿಲ್ಲ. ಆದರೆ ಲೌಕಿಕನಿಗೆ ಹಾಗಾಗುವುದಿಲ್ಲ.]