This page has been fully proofread once and needs a second look.

ವಿವೇಕಚೂಡಾಮಣಿ
 
[မှး
 
ಸ್ವರೂಪವಾದ ಬ್ರಹ್ಮದಲ್ಲಿ ವೃತ್ತಿಯನ್ನು ಲಯಮಾಡಿಕೊಂಡಿರುವ ತತ್ತ್ವ

ಜ್ಞಾನಿಯು ಮತ್ತೆ ಅದನ್ನು ನೋಡುವುದಿಲ್ಲ.
 

 
[^] ಗೋವಿನ ಕೊರಳಿಗೆ ಯಾರಾದರೂ ಮಾಲೆಯನ್ನು ಹಾಕಿದರೆ ಅದು ತೀರ

ಉದಾಸೀನವಾಗಿರುವಂತೆ ಬ್ರಹ್ಮಜ್ಞಾನಿಯು ತನ್ನ ಶರೀರದ ವಿಷಯದಲ್ಲಿ ಉದಾಸೀನ

ನಾಗಿರುತ್ತಾನೆ.)
 
೨೧೪
 
]
 
ಅಖಂಡಾನಂದಮಾತ್ಮಾನಂ ವಿಜ್ಞಾಯ ಸ್ವಸ್ವರೂಪತಃ ।

ಕಿಮಿಚ್ಛನ್ ಕಸ್ಯ ವಾ ಹೇತೋರ್ದೆದೇಹಂ ಪುಷ್ಣಾತಿ ತತ್ತ್ವವಿತ್
 
॥ ೪೧೬ ॥
 

 
ತತ್ತ್ವವಿತ್ -= ತತ್ತ್ವಜ್ಞಾನಿಯು, ಅಖಂಡಾನಂದಂ-= ಅಖಂಡಾನಂದ ಸ್ವರೂ
-
ಪನಾದ, ಆತ್ಮಾನಂ-ಆತ್ಮನನ್ನು=ಆತ್ಮನನ್ನು, ಸ್ವ- ಸ್ವರೂಪತಃ= ತನ್ನ ಸ್ವರೂಪವೆಂದು, ವಿಜ್ಞಾಯ-
=
ಅರಿತುಕೊಂಡು, ಕಿಮ್ ಇಚ್ಛನ್-= ಯಾವುದನ್ನು ಬಯಸುವವನಾಗಿ, ಕಸ್ಯ ಹೇತೋಃ

ವಾ = ಅಥವಾ ಯಾರ ಪ್ರಯೋಜನಕ್ಕಾಗಿ, ದೇಹಂ -= ಶರೀರವನ್ನು, ಪುಷ್ಪಾಣಾತಿ -
=
ಪೋಷಿಸಿಯಾನು?
 

 
೪೧೬. ತತ್ತ್ವಜ್ಞಾನಿಯು ಅಖಂಡಾನಂದ ಸ್ವರೂಪನಾದ ಆತ್ಮನನ್ನು

ತನ್ನ ಸ್ವರೂಪವೆಂದೇ ಅರಿತುಕೊಂಡಮೇಲೆ ಯಾವುದನ್ನು ಬಯಸುವವನಾಗಿ,

ಯಾರ ಪ್ರಯೋಜನಕ್ಕಾಗಿ ಈ ದೇಹವನ್ನು ಪೋಷಿಸಿಯಾನು? [^
 
]
 
[^] 'ಯಾವ ಪ್ರಯೋಜನಕ್ಕಾಗಿ ಶರೀರದ ರೋಗವನ್ನು ಅನುಸರಿಸಿ ದುಃಖಪಡು
-
ವನು?' ಕಿಮಿಚ್ಛನ್ ಕಸ್ಯ ಕಾಮಾಯ ಶರೀರನುಸಂಜ್ವರೇತ್ (ಬೃಹದಾರ
-
ಣ್ಯಕ ಉ. ೪. ೪, ೧೨).]
 

 
ಸಂಸಿದ್ಧಸ್ಯ ಫಲಂ ತೈತತ್ವೇತಜ್ಜೀವನ್ಮುಕ್ತಸ್ಯ ಯೋಗಿನಃ 1
|
ಬಹಿರಂತಃ ಸದಾನಂದ-ರಸಾಸ್ವಾದನಮಾತ್ಮನಿ
 
॥ ೪೧೭ ॥
 
BUC
 
=
 

 
ಸಂಸಿದ್ಧ ಸ್ಯ -= ಆತ್ಮಜ್ಞಾನನಿಷ್ಠನಾದ, ಜೀವನ್ಮುಕ್ತಸ್ಯ -= ಜೀವನ್ಮುಕ್ತನಾದ
,
ಯೋಗಿನಃ= ಯೋಗಿಗೆ, ಏತತ್ ಫಲಂ= ಇದು ಫಲವು: ಬಹಿಃ= ಹೊರಗೂ, ಅಂತಃ
=
ಒಳಗೂ, ಸದಾ -= ಯಾವಾಗಲೂ, ಆತ್ಮನಿ -= ಮನಸ್ಸಿನಲ್ಲಿ, ಆನಂದರಸ ಆಸ್ವಾದನಂ-
ಆಸ್ವಾದನಂ=
ಆನಂದರಸದ ಆಸ್ವಾದನ.
 

 
೪೧೭. ಆತ್ಮಜ್ಞಾನನಿಷ್ಠನಾದ ಜೀವನ್ಮುಕ್ತನಾದ ಯೋಗಿಗೆ ಇದು

ಫಲವು: ಹೊರಗೂ ಒಳಗೂ ಯಾವಾಗಲೂ ಮನಸ್ಸಿನಲ್ಲಿ ಆನಂದರಸವನ್ನು

ಆಸ್ವಾದಿಸುತ್ತಾನೆ.