This page has been fully proofread once and needs a second look.

೨೧೨
 
ವಿವೇಕಚೂಡಾಮಣಿ
 
[೪೧೨
 
(ಹಾಗಾದರೆ) ಪುನಃ ಸಂಸಾರಮಾರ್ಗದಲ್ಲಿ ಪ್ರಯಾಣಮಾಡಲು ನೀನು ಬರು
-
ವುದಿಲ್ಲ.
 

[ 'ಅವನು ಹಿಂತಿರುಗುವುದಿಲ್ಲ' ನ ಚ ಪುನರಾವರ್ತತೇ (ಛಾಂದೋಗ್ಯ ಉ. ೮.

೧೫. ೧); 'ಆದರೆ, ಎಲೈ ಅರ್ಜುನ, ನನ್ನನ್ನು ಹೊಂದಿದರೆ ಪುನರ್ಜನ್ಮವಿಲ್ಲ' ಮಾಮು
-
ಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ । (ಗೀತಾ ೮. ೧೬) ಎಂದು ಶ್ರುತಿ
-
ಸ್ಮೃತಿಗಳು ಹೇಳುತ್ತವೆ.]
 

 
ಛಾಯೇವ ಪುಂಸಃ ಪರಿದೃಶ್ಯಮಾನ-
ರಾ

ಮಾ
ಭಾಸರೂಪೇಣ ಫಲಾನುಭೂತ್ಯಾ ।

ಶರೀರಮಾರಾಚ್ಛವವನ್ನಿ ರಸ್ತಂ
ಪುನರ್ನ
ಸಂ
 
ಧತ್ತ ಇದಂ ಮಹಾತ್ಮಾ ॥ ೪೧೨ ॥
 
ಪುನರ್ನ ಸಂಧತ್ವ ಇದಂ ಮಹಾತ್ಮಾ

 
ಫಲಾನುಭೂತ್ಯಾ -= ಪ್ರಾರಬ್ಧ ಕ ಕರ್ಮದ ಫಲವನ್ನು ಅನುಭವಿಸುತ್ತಿರುವುದ
-
ರಿಂದ, ಪುಂಸಃ -= ಮನುಷ್ಯನ, ಛಾಯಾ ಇವ -= ನೆರಳಿನಂತೆ, ಆಭಾಸರೂಪೇಣ =

ಆಭಾಸರೂಪದಿಂದ, ಪರಿದೃಶ್ಯ ಮಾನಂ-= ಕಂಡು ಬರುತ್ತಿರುವ, ಶವವತ್ = ಶವದಂತೆ
,
ಆ ರಾತ್ ನಿರಸ್ತಂ= ದೂರದಿಂದಲೇ ತ್ಯಜಿಸಲ್ಪಟ್ಟ, ಇದಂ ಶರೀರಂ -= ಈ ಶರೀರವನ್ನು
,
ಮಹಾತ್ಮಾ= ಮಹಾತ್ಮನಾದವನು, ಪುನಃ = ಮತ್ತೆ, ನ ಸಂಧತ್ತೇ= ಸ್ವೀಕರಿಸುವುದಿಲ್ಲ.

 
೪೧೨. ಪ್ರಾರಬ್ಧಕರ್ಮಫಲವನ್ನು ಅನುಭವಿಸುತ್ತಿರುವುದರಿಂದ ಮನು
-
ಷ್ಯನ ನೆರಳಿನಂತೆ ಆಭಾಸರೂಪದಿಂದ ಕಂಡುಬರುತ್ತಿರುವ ಶರೀರವನ್ನು

ಶವದಂತೆ ದೂರ ತ್ಯಜಿಸಿದ ಮೇಲೆ, ಮಹಾತ್ಮನಾದವನು ಪುನಃ ಅದನ್ನು

ಸ್ವೀಕರಿಸುವುದಿಲ್ಲ.
 

 
ಸತತ-ವಿಮಲಬೋಧಾನಂದ -ರೂಪಂ ಸಮೇತ್ಯ
 

ತ್ಯಜ ಜಡ -ಮಲರೂಪೋಪಾಧಿಮೇತಂ ಸುದೂರೇ

ಅಥ ಪುನರಪಿ ನೈಷ ಸ್ಮರ್ಯತಾಂ ವಾಂತ-ವಸ್ತು
 

ಸ್ಮರಣ-ವಿಷಯ -ಭೂತಂ ಕಲ್ಪತೇ ಕುತ್ಸನಾಯ ॥ ೪೧೩ ॥
ಸತತ

 
ಸತತ-
ವಿಮಲ -ಬೋಧ.-ಆನಂದ -ರೂಪಂ -= ನಿತ್ಯ-ನಿರ್ಮಲ -ಜ್ಞಾನಾನಂದ
-
ಸ್ವರೂಪವಾದ [ಬ್ರಹ್ಮವನ್ನು], ಸಮೇತ್ಯ -= ಹೊಂದಿ, ಏತಂ -= ಈ ಜಡ ಮಲ. -ಮಲ-ರೂಪ.
-
ಉಪಾಧಿಂ= ಜಡ -ಮಲಿನ -ರೂಪವಾದ ದೇಹವನ್ನು, ಸುದೂರೇ= ಬಹುದೂರದಲ್ಲಿಯೇ
,
ತ್ಯಜ = ತೊರೆ; ಅಥ= ಅನಂತರ, ಪುನಃ ಅಪಿ = ಮತ್ತೆ, ಏಷಃ -= ಇದು ನ ಸ್ಮರ್ಯ-
, ನ ಸ್ಮರ್ಯ-
ತಾಂ=
ಸ್ಮರಿಸಲ್ಪಡದಿರಲಿ; [ಏಕೆಂದರೆ] ವಾಂತ. -ವಸ್ತು -= ವಾಂತಿಮಾಡಿದ ವಸ್ತುವು
,
ಸ್ಮರಣ- ವಿಷಯ -ಭೂತಂ = ಸ್ಮೃತಿಗೆ ವಿಷಯವಾದಾಗ, ಕುತ್ಸನಾಯ ಕಲ್ಪತೇ-
=
ಅಸಹ್ಯವನ್ನುಂಟುಮಾಡುತ್ತದೆ.
 
ತಾಂ
 
-