2023-03-15 12:34:24 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಪೂರ್ಣ೦ ಬ್ರಹ್ಮ ಸಮಾಧ ಹೃದಿ ಕಲಯತಿ,
೨೧೧
=
- ಅದ್ವಿತೀಯವಾದ
೪೦೯
ವಸ್ತುವಿನ ಸ್ವರೂಪವಾಗಿರುವ, ಶಾಂತವಾದ ಸಮುದ್ರದಂತಿರುವ, ನಾಮ
ರಹಿತವಾದ, ನಿರ್ಗುಣವಾದ, ನಿರ್ವಿಕಾರವಾದ, ಶಾಶ್ವತವಾದ, ಶಾಂತವಾದ,
ಅದ್ವಿತೀಯವಾದ ಪೂರ್ಣ ಬ್ರಹ್ಮವನ್ನು ಜ್ಞಾನಿಯು ಸಮಾಧಿಯ ಮೂಲಕ
ಹೃದಯಾಕಾಶದಲ್ಲಿ ಸಾಕ್ಷಾತ್ಕರಿಸುತ್ತಾನೆ.
ಸಮಾಹಿತಾಂತಃಕರಣಃ ಸ್ವರೂಪೇ
ವಿಲೋಕಯಾತ್ಮಾನಮಖಂಡವೈಭವಮ್ ।
ವಿಜೃಂದ್ಧಿ ಬಂಧಂ ಭವಗಂಧ-ಗಂಧಿತಂ
ಯನ ಪುಂಸ್ಕೃಂ ಸಫಲೀಕುರು
ಸ್ವರೂಪೇ - ಸ್ವರೂಪದಲ್ಲಿ, ಪರಮಾತ್ಮನಲ್ಲಿ ಸಮಾಹಿತ. ಅಂತಃಕರಣಃ -
ಸಮಾಹಿತವಾದ ಅಂತಃಕರಣವುಳ್ಳವನಾಗಿ ಅಖಂಡ ವೈಭವಂ ಅಖಂಡವೈಭವವುಳ್ಳ
ಆತ್ಮಾನಂ - ಆತ್ಮನನ್ನು ವಿಲೋಕಯ - ಸಾಕ್ಷಾತ್ಕರಿಸು; ಭವಗಂಧ-ಗಂಧಿತಂ -
ಸಂಸಾರವಾಸನೆಯಿಂದ ವಾಸಿತವಾದ ಬಂಧಂ – ಬಂಧವನ್ನು ವಿಜೃಂದ್ಧಿ = ಕತ್ತರಿಸು;
ಯನ - ಪ್ರಯತ್ನದಿಂದ ಪುಂಸ್ಕೃಂ - ಪುರುಷತ್ವವನ್ನು ಸಫಲೀಕುರುಷ್ಟ -
ಸಾರ್ಥಕಪಡಿಸಿಕೊ
೪೧೦. ಸ್ವರೂಪದಲ್ಲಿ ಅಂತಃಕರಣವನ್ನು ನೆಲೆಗೊಳಿಸಿ, ಅಖಂಡವಾದ
ವೈಭವವುಳ್ಳ ಆತ್ಮನನ್ನು ಸಾಕ್ಷಾತ್ಕರಿಸು; ಸಂಸಾರವಾಸನೆಯಿಂದ ವಾಸಿತ
ವಾಗಿರುವ ಬಂಧವನ್ನು ಕತ್ತರಿಸು. ಪ್ರಯತ್ನದಿಂದ ಪುರುಷತ್ವವನ್ನು ಸಾರ್ಥಕ
ಪಡಿಸಿಕೊ.
ಸರ್ವೋಪಾಧಿ-ವಿನಿರ್ಮುಕ್ತಂ ಸಚ್ಚಿದಾನಂದನದ್ವಯಮ್ ।
ಭಾವಯಾತ್ಮಾನಮಾತ್ಮಸ್ಥಂ ನ ಭೂಯಃ ಕಲ್ಪ ಸೇಧ್ವನೇ ॥ ೪೧೧ ॥
ಸರ್ವ. ಉಪಾಧಿ ವಿನಿರ್ಮುಕ್ತಂ = ಸಮಸ್ತ ಉಪಾಧಿಗಳಿಂದಲೂ ಮುಕ್ತ
ನಾದ ಸಚ್ಚಿದಾನಂದಂ-ಸಚ್ಚಿದಾನಂದಸ್ವರೂಪನಾದ ಅದ್ವಯಂ ಅದ್ವಿತೀಯನಾದ
ಆತ್ಮಸ್ಥಂ = ನಿನ್ನಲ್ಲಿರುವ ಆತ್ಮಾನಂ ಆತ್ಮನನ್ನು ಭಾವಯ-ಭಾವಿಸು; ಭೂಯಃ
ಪುನಃ ಅಧ್ವನೇ - ಸಂಸಾರಮಾರ್ಗಕ್ಕೆ ನ ಕಲ್ಪಸೇ - ಯೋಗ್ಯನಾಗುವುದಿಲ್ಲ.
೪೧೧. ಸಮಸ್ತ ಉಪಾಧಿಗಳಿಂದಲೂ ಮುಕ್ತನಾದ, ಸಚ್ಚಿದಾನಂದ.
ಸ್ವರೂಪನೂ ಅದ್ವಿತೀಯನೂ ಆಗಿರುವ, ನಿನ್ನಲ್ಲಿರುವ ಆತ್ಮನನ್ನು ಭಾವಿಸು,