This page has not been fully proofread.

೪೦೭]
 
ವಿವೇಕಚೂಡಾಮಣಿ
 
೨೦೯
 
ಆರೋಪ್ಯಸ್ಯ - ಆರೋಪಿತವಾದುದರ ಅಧಿಷ್ಠಾನಾತ್ - ಆಶ್ರಯಕ್ಕಿಂತ
ಅನನ್ಯತ್ವಂ - ಅನನ್ಯತ್ವವು ರಜ್ಜು ಸರ್ಪಾದ್ - ಹಗ್ಗದಲ್ಲಿ ತೋರುವ ಹಾವೇ ಮೊದ
ಲಾದುದರಲ್ಲಿ ಪಂಡಿತೈ ಪ್ರಾಜ್ಞರಿಂದ ನಿರೀಕ್ಷಿತಂ - ನೋಡಲ್ಪಟ್ಟಿದೆ; ವಿಕಲ್ಪ =
ಭೇದವು ಭ್ರಾಂತಿಜೀವನಃ - ಭ್ರಾಂತಿಯೇ ಜೀವನವಾಗಿ ಉಳ್ಳದ್ದು.
 
೪೦೫. ಆರೋಪಿತವಾದ ವಸ್ತುವು ತನ್ನ ಆಶ್ರಯಕ್ಕಿಂತ ಬೇರೆಯಲ್ಲ
ಎಂಬುದನ್ನು ಪ್ರಾಜ್ಞರು ಹಗ್ಗದಲ್ಲಿ ಕಂಡುಬರುವ ಹಾವೇ ಮೊದಲಾದ ಕಡೆ
ಯಲ್ಲಿ ನೋಡಿರುತ್ತಾರೆ. ಈ ಭೇದಕ್ಕೆ ಭ್ರಾಂತಿಯೇ ಕಾರಣವು.
 
ಚಿತ್ರ ಮೂಲೋ ವಿಕsಯಂ ಚಿತ್ರಾಭಾವೇ ನ ಕಶ್ಯನ ।
ಅತಶ್ಚಿಂ ಸಮಾಧೇಹಿ ಪ್ರತ್ಯಗ್ರೂಪೇ ಪರಾತ್ಮನಿ
 
॥ ೪೦೬ ॥
 
ಆಯಂ ವಿಕಲ್ಪ = ಈ ಭೇದವು ಚಿತ್ರಮೂಲಃ = ಚಿತ್ರವನ್ನೇ ಕಾರಣವಾಗಿ
ಉಳ್ಳದ್ದು, ಚಿತ್ರ ಅಭಾವೇ ಈ ಚಿತ್ರವಿಲ್ಲದಿದ್ದರೆ ಕಶ್ಚನ ನ - ಯಾವ [ಭೇದವೂ] ಇರು
ವುದಿಲ್ಲ; ಆತಃ = ಆದುದರಿಂದ ಚಿತ್ರ ಚಿತ್ರವನ್ನು ಪ್ರತ್ಯಕ್ ರೂಪೇ - ಸ್ವರೂಪ
ಭೂತನಾದ ಪರಾತ್ಮನಿ - ಪರಮಾತ್ಮನಲ್ಲಿ ಸಮಾಧೇಹಿ = ನೆಲೆಗೊಳಿಸು.
 
೪೦೬. ಈ ಭೇದಕ್ಕೆ ಚಿತ್ರವೇ ಮೂಲಕಾರಣವಾಗಿದೆ, ಚಿತ್ತವಿಲ್ಲದಿದ್ದರೆ
ಯಾವ (ಭೇದವೂ) ಇರುವುದಿಲ್ಲ. ಆದುದರಿಂದ ನಿನ್ನ ಸ್ವರೂಪಭೂತನಾದ
ಪರಮಾತ್ಮನಲ್ಲಿ ಚಿತ್ರವನ್ನು ನೆಲೆಗೊಳಿಸು.
 
(ಭ್ರಾಂತಿಯನ್ನು ತೊಲಗಿಸಿಕೊಳ್ಳುವುದಕ್ಕೆ ಇಲ್ಲಿ ಉಪಾಯವನ್ನು ಹೇಳಿದೆ.]
 
ಕಿಮಪಿ ಸತತಬೋಧಂ ಕೇವಲಾನಂದರೂಪಂ
 
ನಿರುಪಮಮತಿವೇಲಂ ನಿತ್ಯ ಮುಕ್ತಂ ನಿರೀಹಮ್ ।
ನಿರವಧಿ-ಗಗನಾಭಂ ನಿಷ್ಕಲಂ ನಿರ್ವಿಕಲ್ಪಂ
 
ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣ೦ ಸಮಾಧ ॥ ೪೦೭ ॥
 
ವಿದ್ವಾನ್- ಜ್ಞಾನಿಯು ಕಿಮ್ ಅಪಿ ಅನಿರ್ವಾಚ್ಯವಾದ ಸತತ ಬೋಧಂ=
ನಿತ್ಯವೂ ಜ್ಞಾನಸ್ವರೂಪವಾದ ಕೇವಲಾನಂದರೂಪಂ = ಕೇವಲಾನಂದಸ್ವರೂಪವಾದ
ನಿರುಪಮಂ= ಹೋಲಿಕೆಯಿಲ್ಲದ ಅತಿವೇಲಂ = ತೀರವಿಲ್ಲದ, ವಿಶ್ವಾತೀತವಾದ ನಿತ್ಯ.
ಮುಕ್ತಂ ನಿತ್ಯ ಮುಕ್ತವಾದ ನಿರೀಹಂ=ನಿಷ್ಕ್ರಿಯವಾದ ನಿರವಧಿ-ಗಗನ ಆಭಂ
ಅವಧಿಯಿಲ್ಲದ ಆಕಾಶದಂತಿರುವ ನಿಷ್ಕಲಂ = ಅವಯವವಿಲ್ಲದ ನಿರ್ವಿಕಲ್ಪ - ನಿರ್ವಿ
ಕಲ್ಪವಾದ ಪೂರ್ಣ೦ ಬ್ರಹ್ಮ ಪೂರ್ಣ ಬ್ರಹ್ಮವನ್ನು ಸಮಾಧ = ಸಮಾಧಿಯಲ್ಲಿ
 
ಹೃದಿ - ಹೃದಯದಲ್ಲಿ ಕಲಯತಿ - - ಸಾಕ್ಷಾತ್ಕರಿಸುತ್ತಾನೆ.