This page has not been fully proofread.

ವಿವೇಕಚೂಡಾಮಣಿ
 
[೩೯೮
 
೩೯೭, ನಿರ್ವಿಕಲ್ಪವೂ ಬ್ರಹ್ಮವೂ ಆದ ಪರಮಾತ್ಮನಲ್ಲಿ ಚಿತ್ತ ವೃತ್ತಿಯು
ಏಕಾಗ್ರತೆಯನ್ನು ಹೊಂದಿದಾಗ ಈ ಯಾವುದೊಂದು ಭೇದವೂ ಕಂಡುಬರು
ವುದಿಲ್ಲ. ಅನಂತರ (ಅರ್ಥವಿಲ್ಲದ) ಬರಿಯ ಶಬ್ದವೇ ಉಳಿದುಕೊಳ್ಳುತ್ತದೆ.
 
೨೦೬
 
[೧ ಹೊರಗಡೆ ವಸ್ತುವಿಲ್ಲದಿರುವಾಗ ಅರ್ಥವನ್ನು ಅವಲಂಬಿಸಿರುವ ಶಬ್ದವು ವಿಕಲ್ಪ
ವೆನಿಸುವುದು' ಶಬ್ದ ಜ್ಞಾನಾನುಪಾತೀ ವಸ್ತುಶೂನ್ಸ್ ವಿಕಲ್ಪ (ಪಾತಂಜಲ
ಯೋಗಸೂತ್ರ ೧. ೯).]
 
ಅಸತ್ಕ ವಿಕಲ್ಲೋsಯಂ ವಿಶ್ವಮಿತ್ಯೇಕವಸ್ತುನಿ ।
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ
 
॥ ೩೯೮ ॥
 
ಏಕವಸ್ತುನಿ=ಒಂದು ವಸ್ತುವಿನಲ್ಲಿ ವಿಶ್ವಮ್ ಇತಿ ಪ್ರಪಂಚವೆಂಬ ಅಯಂ
ವಿಕಲ್ಪ - ಈ ಭೇದವು ಅಸತ್ಕಲ್ಪ - ಅಸತ್ತಿಗೆ ಸಮಾನವಾದುದು; ನಿರ್ವಿಕಾರೇ
ನಿರ್ವಿಕಾರವಾದ ನಿರಾಕಾರೇ, ನಿರಾಕಾರವಾದ ನಿರ್ವಿಶೇಷ = ನಿರ್ವಿಶೇಷವಾದ
[ವಸ್ತುವಿನಲ್ಲಿ ಬಿದಾ = ಭೇದವು ಕುತಃ = ಎಲ್ಲಿಯದು?
 
೩೯೮, ಆ ಏಕವಸ್ತುವಿನಲ್ಲಿಯೇ ಈ ಪ್ರಪಂಚವೆಂಬ ಭೇದವು ಅಸದ್ವಸ್ತು
ವಿನಂತೆ ಇರುವುದು. ನಿರ್ವಿಕಾರವೂ ನಿರಾಕಾರವೂ ನಿರ್ವಿಶೇಷವೂ ಆದ
ವಸ್ತುವಿನಲ್ಲಿ ಈ ಭೇದವೆಲ್ಲಿಯದು?
 
ದ್ರಷ್ಟ-ದರ್ಶನ-ದೃಶ್ಯಾದಿ-ಭಾವ-ಶೂನೈಕ-ವಸ್ತುನಿ ।
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ ॥ ೩೯೯
 
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ, ದ್ರಷ್ಟ-ದರ್ಶನ ದೃಶ್ಯಾದಿ-ಭಾವ.
ಶೂನ್ಯ. ಏಕ ವಸ್ತುನಿ - ನೋಡುವವನು, ನೋಟ, ನೋಡತಕ್ಕದ್ದು ಮೊದಲಾದ
ಭಾವಗಳಿಂದ ಶೂನ್ಯವಾದ ಏಕವಸ್ತುವಿನಲ್ಲಿ ಭಿದಾ ಕುತಃ?
 
೩೯೯
 
ನಿರ್ವಿಕಾರವೂ ನಿರಾಕಾರವೂ ನಿರ್ವಿಶೇಷವೂ ಆದ ಮತ್ತು
ದೃಷ್ಟ ದರ್ಶನ ದೃಶ್ಯ ಮೊದಲಾದ ಭಾವಗಳಿಲ್ಲದ ಏಕವಸ್ತುವಿನಲ್ಲಿ ಭೇದವು
ಎಲ್ಲಿಯದು?
 
ಕಲ್ಪಾರ್ಣವ ಇವಾತ್ಯಂತಪರಿ ಪೂರ್ಣೆಕವಸ್ತುನಿ ।
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ ॥ ೪೦೦ ॥
 
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ, ಕಲ್ಪ. ಅರ್ಣವಃ ಇವ- ಪ್ರಳಯ
ಕಾಲದ ಸಮುದ್ರದಂತೆ ಅತ್ಯಂತ ಪರಿಪೂರ್ಣ-ಏಕವಸ್ತುನಿ, ಅತ್ಯಂತ ಪರಿಪೂರ್ಣ
ವಾದ ಏಕವಸ್ತುವಿನಲ್ಲಿ ಬಿದಾ ಕುತಃ?