This page has not been fully proofread.

೩೯೭]
 
ವಿವೇಕಚೂಡಾಮಣಿ
 
೨೦೫
 
೩೯೫, ಮನುಷ್ಯನು ಎಲ್ಲಿಯ ವರೆಗೆ ಶವಾಕಾರವಾದ ಶರೀರವನ್ನು
ಸೇವಿಸುತ್ತಾನೆ ಅಲ್ಲಿಯ ವರೆಗೆ ಅಶುಚಿಯಾಗಿರುತ್ತಾನೆ, ಶತ್ರುಗಳಿಂದ
ಕೇಶವನ್ನು ಪಡೆಯುತ್ತಾನೆ ಮತ್ತು ಜನ್ಮ-ಮರಣ ವ್ಯಾಧಿಗಳಿಗೆ ಆಶ್ರಯ
ನಾಗಿರುತ್ತಾನೆ. ಯಾವಾಗ ತನ್ನನ್ನು ಶುದ್ಧನೆಂದೂ ಅಚಲನೆಂದೂ ಶಿವಾಕಾರ
ನೆಂದೂ ತಿಳಿಯುತ್ತಾನೆಯೊ ಆಗ ಆ ಕೇಶಗಳಿಂದ ಮುಕ್ತನಾಗುತ್ತಾನೆ.
ಉಪನಿಷತ್ತೂ ಅದನ್ನೇ ಹೇಳುತ್ತದೆ.
 
[೧ ಶರೀರವಿಲ್ಲದವನನ್ನು ಪ್ರಿಯಾಪ್ರಿಯಗಳು ಸೋಂಕುವುದೇ ಇಲ್ಲ' ಅಶರೀರಂ
ವಾವ ಸಂತಂ ನ ಪ್ರಿಯಾಪ್ರಿಯೇ ಶತಃ (ಛಾಂದೋಗ್ಯ ಉ. ೮. ೧೨. ೧);
 
( ಆಗ ಈ (ಆತ್ಮನು) ಅಶರೀರನೂ ಅಮೃತನೂ ಪರಮಾತ್ಮನೂ ಬ್ರಹ್ಮವೂ ತೇಜಸೂ
(ಆಗುತ್ತಾನೆ)' ಅಥಾಯಮಶರೀರೋಽಮೃತಃ ಪ್ರಾಣೋ ಬ್ರಹ್ಮವ ತೇಜ
ಏವ (ಬೃಹದಾರಣ್ಯಕ ಉ. ೪. ೪. ೭). ]
 
ಸ್ವಾತ್ಮನ್ಯಾರೋಪಿತಾಶೇಷಾಭಾಸವಸ್ತು-ನಿರಾಸತಃ ।
ಸ್ವಯಮೇವ ಪರಂ ಬ್ರಹ್ಮ ಪೂರ್ಣಮದ್ವಯಮಕ್ರಿಯಮ್ ॥ ೩೯೬ ॥
 
ಸ್ವಾತ್ಮನಿ - ತನ್ನಲ್ಲಿ ಆರೋಪಿತ. ಅಶೇಷ ಆಭಾಸವಸ್ತು-ನಿರಾಸತಃ ಆರೋ
ಪಿಸಲ್ಪಟ್ಟ ಸಮಸ್ತ ಕಲ್ಪಿತವಸ್ತುಗಳ ನಿರಾಕರಣದಿಂದ ಸ್ವಯಮ್ ಏವ - ನಾನೇ
ಪೂರ್ಣ೦ = ಪೂರ್ಣವೂ ಅದ್ವಯಂ ಅದ್ವಿತೀಯವೂ ಅಕ್ರಿಯಂ = ನಿಷ್ಕ್ರಿಯವೂ
[ಆದ] ಪರಂ ಬ್ರಹ್ಮ ಪರಬ್ರಹ್ಮವು [ಆಗುತ್ತಾನೆ).
 
೩೯೬, ತನ್ನಲ್ಲಿ ಆರೋಪಿಸಲ್ಪಟ್ಟ ಕಲ್ಪಿತವಸ್ತುಗಳೆಲ್ಲವನ್ನೂ ನಿರಾ
ಕರಿಸುವುದರಿಂದ ತಾನೇ ಪೂರ್ಣವೂ ಅದ್ವಿತೀಯವೂ ನಿಷ್ಕ್ರಿಯವೂ ಆದ
ಪರಬ್ರಹ್ಮವಾಗುತ್ತಾನೆ.
 
॥ ೩೯೭ ।
 
ಸಮಾಹಿತಾಯಾಂ ಸತಿ ಚಿತ್ತವೃತ್
ಪರಾತ್ಮನಿ ಬ್ರಹ್ಮಣಿ ನಿರ್ವಿಕ 1
ನ ದೃಶ್ಯತೇ ಕಶ್ಚಿದಯಂ ವಿಕಲ್ಪ
ಪ್ರಜಲ್ಪ ಮಾತ್ರಃ ಪರಿಶಿಷ್ಯತೇ ತತಃ
ನಿರ್ವಿಕ = ನಿರ್ವಿಕಲ್ಪನಾದ ಬ್ರಹ್ಮಣಿ = ಬ್ರಹ್ಮವಾದ ಪರಾತ್ಮನಿ - ಪರ
ಮಾತ್ಮನಲ್ಲಿ ಚಿತ್ತವೃತ್ = ಚಿತ್ತ ವೃತ್ತಿಯು ಸಮಾಹಿತಾಯಾಂ ಸತಿ [ಸತ್ಯಾಂ] -
ಸಮಾಹಿತವಾದಾಗ ಅಯಂ ಕಶ್ಚಿತ್ ವಿಕಲ್ಪ = ಈ ಯಾವ ಭೇದವೂ ನ ದೃಶ್ಯತೇ-
ಕಂಡುಬರುವುದಿಲ್ಲ: ತತಃ = ಅನಂತರ ಪ್ರಜಲ್ಪ ಮಾತ್ರ – ಬರಿಯ ಶಬ್ದ
ಶಿಷ್ಯತೇ = ಉಳಿದುಕೊಳ್ಳುತ್ತದೆ.
 
ಶಬ್ದವೇ ಪರಿ.