This page has not been fully proofread.

ವಿವೇಕಚೂಡಾಮಣಿ
 

 
ಜಹಿ ಮಲಮಯಕೋಶೇsಹಂಧಿಯೋತ್ಥಾಪಿತಾಶಾಂ

ಪ್ರಸಭಮನಿಲಕ ಲಿಂಗದೇಹೇsಪಿ ಪಶ್ಚಾತ್ ।

ನಿಗಮ-ಗದಿತ ಕೀರ್ತಿ೦ ನಿತ್ಯಮಾನಂದಮೂರ್ತಿ೦

ಸ್ವಯಮಿತಿ ಪರಿಚೀಯ ಬ್ರಹ್ಮರೂಪೇಣ ತಿಮ್ಮ ॥ ೩೯೪ ॥

 
ಮಲಮಯ ಕೋಶ- ಮಲಮಯವಾದ ಈ ದೇಹದಲ್ಲಿ ಅಹಂಧಿಯಾ

'ನಾನು' ಎಂಬ ಬುದ್ಧಿಯಿಂದ ಉತ್ಥಾಪಿತ. ಆಶಾಂ - ಉತ್ಪನ್ನವಾದ ಆಶೆಯನ್ನು

ಜಹಿ = ತೊರೆ; ಪಶ್ಚಾತ್ = ಅನಂತರ ಅನಿಲ ಕ ಲಿಂಗದೇಹೇ ಅಪಿ- ವಾಯು

ವಿನಂತಿರುವ ಲಿಂಗಶರೀರದಲ್ಲಿಯೂ ಕೂಡ [ಆಶೆಯನ್ನು] ಪ್ರಸಭಂ = ಬಲಾತ್ಕಾರ

ದಿಂದ [ತೊರೆ]; ನಿಗಮಗದಿತ ಕೀರ್ತಿ೦ ಶಾಸ್ತ್ರಗಳಿಂದ ಹೊಗಳಲ್ಪಟ್ಟ ಕೀರ್ತಿ

ಯುಳ್ಳವನೂ ನಿತ್ಯಮ್ - ನಿತ್ಯನೂ ಆನಂದಮೂರ್ತಿ೦ ಆನಂದಸ್ವರೂಪನೂ ಆದ

(ಪರಮಾತ್ಮನೇ] ಸ್ವಯಂ - ನಾನು ಇತಿ – ಎಂದು ಪರಿಚೀಯ - ನಿಶ್ಚಯಿಸಿಕೊಂಡು

ಬ್ರಹ್ಮರೂಪೇಣ - ಬ್ರಹ್ಮರೂಪದಿಂದ ತಿಷ್ಯ- ನಿಲ್ಲು.
 
=
 
೦೪
 

 
೩೯೪. ಮಲಮಯವಾದ ಈ ಸ್ಕೂಲದೇಹದಲ್ಲಿ 'ನಾನು' ಎಂಬ

ಬುದ್ಧಿಯಿಂದ ಉತ್ಪನ್ನವಾದ ಆಶೆಯನ್ನು ತೊರೆ; ಅನಂತರ ವಾಯುವಿನಂತಿ

ರುವ ಲಿಂಗಶರೀರದಲ್ಲಿಯೂ ಕೂಡ (ಆಶೆಯನ್ನು) ಬಲಾತ್ಕಾರದಿಂದ (ತೊರೆ).

ಶಾಸ್ತ್ರಗಳಿಂದ ಹೊಗಳಲ್ಪಟ್ಟ ಕೀರ್ತಿಯುಳ್ಳವನೂ ನಿತ್ಯನೂ ಆನಂದ
 

ಸ್ವರೂಪನೂ ಆದ (ಪರಮಾತ್ಮನೇ) ನಾನು ಎಂದು ನಿಶ್ಚಯಿಸಿಕೊಂಡು
 

ಬ್ರಹ್ಮರೂಪದಿಂದ ನಿಲ್ಲು.
 

 
ಶವಾಕಾರಂ ಯಾವದ್ ಭಜತಿ ಮನುಜಸ್ತಾವದಶುಚಿಃ
 
[೩೯೪
 

ಪರೇಭ್ಯಃ ಸ್ಯಾತ್ ಕೇಶೋ
ಜನನ-ಮರಣ-ವ್ಯಾಧಿ-ನಿಲಯಃ 1
ಯದಾತ್ಮಾನಂ ಶುದ್ಧಂ ಕಲಯತಿ ಶಿವಾಕಾರಮಚಲಮ್

ತದಾ ತೇಭೋ
 
ಮುಕ್ಕೊ ಭವತಿ ಹಿ ತದಾಹ ಶ್ರುತಿರಸಿ ॥ ೩೯೫ ॥

 
ಮನುಜಃ – ಮನುಷ್ಯನು ಯಾವತ್ ಎಲ್ಲಿಯ ವರೆಗೆ ಶವಾಕಾರಂ - ಹೆಣದ

ರೂಪವನ್ನು ಭಜತಿ - ಸೇವಿಸುತ್ತಾನೆ ತಾವತ್ - ಅಲ್ಲಿಯ ವರೆಗೆ ಅಶುಚಿಃ =

ಅಶುಚಿಯಾಗಿರುತ್ತಾನೆ; [ಮತ್ತು] ಪರೇಭ್ಯಃ = ಶತ್ರುಗಳಿಂದ ಕೇಶಃ ಸ್ಯಾತ್ -

ಕೇಶವುಂಟಾಗುತ್ತದೆ; ಜನನ ಮರಣ-ವ್ಯಾಧಿ ನಿಲಯಃ= ಜನ್ಮಮರಣ-ವ್ಯಾಧಿಗಳಿಗೆ

ಆಶ್ರಯನಾಗುತ್ತಾನೆ; ಯದಾ - ಯಾವಾಗ ಆತ್ಮಾನಂ ತನ್ನನ್ನು ಶುದ್ಧಂ – ಶುದ್ಧ

ನೆಂದೂ ಶಿವಾಕಾರಂ ಮಂಗಳಸ್ವರೂಪನೆಂದೂ ಅಚಲ ಅಚಲನೆಂದೂ ಕಲ.

ಯತಿ - ತಿಳಿಯುತ್ತಾನೆಯೊ ತದಾ ಆಗ ತೇಭ್ಯಃ = ಆ ಕೇಶಗಳಿಂದ ಮುಕ್ತಃ

ಭವತಿ - ಮುಕ್ತನಾಗುತ್ತಾನೆ; ಶ್ರುತಿಃ ಅಪಿ = ಉಪನಿಷತ್ತೂ ತತ್ ಹಿ = ಅದನ್ನೇ

ಆಹ . ಹೇಳುತ್ತದೆ.
 
ಜನನ-ಮರಣ-ವ್ಯಾಧಿ-ನಿಲಯಃ 1