This page has not been fully proofread.

ವಿವೇಕಚೂಡಾಮಣಿ
 
ಉತ್ತರದಲ್ಲಿಯೂ ಸ್ವಯಂ, ತಥಾ - ಹಾಗೆಯೇ ಉಪರಿಷ್ಟಾತ್ - ಮೇಲೆಯೂ
ಸ್ವಯಂ, ಅಧಸ್ತಾತ್ ಅಪಿ = ಕೆಳಗೂ [ಸ್ವಯ].
 
೩೯೦]
 
೨೦೧
 
೩೮೮, ಒಳಗೂ ತಾನೇ, ಹೊರಗೂ ತಾನೇ; ಮುಂದೆಯೂ ತಾನೇ
ಹಿಂದೆಯೂ ತಾನೇ; ದಕ್ಷಿಣಕ್ಕೂ ತಾನೇ, ಉತ್ತರಕ್ಕೂ ತಾನೇ ಹೀಗೆಯೇ
ಮೇಲೆಯ ತಾನೇ, ಕೆಳಗೂ ತಾನೇ.
 
[ಮುಂದಿರುವ ಇದು ಅಮೃತವಾದ ಬ್ರಹ್ಮವೇ; ಹಿಂದೆಯೂ ದಕ್ಷಿಣಕ್ಕೂ
ಉತ್ತರಕ್ಕೂ ಇರುವುದು ಬ್ರಹ್ಮವೇ; ಕೆಳಗೂ ಮೇಲೂ ಪ್ರಸರಿಸಿರುವುದು ಬ್ರಹ್ಮವೇ.
ಈ ಜಗತ್ತೆಲ್ಲವೂ ಶ್ರೇಷ್ಠತಮವಾದ ಬ್ರಹ್ಮವೇ? ಬ್ರಹ್ಮವೇದಮಮೃತಂ ಪುರಸ್ತಾ
ದೃಹ್ಮ ಪಶ್ಚಾಷ್ಪಹ್ಮ ದಕ್ಷಿಣತತ್ತರೇಣ । ಅಧರ್ಧಂ ಚ ಪ್ರಕೃತಂ
ಬ್ರಹ್ಮವೇದಂ ವಿಶ್ವಮಿದಂ ವರಿಷ್ಮಮ್ । (ಮುಂಡಕ ಉ. ೨, ೨, ೧೨) ಎಂಬ
ಮಂತ್ರದ ಛಾಯೆಯನ್ನು ಇಲ್ಲಿ ನೋಡಬಹುದು.]
 
ತರಂಗ-ಫೇನ-ಭ್ರಮ-ಬುದ್ದು ದಾದಿ
 
ಸರ್ವ೦ ಸ್ವರೂಪೇಣ ಜಲಂ ಯಥಾ ತಥಾ ।
ಚಿದೇವ ದೇಹಾಹಮಂತಮೇತತ್
 
ಸರ್ವ೦ ಚಿದೇವೈಕರಸಂ ವಿಶುದ್ಧಮ್ ॥ ೩೮೯ ॥
 
ತರಂಗ- ಫೇನ ಭ್ರಮ. ಬುದ್ದು ದಾದಿ ಸರ್ವ೦– ಅಲೆ ನೊರೆ ಸುಳಿ ಗುಳ್ಳೆ
ಮೊದಲಾದುದೆಲ್ಲವೂ ಯಥಾ- ಹೇಗೆ ಸ್ವರೂಪೇಣ-ನಿಜವಾದ ಸ್ಥಿತಿಯಿಂದ ಜಲಂ-
ನೀರೇ ಆಗಿರುವುದೋ ತಥಾ - ಹಾಗೆಯೇ ದೇಹಾದಿ. ಅಹಮಂತನ ಏತತ್
 
ಸರ್ವ೦ ದೇಹವೇ ಮೊದಲಾಗಿ ಅಹಂಕಾರದ ವರೆಗಿನ ಇದೆಲ್ಲವೂ ಚಿತ್ ಏವ=
ಚಿತ್ ಸ್ವರೂಪವೇ ಏಕರಸಂ ಏಕರಸವಾದ ವಿಶುದ್ಧಂ ವಿಶುದ್ಧವಾದ ಚಿತ್ ಏವ
ಚಿತ್ ಸ್ವರೂಪವೇ.
 
೩೮೯, ಹೇಗೆ ಅಲೆ ನೊರೆ ಸುಳಿ ಗುಳ್ಳೆ ಮೊದಲಾದುವೆಲ್ಲವೂ ನಿಜ
ವಾದ ಸ್ಥಿತಿಯಿಂದ ನೀರೇ ಆಗಿರುವುದೊ ಹಾಗೆಯೇ ದೇಹವೇ ಮೊದಲಾಗಿ
ಅಹಂಕಾರದ ವರೆಗಿನ ಇದೆಲ್ಲವೂ ಚಿತ್ರ ಸ್ವರೂಪವೇ, ಏಕರಸವಾದ ವಿಶುದ್ಧ
ಚಿನ್ಮಾತ್ರವೇ.
 
ಸದೇವೇದಂ ಸರ್ವಂ ಜಗದವಗತಂ ನಾನಸಯೋ
ಸತೋಽನನ್ನಾವ ಪ್ರಕೃತಿ-ಪರಸೀಮಿ ಸ್ಥಿತವತಃ ।
ಪೃಥಕ್ ಕಿಂ ಮೃತ್ಯಾಯಾಃ ಕಲಶ-ಘಟ-ಕುಂಭಾದ್ಯವಗತಂ
ವದತೈಷ ಭ್ರಾಂತಮಹಮಿತಿ ಮಾಯಾ-ಮದಿರಯಾ ॥ ೩೯೦ ॥