This page has not been fully proofread.

ವಿವೇಕಚೂಡಾಮಣಿ
 
[೩೮೭
 
ನಾಶವಾದಾಗ ದೃಷ್ಟ-ಅಹಿತತ್ತ್ವ - ನೋಡಲ್ಪಟ್ಟ ಸರ್ಪದ ಯಥಾರ್ಥ ಸ್ಥಿತಿಯು
ರಜ್ಜು ಭಾತಿ - ಹಗ್ಗವೇ ಆಗಿರುತ್ತದೆ; ತದ್ವತ್ . ಹಾಗೆಯೇ ವಿಶ್ವ - ವಿಶ್ವವು
ಆತ್ಮಸ್ವರೂಪಂ - ಆತ್ಮಸ್ವರೂಪವಾಗಿರುವುದು.
 
೨೦೦
 
೩೮೬. ಯಾವುದು ಯಾವ ವಸ್ತುವಿನಲ್ಲಿ ಭ್ರಾಂತಿಯಿಂದ ಕಲ್ಪಿತವಾಗಿರು
ವುದೋ ಅದು ಅವೆರಡನ್ನೂ ವಿವೇಚಿಸಿದಾಗ ಅಧಿಷ್ಟಾನವಾಗಿರುವುದೇ
ಹೊರತು ಅದಕ್ಕಿಂತ ಭಿನ್ನವಾಗಿರುವುದಿಲ್ಲ. ಭ್ರಾಂತಿಯು ನಾಶವಾದಾಗ
ನೋಡಲ್ಪಟ್ಟ ಸರ್ಪದ ಯಥಾರ್ಥಸ್ಥಿತಿಯು ಹಗ್ಗವೇ ಆಗಿರುತ್ತದೆ; ಹಾಗೆಯೇ
(ಭ್ರಾಂತಿಯಿಂದ ಕಲ್ಪಿತವಾದ) ವಿಶ್ವವು ಆತ್ಮಸ್ವರೂಪವೇ ಆಗಿರುತ್ತದೆ.
 
ಸ್ವಯಂ ಬ್ರಹ್ಮಾ ಸ್ವಯಂ ವಿಷ್ಣುಃ ಸ್ವಯಮಿಂದ್ರಃ ಸ್ವಯಂ ಶಿವಃ ।
ಸ್ವಯಂ ವಿಶ್ವಮಿದಂ ಸರ್ವಂ ಸ್ವಸಾದಯ್ಯನ್ನ ಕಿಂಚನ ॥ ೩೮೭ ॥
 
ಇದಂ ಸರ್ವ೦
 
ಸ್ವಯಂ- ತಾನೇ ಬ್ರಹ್ಮಾ-ಬ್ರಹ್ಮನು, ಸ್ವಯಂ ವಿಷ್ಣುಃ = ವಿಷ್ಣು, ಸ್ವಯಮ್
ಇಂದ್ರಃ = ಇಂದ್ರ, ಸ್ವಯಂ ಶಿವಃ - ಶಿವ, ಸ್ವಯಂ - ತಾನೇ
ವಿಶ್ವಂ ಈ ವಿಶ್ವವೆಲ್ಲ (ಆಗಿರುತ್ತಾನೆ]; ಸ್ವಸ್ಮಾತ್ - ತನಗಿಂತಲೂ ಅನ್ಯತ್ ಕಿಂಚನ
ಬೇರೆ ಯಾವುದೊಂದೂ ನ - ಇರುವುದಿಲ್ಲ.
 
೩೮೭, ತಾನೇ ಬ್ರಹ್ಮನು, ತಾನೇ ವಿಷ್ಣು, ತಾನೇ ಇಂದ್ರ, ತಾನೇ ಶಿವ,
ತಾನೇ ವಿಶ್ವವೆಲ್ಲವೂ (ಆಗಿರುತ್ತಾನೆ). ತನಗಿಂತ ಬೇರೆ ಯಾವುದೊಂದೂ
ಇರುವುದಿಲ್ಲ.
 
['ಋಷಿ ವಾಮದೇವನು ಇದನ್ನು ಬ್ರಹ್ಮವೆಂದು ಸಾಕ್ಷಾತ್ಕರಿಸಿದಾಗ "ನಾನು ಮನು
ಮತ್ತು ಸೂರ್ಯ" ಎಂದು ಅರಿತುಕೊಂಡನು' ತದ್ಧಿತತ್ ಪಶ್ಯನ್ ಋಷಿರ್ವಾ
ಮದೇವಃ ಪ್ರತಿಪೇದೇಹಂ ಮನುರಭವಂ ಸೂರ್ಯಶ್ಚತಿ (ಬೃಹದಾರಣ್ಯಕ ಉ
 
n. 9. no).]
 
ಅಂತಃ ಸ್ವಯಂ ಚಾಪಿ ಬಹಿಃ ಸ್ವಯಂ ಚ
ಸ್ವಯಂ ಪುರಸ್ತಾತ್ ಸ್ವಯಮೇವ ಪಶ್ಚಾತ್ ।
ಸ್ವಯಂ ಹೈವಾಚ್ಯಾಂ ಸ್ವಯಮುದೀಚ್ಯಾಂ
ತಥೋಪರಿಷ್ಟಾತ್ ಸ್ವಯಮಾಧಸ್ವಾತ್
 
। ೩೮೮ ।
 
ಅಂತಃ ಚ = ಒಳಗೆ ಸ್ವಯಂ - ತಾನೇ, ಅಪಿ = ಮತ್ತು ಬಹಿಃ ಚ ಹೊರಗೆ
ಸ್ವಯಂ, ಪುರಸ್ತಾತ್ ಮುಂದುಗಡೆ ಸ್ವಯಂ, ಪಶ್ಚಾತ್-ಹಿಂದುಗಡೆ ಸ್ವಯಮ್
ಏವ, ಅವಾಚ್ಯಾಂ - ದಕ್ಷಿಣದಲ್ಲಿಯೂ ಸ್ವಯಂ ಹಿ, ಉದೀಚ್ಯಾಮ್ ಆಪಿ