This page has not been fully proofread.

ವಿವೇಕಚೂಡಾಮಣಿ
 
೩ ತಿಳಿದುಕೊಳ್ಳಬೇಕೆಂಬ ಬಯಕೆಗೆ ಜಿಜ್ಞಾಸೆ ಎಂದು ಹೆಸರು; ಬ್ರಹ್ಮದ ಜಿಜ್ಞಾಸೆ
ಬ್ರಹ್ಮಜಿಜ್ಞಾಸೆ.]
 

 
೧೯]
 
00
 
ಸಾಧನಾನ್ಯತ ಚತ್ವಾರಿ ಕಥಿತಾನಿ ಮನೀಷಿಭಿಃ ।
ಯೇಷು ಸವ ಸನ್ನಿಷ್ಟಾ ಯದಭಾವೇ ನ ಸಿದ್ಧತೆ ॥ ೧೮ ॥
 
ಚಿತ್ರ - ಈ ವಿಷಯದಲ್ಲಿ ಮನೀಷಿಭಿಃ = ಜ್ಞಾನಿಗಳಿಂದ ಚತ್ವಾರಿ = ನಾಲ್ಕು
ಸಾಧನಾನಿ - ಸಾಧನಗಳು ಕಥಿತಾನಿ = ಹೇಳಲ್ಪಟ್ಟಿವೆ; ಯೇಸು ಸತ್ತು ಏವ
ಯಾವ ಸಾಧನೆಗಳಿದ್ದರೆ ಸನ್ನಿಷ್ಠಾ = ಬ್ರಹ್ಮನಿಷ್ಠೆಯು ಸಿದ್ಧತಿ - ಸಿದ್ಧಿಸುವುದು,
ಯದಭಾವೇ - ಯಾವುದು ಇಲ್ಲದಿದ್ದರೆ ನ - ಸಿದ್ಧಿಸುವುದಿಲ್ಲ.
 
ಈ ಬ್ರಹ್ಮಜ್ಞಾನವಿಷಯದಲ್ಲಿ ಜ್ಞಾನಿಗಳು ನಾಲ್ಕು ಸಾಧನಗಳನ್ನು
ಹೇಳಿರುತ್ತಾರೆ. ಇವು ಇದ್ದರೆ ಬ್ರಹ್ಮನಿಷ್ಠೆಯು ಸಿದ್ಧಿಸುವುದು, ಇಲ್ಲದಿದ್ದರೆ
ಸಿದ್ಧಿಸುವುದಿಲ್ಲ.
 
ಆದ್ ನಿತ್ಯಾನಿತ್ಯ-ವಸ್ತು-ವಿವೇಕಃ ಪರಿಗಣ್ಯತೇ ।
ಇಹಾಮುತ್ರ-ಫಲಭೋಗ-ವಿರಾಗಸ್ತದನಂತರಮ್ ।
ಶಮಾದಿ-ಪಟ್ಟ-ಸಂಪತ್ತಿರ್ಮುಮುಕುತ್ವಮಿತಿ ಸ್ಪುಟಮ್ ॥ ೧೯ ।
 
ಆದೌ = ಮೊದಲು ನಿತ್ಯ. ಅ ನಿತ್ಯ, ವಸ್ತು-ವಿವೇಕಃ ನಿತ್ಯಾನಿತ್ಯವಸ್ತು-
ವಿವೇಕವು ಪರಿಗಣ್ಯತೇ - ಎಣಿಸಲ್ಪಡುತ್ತದೆ; ತದ್. ಅನಂತರಂ ಅದಾದಮೇಲೆ
ಇಹ ಅಮುತ್ರ,ಫಲಭೋಗ ರಾಗಃ = ಇಲ್ಲಿ ಮತ್ತು ಪರಲೋಕದಲ್ಲಿ [ಅನುಭವಿ
ಸುವ ಕರ್ಮಫಲದ ಭೋಗಗಳಲ್ಲಿ ವೈರಾಗ್ಯವು [ಎಣಿಸಲ್ಪಡುತ್ತದೆ]; [ಅದಾದಮೇಲೆ
ಶಮಾದಿ. ಪಟ್ಟ ಸಂಪತ್ತಿಃ = ಶಮವೇ ಮೊದಲಾದ ಆರರ ಲಾಭವು [ಎಣಿಸಲ್ಪಡು
ಇದೆ; [ಅದಾದಮೇಲೆ ಮುಮುಕ್ಷುತ್ವಂ ಮೋಕ್ಷೇಚ್ಛೆಯು ಇತಿ - ಹೀಗೆ
(ಸಾಧನಚತುಷ್ಟಯವು ಸ್ಪುಟಂ - ಸ್ಪುಟವಾಗಿದೆ.
 
ನಿತ್ಯಾನಿತ್ಯವಸ್ತುವಿವೇಕವು ಮೊದಲನೆಯ ಸಾಧನವೆಂದೂ ಇಲ್ಲಿ
 
೧೯.
 
ಮತ್ತು ಪರಲೋಕದಲ್ಲಿ ಅನುಭವಿಸುವ ಕರ್ಮಫಲದ ಭೋಗಗಳಲ್ಲಿ
ವೈರಾಗ್ಯವು ಎರಡನೆಯ ಸಾಧನವೆಂದೂ ಶಮವೇ ಮೊದಲಾದ ಆರರ
ಲಾಭವು ಮೂರನೆಯ ಸಾಧನವೆಂದೂ ಮೋಕ್ಷೇಚ್ಛೆಯು ನಾಲ್ಕನೆಯ
ಸಾಧನವೆಂದೂ (ಜ್ಞಾನಿಗಳು) ಸ್ಪಷ್ಟವಾಗಿ ಎಣಿಸಿರುತ್ತಾರೆ.
 
(ವಿವೇಕವೇ ಮೊದಲಾದ ನಾಲ್ಕು ಸಾಧನಗಳಲ್ಲಿ ಹಿಂದುಹಿಂದಿನದು ಮುಂದು
ಮುಂದಿನದಕ್ಕೆ ಕಾರಣವಾಗಿರುವುದರಿಂದ ಇವುಗಳನ್ನು ಕ್ರಮವಾಗಿ ಹೇಳಿದೆ.
೧ ಶಮ, ದಮ, ಉಪರತಿ, ತಿತಿಕ್ಷೆ, ಶ್ರದ್ಧೆ ಮತ್ತು ಸಮಾಧಾನ.