This page has been fully proofread once and needs a second look.

ಘಟ- ಕಲಶ,- ಕುಸೂಲ.- ಸೂಚಿ.- ಮುಖ್ಯಃ –ಯೈಃ = ಗಡಿಗೆ ಕಲಶ ಕಣಜ ಸೂಜಿ
ಮೊದಲಾದ, ಉಪಾಧಿಶತೈಃ = ನೂರಾರು ಉಪಾಧಿಗಳಿಂದ, ವಿಮುಕ್ತಂ = ಬಿಡಲ್ಪಟ್ಟ,
ಗಗನಂ= ಗಗನವು, ಏಕಂ ಭವತಿ = ಒಂದೇ ಆಗಿರುತ್ತದೆ, ವಿವಿಧಂ ನ -= ಬಗೆಬಗೆ-
ಯಾಗಿರುವುದಿಲ್ಲ; ತಥಾ ಏವ=ಹಾಗೆಯೇ, ಅಹಮ್.- ಆದಿ.- ವಿಮುಕ್ತಂ- ಅಹಂ-
ಕಾರಾದಿಗಳಿಂದ ಬಿಡಲ್ಪಟ್ಟ, ಶುದ್ಧಂ = ಶುದ್ಧವಾದ, ಪರಂ -= ಪರಮಾರ್ಥವು, ಏಕಮ್
ಏವ = ಒಂದೇ ಆಗಿರುತ್ತದೆ.
 
೩೮೪. ಗಡಿಗೆ ಕಲಶ ಕಣಜ ಸೂಜಿ ಮೊದಲಾದ ಯಾವ ಉಪಾಧಿ-
ಗಳೂ ಇಲ್ಲದ ಆಕಾಶವು ಒಂದೇ ಆಗಿರುವುದೇ ಹೊರತು ಬಗೆ ಬಗೆಯಾಗಿರು-
ವುದಿಲ್ಲ; ಹಾಗೆಯೇ ಅಹಂಕಾರಾದಿಗಳಿಲ್ಲದ ಶುದ್ಧವಾದ ಪರಮಾರ್ಥವು
ಒಂದೇ ಆಗಿರುತ್ತದೆ.
 
ಬ್ರಹ್ಮಾದಿ-ಸ೦ಸ್ತಂಬಪರ್ಯಂತಾ ಮೃಷಾಮಾತ್ರಾ ಉಪಾಧಯಃ ।
ತತಃ ಪೂರ್ಣ೦ಣಂ ಸ್ವಮಾತ್ಮಾನಂ ಪಶ್ಯೇದೇಕಾತ್ಮನಾ ಸ್ಥಿತಮ್ II ೩೮೫ ॥
 
ಬ್ರಹ್ಮಾದಿ.- ಸ್ತಂಬಪರ್ಯಂತಾಃ= ಬ್ರಹ್ಮನಿಂದ ಹಿಡಿದು ಒಂದು ಹುಲ್ಲು ಕಡ್ಡಿಯ-
ವರೆಗಿರುವ, ಉಪಾಧಯಃ = ಉಪಾಧಿಗಳು, ಮೃಷಾಮಾತ್ರಾಃ = ಕೇವಲ ಮಿಥ್ಯಾ
ಸ್ವರೂಪವಾದುವುಗಳು; ತತಃ = ಆದುದರಿಂದ, ಏಕಾತ್ಮನಾ ಸ್ಥಿತಂ = ಒಂದೇ ರೂಪ-
ದಲ್ಲಿರುವ, ಪೂರ್ಣ೦ಣಂ= ಪೂರ್ಣನಾದ ಸ್ವಮ, ಸ್ವಮ್ ಆತ್ಮಾನಂ-= ತನ್ನ ಆತ್ಮನನ್ನು, ಪಶ್ಚಿತ್-ಯೇತ್=
ಸಾಕ್ಷಾತ್ಕರಿಸಬೇಕು.
 
೩೮೫,. ಬ್ರಹ್ಮನಿಂದ ಹಿಡಿದು ಹುಲ್ಲು ಕಡ್ಡಿಯ ವರೆಗಿರುವ ಉಪಾಧಿ-
ಗಳೆಲ್ಲವೂ ಕೇವಲ ಮಿಥೈಯೇ ಆಗಿರುತ್ತವೆ. ಆದುದರಿಂದ ಒಂದೇ ರೂಪ-
ದಲ್ಲಿರುವ ಪೂರ್ಣನಾದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಬೇಕು.
 
ಯತ್ರ ಭ್ರಾಂತ್ಯಾ ಕಲ್ಪಿತಂ ತದ್ವಿವೇಕೇ
ತತ್ತನ್ಮಾತ್ರಂ ನೈವ ತಸ್ಮಾದ್ವಿಭಿನ್ನಮ್ ।
ಭ್ರಾಂತೇರ್ನಾಶೇ ಭಾತಿ ದೃಷ್ಟಾಹಿತತ್ವಂ
ರಜ್ಜುಸ್ತದ್ವದ್ವಿಶ್ವಮಾತ್ಮಸ್ವರೂಪಮ್ ॥ ೩೮೬ ॥
 
[ಯಾವುದು] ಯತ್ರ= ಯಾವುದರಲ್ಲಿ, ಭ್ರಾಂತ್ಯಾ = ಭ್ರಾಂತಿಯಿಂದ, ಕಲ್ಪಿತಂ =
ಕಲ್ಪಿತವಾಗಿರುವುದೊ, ತದ್ವಿವೇಕೇ = ಅದನ್ನು ವಿವೇಚಿಸಿದಾಗ, ತತ್= ಅದು,
ತನ್ಮಾತ್ರಂ= ಕಲ್ಪನೆಗೆ ಆಶ್ರಯವಾದ ವಸ್ತುವೇ [ಆಗುತ್ತದೆ], ತಸ್ಮಾತ್= ಅದಕ್ಕಿಂತಲೂ,
ವಿಭಿನ್ನಂ= ಬೇರೆಯಾದದ್ದು, ನ ಏವ= ಆಗುವುದಿಲ್ಲ; ಭ್ರಾಂತೇಃ ನಾಶೇ= ಭ್ರಾಂತಿಯು