This page has not been fully proofread.

೧೯೬
 
ವಿವೇಕಚೂಡಾಮಣಿ
 
[೩೭೮
 
ಲಕ್ಷ್ಮೀ-ಲಕ್ಷ್ಯವಾಗಿರುವ ಬ್ರಹ್ಮಣಿ ಬ್ರಹ್ಮದಲ್ಲಿ ಮಾನಸಂ ಮನಸ್ಸನ್ನು ದೃಢ
ತರಂ- ದೃಢವಾಗಿ ಸಂಸ್ಥಾಪ್ಯ - ನೆಲೆಗೊಳಿಸಿ, ಬಾಹೇಂದ್ರಿಯಂ = ಬಾಹೇಂದ್ರಿಯ
ಸಮುದಾಯವನ್ನು ಸ್ವ ಸ್ಥಾನೇ - ತಮ್ಮ ತಮ್ಮ ಗೋಲಕದಲ್ಲಿಯೇ ವಿನಿವೇಶ್ಯ
ನಿಲ್ಲಿಸಿ, ನಿಶ್ಚಲತನುಃ - ನಿಶ್ಚಲಶರೀರನಾಗಿ, ದೇಹಸ್ಥಿತಿಂ = ಶರೀರರಕ್ಷಣೆಯನ್ನು
ಉಪೇಕ್ಷ - ಉಪೇಕ್ಷಿಸಿ, ಬ್ರಹ್ಮಾಸ್ಮಿಕ್ಯಂ - ಬ್ರಹ್ಮಾಕ್ಯವನ್ನು ಉಪೇತೃ-
ಹೊಂದಿ, ತನ್ಮಯತಯಾ – ಬ್ರಹ್ಮಸ್ವರೂಪವೇ ಆಗಿರುವ, ಅಖಂಡವೃತ್ತಾ ಚ =
ಅಖಂಡಾಕಾರವೃತ್ತಿಯಿಂದ ಅನಿಶಂ - ಯಾವಾಗಲೂ ಆತ್ಮನಿ-ನಿನ್ನಲ್ಲಿಯೇ
ನಂದರಸಂ - ಬ್ರಹ್ಮಾನಂದರಸವನ್ನು ಮುದಾ = ಸಂತೋಷದಿಂದ ಪಿಬ- ಕುಡಿ;
ಶೂನ್ಯಃ - ಶೂನ್ಯವಾದ ಅನ್ಯಃ ಭ್ರಮೈಃ - ಇತರ ಭ್ರಮೆಗಳಿಂದ ಕಿ೦- ಪ್ರಯೋಜನ
 
ಬ್ರಹ್ಮಾ.
 
ವೇನು?
 
೩೭೭ ಲಕ್ಷ್ಮವಾಗಿರುವ ಬ್ರಹ್ಮದಲ್ಲಿ ಮನಸ್ಸನ್ನು ದೃಢವಾಗಿ ನೆಲೆ
ಗೊಳಿಸಿ, ಬಾಹೇಂದ್ರಿಯಗಳನ್ನು ತಮ್ಮ ತಮ್ಮ ಗೋಲಕಗಳಲ್ಲಿಯೇ ನಿಲ್ಲಿಸಿ,
ಶರೀರವನ್ನು ನಿಶ್ಚಲವಾಗಿ ಮಾಡಿಕೊಂಡು, ಶರೀರ ರಕ್ಷಣೆಯನ್ನು ಉಪೇಕ್ಷಿಸಿ,
ಬ್ರಹ್ಮಾತ್ಮಕ್ಯವನ್ನು ಹೊಂದಿ, ಬ್ರಹ್ಮಸ್ವರೂಪವೇ ಆಗಿರುವ ಅಖಂಡಾಕಾರ
ವೃತ್ತಿಯಿಂದ ಯಾವಾಗಲೂ ನಿನ್ನಲ್ಲಿಯೇ ಬ್ರಹ್ಮಾನಂದರಸವನ್ನು ಸಂತೋಷ
ದಿಂದ ಕುಡಿ. ಶೂನ್ಯವಾದ ಇತರ ಭ್ರಮೆಗಳಿಂದ ಏನು ಪ್ರಯೋಜನ?
 
ಅನಾತ್ಮಚಿಂತನಂ ತ್ಯಾ ಕಶಲಂ ದುಃಖಕಾರಣಮ್ ।
ಚಿಂತಯಾತ್ಮಾನಮಾನಂದರೂಪಂ ಯನ್ನು ಕಾರಣಮ್ ॥ ೩೭೮ ।
 
ಕಸ್ಮಲಂ ಕಲ್ಮಲವಾದ ದುಃಖಕಾರಣಂ = ದುಃಖಕ್ಕೆ ಕಾರಣವಾದ ಅನಾತ್ಮ
ಚಿಂತನಂ - ಅನಾತ್ಮಚಿಂತನವನ್ನು ತ್ಯಾ - ತೊರೆದು, ಯತ್ = ಯಾವುದು
ಮುಕ್ತಿಕಾರಣಂ = ಮುಕ್ತಿಗೆ ಕಾರಣವಾಗಿರುವುದೋ ಆನಂದರೂಪಂ = [ಆ] ಆನಂದ
ರೂಪನಾದ ಆತ್ಮಾನಂ - ಆತ್ಮನನ್ನು ಚಿಂತಯ - ಧ್ಯಾನಿಸು.
 
೩೭೮, ಕಶಲವೂ ದುಃಖಕ್ಕೆ ಕಾರಣವೂ ಆಗಿರುವ ಅನಾತ್ಮಚಿಂತನ
ವನ್ನು ತೊರೆದು ಮುಕ್ತಿಗೆ ಕಾರಣನೂ ಆನಂದರೂಪನೂ ಆದ ಆತ್ಮನನ್ನೇ
ಧ್ಯಾನಿಸು.
 
ಏಷ ಸ್ವಯಂಜ್ಯೋತಿರ ಶೇಷಸಾಕ್ಷೀ
ವಿಜ್ಞಾನ ಕೋಶೇ ವಿಲಸತ್ಯಜಸ್ರಮ್ ।
ಲಕ್ಷಂ ವಿಧಾಯ್ಕೆನಮಸದ್ವಿಲಕ್ಷಣ.
 
ಮುಖಂಡವೃತ್ತಾತ್ಮತಯಾನುಭಾವಯ ॥ ೩೭೯ ॥