This page has not been fully proofread.

౧ లల
 
ವಿವೇಕಚೂಡಾಮಣಿ
 
ನಿರಂತರಾಭ್ಯಾಸವಶಾತ್ ತದಿಂ
ಪಕ್ಕಂ ಮನೋ
ತದಾ ಸಮಾಧಿ: ಸವಿಕಲ್ಪ ವರ್ಜಿತಃ
 
ಸ್ವತೋದ್ವಯಾನಂದ-ರಸಾನುಭಾವಕ ॥ ೩೬೧ ।
 
ಬ್ರಹ್ಮಣಿ ಲೇಯತೇ ಯದಾ ।
 
[೩೬೧
 
ಇತ್ಥಂ = ಹೀಗೆ ನಿರಂತರ ಅಭ್ಯಾಸ, ವಶಾತ್ - ನಿರಂತರ ಧ್ಯಾನಾಭ್ಯಾಸದ ವಶ
ದಿಂದ ತತ್ ಮನಃ = ಆ ಮನಸ್ಸು ಪಕ್ವc - ಪಕ್ವವಾಗಿ ಯದಾ - ಯಾವಾಗ
ಬ್ರಹ್ಮಣಿ ಬ್ರಹ್ಮದಲ್ಲಿ ಲೀಯತೇ ಲಯವಾಗುತ್ತದೆಯೊ ತದಾ- ಆಗ ಸ್ವತಃ ತಾನೇ
ಅದ್ವಯಾನಂದ ರಸ, ಅನುಭಾವಕಃ - ಬ್ರಹ್ಮಾನಂದ ರಸಾನುಭವಕ್ಕೆ ಕಾರಣವಾದ
ಸವಿಕಲ್ಪವರ್ಜಿತಃ = ವಿಕಲ್ಪರಹಿತವಾದ ಸಮಾಧಿಃ = ಸಮಾಧಿಯಾಗುತ್ತದೆ.
 
=
 
೩೬೧. ಹೀಗೆ ನಿರಂತರಧ್ಯಾನಾಭ್ಯಾಸದ ವಶದಿಂದ ಆ ಮನಸ್ಸು ಪಕ್ವ
ವಾಗಿ ಯಾವಾಗ ಬ್ರಹ್ಮದಲ್ಲಿ ಲಯವಾಗುತ್ತದೆಯೋ ಆಗ ತಾನೇ ಬ್ರಹ್ಮಾನಂದ
ರಸದ ಅನುಭವಕ್ಕೆ ಕಾರಣವಾದ ನಿರ್ವಿಕಲ್ಪ ಸಮಾಧಿಯಾಗುತ್ತದೆ.
 
ಸಮಾಧಿನಾನೇನ ಸಮಸ್ತ-ವಾಸನಾ-
ಗ್ರಂಥರ್ವಿನಾಶೋಖಿಲಕರ್ಮನಾಶಃ ।
ಅಂತರ್ಬಹಿ ಸರ್ವತ ಏವ ಸರ್ವದಾ
 
ಸ್ವರೂಪ-ವಿಸ್ಫೂರ್ತಿರಯತ್ನತಃ ಸ್ಯಾತ್ I ೩೬೨ ॥
ಅನೇನ ಸಮಾಧಿನಾ - ಈ ಸಮಾಧಿಯಿಂದ ಸಮಸ್ತವಾಸನಾ-ಗ್ರಂಥ
ಸಮಸ್ತ ವಾಸನಾ ಗ್ರಂಥಿಯ ವಿನಾಶಃ - ನಾಶವೂ ಅಖಿಲ. ಕರ್ಮ-ನಾಶಃ ಸಮಸ್ತ
ಕರ್ಮಗಳ ನಾಶವೂ [ಆಗಿ] ಅಂತಃ ಒಳಗೂ ಬಹಿಃ = ಹೊರಗೂ ಸರ್ವತಃ ಏವ
ಎಲ್ಲಾ ಕಡೆಗಳಲ್ಲಿಯೂ ಸರ್ವದಾ = ಯಾವಾಗಲೂ ಆ ಅಯತ್ನತಃ ಯಾವ ಪ್ರಯ
ತ್ನವೂ ಇಲ್ಲದೆ ಸ್ವರೂಪ ಸ್ಪೂರ್ತಿಃ - ಆತ್ಮಸ್ವರೂಪದ ಪ್ರಕಾಶವು ಸ್ಯಾತ್ =
ಉಂಟಾಗುತ್ತದೆ.
 
೩೬೨. ಈ ನಿರ್ವಿಕಲ್ಪ ಸಮಾಧಿಯಿಂದ ಸಮಸ್ತ ವಾಸನಾ-ಗ್ರಂಥಿಯ
ನಾಶವೂ (ಸಂಚಿತವಾದ) ಸಮಸ್ತಕರ್ಮಗಳ ನಾಶವೂ ಆಗಿ, ಒಳಗೂ
ಹೊರಗೂ ಎಲ್ಲಾ ಕಡೆಗಳಲ್ಲಿಯೂ ಯಾವಾಗಲೂ ಯಾವ ಪ್ರಯತ್ನವೂ
ಇಲ್ಲದೆ ಆತ್ಮಸ್ವರೂಪದ ಪ್ರಕಾಶವು ಉಂಟಾಗುತ್ತದೆ.
 
ಶ್ರುತೇಃ ಶತಗುಣಂ ವಿದ್ಯಾನನನಂ ಮನನಾದಪಿ ।
ನಿದಿಧ್ಯಾಸಂ ಲಕ್ಷಗುಣಮನಂತಂ ನಿರ್ವಿಕಲ್ಪ ಕಮ್ ॥ ೩೬೩ ॥