This page has been fully proofread once and needs a second look.

ಸಮಾಹಿತಾ ಯೇ ಪ್ರವಿಲಾಪ್ಯ ಬಾಹ್ಯಂ
ಶ್ರೋತ್ರಾದಿ ಚೇತಃ ಸ್ವಮಹಂ ಚಿದಾತ್ಮನಿ ।
ತ ಏವ ಮುಕ್ತಾ ಭವಪಾಶಬಂಧೈ-
ರ್ನಾನ್ಯೇ ತು ಪಾರೋಕ್ಷ್ಯ-ಕಥಾಭಿಧಾಯಿನಃ ॥ ೩೫೫ ॥
 
ಯೇ = ಯಾರು, ಬಾಹ್ಯಂ = ಹೊರಗಿನ, ಶ್ರೋತ್ರಾದಿ = ಸ್ತೋತ್ರವೇ ಮೊದ-
ಲಾದ ಸಮುದಾಯವನ್ನು, ಚೇತಃ = ಚಿತ್ತವನ್ನು, ಸ್ವಮ್ ಅಹಂ = ತನ್ನ ಅಹಂಕಾರ-
ವನ್ನು, ಚಿದಾತ್ಮನಿ = ಚಿದಾತ್ಮನಲ್ಲಿ, ಪ್ರವಿಲಾಪ್ಯ = ಲಯಮಾಡಿಕೊಂಡು, ಸಮಾಹಿತಾಃ =
ಸಮಾಹಿತರಾಗಿರುವರೋ, ತೇ ಏವ = ಅಂತಹವರೇ, ಭವ-ಪಾಶ-ಬಂದೈಃ = ಸಂಸಾರ
ಪಾಶಗಳ ಬಂಧಗಳಿಂದ, ಮುಕ್ತಾಃ = ಮುಕ್ತಿಯನ್ನು ಹೊಂದಿರುವರು-- ಪಾರೋಕ್ಷ್ಯ-
ಕಥಾ-ಅಭಿಧಾಯಿನಃ = ಪರೋಕ್ಷವಾಗಿರುವ ಮಾತುಗಳನ್ನು ಆಡುವವರಾದ, ಅನ್ಯೇ =
ಇತರರು, ನ ತು - ಅಲ್ಲ.
 
೩೫೫. ಯಾರು ತಮ್ಮ ಹೊರಗಿನ ಶ್ರೋತ್ರಾದಿ ಇಂದ್ರಿಯಸಮೂಹ-
ವನ್ನೂ ಚಿತ್ರವನ್ನೂ ಅಹಂಕಾರವನ್ನೂ ಚಿದಾತ್ಮನಲ್ಲಿ ಲಯಮಾಡಿಕೊಂಡು
ಸಮಾಹಿತರಾಗಿರುವರೋ ಅವರೇ ಸಂಸಾರಪಾಶದ ಬಂಧಗಳಿಂದ ಮುಕ್ತ-
ರಾಗಿರುವರು-- ಪರೋಕ್ಷವಾದ ಮಾತುಗಳನ್ನಾಡುವ ಇತರರಲ್ಲ.[^೧]
 
[^೧] ಸಮಾಧಿಯಿಲ್ಲದೆ ಕೇವಲ ಶ್ರವಣದಿಂದ ಬ್ರಹ್ಮಾನುಭವವು ಉಂಟಾಗುವುದಿಲ್ಲ
ಎಂಬುದು ತಾತ್ಪರ್ಯ.]
 
ಉಪಾಧಿ-ಭೇದಾತ್ ಸ್ವಯಮೇವ ಭಿದ್ಯತೇ
ಚೋಪಾಧ್ಯಪೋಹೇ ಸ್ವಯಮೇವ ಕೇವಲಃ ।
ತಸ್ಮಾದುಪಾಧೇರ್ವಿಲಯಾಯ ವಿದ್ವಾನ್
ವಸೇತ್ ಸದಾಽಕಲ್ಪಸಮಾಧಿನಿಷ್ಠಯಾ ॥ ೩೫೬ ॥
 
ಉಪಾಧಿ-ಭೇದಾತ್ = ಉಪಾಧಿಭೇದಗಳ ದೆಸೆಯಿಂದ, ಸ್ವಯಮ್ ಏವ =
ತಾನೇ, ಭಿದ್ಯತೇ = ಭೇದಭಾವವನ್ನು ಹೊಂದುತ್ತಾನೆ, ಉಪಾಧಿ-ಅಪೋಹೇ ಚ =
ಮತ್ತು ಉಪಾಧಿಗಳ ನಿರಸನವಾದಾಗ, ಸ್ವಯಮ್ ಏವ = ತಾನೇ, ಕೇವಲಃ =
ಕೇವಲನಾಗುತ್ತಾನೆ; ತಸ್ಮಾತ್ = ಆದುದರಿಂದ, ವಿದ್ವಾನ್ = ಜ್ಞಾನಿಯು, ಉಪಾಧೇಃ =
ಉಪಾಧಿಯ, ವಿಲಯಾಯ = ನಾಶಕ್ಕಾಗಿ, ಸದಾ = ಯಾವಾಗಲೂ, ಅಕಲ್ಪ-ಸಮಾಧಿ-
ನಿಷ್ಠಯಾ = ನಿರ್ವಿಕಲ್ಪ ಸಮಾಧಿ-ನಿಷ್ಠೆಯಿಂದ, ವಸೇತ್ = ಇರಬೇಕು.
 
೩೫೬. ಆತ್ಮನು ಒಬ್ಬನೇ ಆಗಿದ್ದರೂ ಉಪಾಧಿಗಳ ಭೇದದಿಂದ ಭೇದ
ಭಾವವನ್ನು ಹೊಂದುತ್ತಾನೆ, ಉಪಾಧಿಗಳನ್ನು ತೆಗೆದುಹಾಕಿದಾಗ[^೧] ಒಬ್ಬನೇ