This page has been fully proofread once and needs a second look.

ಪ್ರಭವತಿ = ಉಂಟಾಗುತ್ತದೆ; ಅಸ್ಯ = ಇವನಿಗೆ, ಸಮಾಧೌ = ಸಮಾಧಿಯಲ್ಲಿ, ಪ್ರವಿಲ-
ಸತಿ [ಸತಿ] = [ಪರಮಾರ್ಥವು] ಪ್ರಕಾಶಿಸುತ್ತಿರುವಾಗ, ವಸ್ತುತತ್ತ್ವ-ಅಧೃತ್ಯಾ =
ವಸ್ತುಯಾಥಾತ್ಮದ ಅವಧಾರಣೆಯ ಮೂಲಕ, ಸರ್ವಃ ವಿಕಲ್ಪ = ವಿಕಲ್ಪಗಳೆ-
ಲ್ಲವೂ, ವಿಲಯನಮ್ ಉಪಗಚ್ಛೇತ್ = ವಿನಾಶವನ್ನು ಹೊಂದುತ್ತವೆ.
 
೩೫೩. ಅದ್ವಿತೀಯನೂ ವಿಶೇಷಶೂನ್ಯನೂ ಆದ ಪರಮಾತ್ಮನಲ್ಲಿ
'ನೀನು' 'ನಾನು' 'ಇದು'--ಎಂಬ ಕಲ್ಪನೆಯು ಬುದ್ಧಿದೋಷದಿಂದ ಉಂಟಾಗು-
ತ್ತದೆ. ಇವನಿಗೆ ಸಮಾಧಿಯಲ್ಲಿ (ಪರಮಾರ್ಥತತ್ತ್ವವು) ಪ್ರಕಾಶಿಸುತ್ತಿರು-
ವಾಗ ವಸ್ತುಯಾಥಾತ್ಮ್ಯದ ಅವಧಾರಣೆಯ ಮೂಲಕ ವಿಕಲ್ಪಗಳೆಲ್ಲವೂ
ವಿನಾಶವನ್ನು ಹೊಂದುತ್ತವೆ.
 
ಶಾಂತೋ ದಾಂತಃ ಪರಮುಪರತಃ ಕ್ಷಾಂತಿಯುಕ್ತಃ ಸಮಾಧಿಂ
ಕುರ್ವನ್ನಿತ್ಯಂ ಕಲಯತಿ ಯತಿಃ ಸ್ವಸ್ಯ ಸರ್ವಾತ್ಮಭಾವಮ್ ।
ತೇನಾವಿದ್ಯಾ-ತಿಮಿರ-ಜನಿತಾನ್ ಸಾಧು ದಗ್ಧ್ವಾ ವಿಕಲ್ಪಾನ್
ಬ್ರಹ್ಮಾಕೃತ್ಯಾ ನಿವಸತಿ ಸುಖಂ ನಿಷ್ಕ್ರಿಯೋ ನಿರ್ವಿಕಲ್ಪಃ ॥ ೩೫೪ ॥
 
ಶಾಂತಃ = ಶಾಂತನಾದ, ದಾಂತಃ = ದಾಂತನಾದ, ಪರಮ್ ಉಪರತಃ =
ಅತ್ಯಂತವಾಗಿ ಉಪರತನಾದ, ಕ್ಷಾಂತಿಯುಕ್ತಃ = ದ್ವಂದ್ವಸಹಿಷ್ಣುವಾದ, ಯತಿಃ =
ಯತಿಯು, ನಿತ್ಯಂ = ಯಾವಾಗಲೂ, ಸಮಾಧಿಂ ಕುರ್ವನ್ = ಸಮಾಧಿಯನ್ನು
ಮಾಡುತ್ತ, ಸ್ವಸ್ಯ = ತನ್ನ, ಸರ್ವಾತ್ಮಭಾವಂ = ಸರ್ವಾತ್ಮಭಾವವನ್ನು, ಕಲಯತಿ =
ಅನುಭವಿಸುತ್ತಾನೆ; ತೇನ = ಆ ಸಮಾಧಿಯಿಂದ, ಅವಿದ್ಯಾ-ತಿಮಿರ-ಜನಿತಾನ್ = ಅವಿದ್ಯೆ-
ಯೆಂಬ ಅಂಧಕಾರದಿಂದ ಉಂಟಾದ, ವಿಕಲ್ಪಾನ್ = ವಿಕಲ್ಪಗಳನ್ನು, ಸಾಧು ದಗ್ಧ್ವಾ =
ಚೆನ್ನಾಗಿ ಸುಟ್ಟು, ನಿಷ್ಕ್ರಿಯಃ = ನಿಷ್ಕ್ರಿಯನಾಗಿ, ನಿರ್ವಿಕಲ್ಪಃ = ನಿರ್ವಿಕಲ್ಪನಾಗಿ,
ಬ್ರಹ್ಮ-ಆಕೃತ್ಯಾ = ಬ್ರಹ್ಮಾಕಾರದಿಂದ, ಸುಖಂ ನಿವಸತಿ = ಸುಖವಾಗಿರುತ್ತಾನೆ.
 
೩೫೪. ಶಾಂತನೂ[^೧] ದಾಂತನೂ[^೨] ಅತ್ಯಂತವಾಗಿ ಉಪರತನೂ[^೩] ದ್ವಂದ್ವ
ಸಹಿಷ್ಣುವೂ ಆದ ಯತಿಯು ಯಾವಾಗಲೂ ಸಮಾಧಿಯನ್ನು ಮಾಡುತ್ತ,
ತನ್ನ ಸರ್ವಾತ್ಮಭಾವವನ್ನು ಅನುಭವಿಸುತ್ತಾನೆ. ಅವಿದ್ಯೆಯೆಂಬ ಅಂಧಕಾರ-
ದಿಂದ ಉಂಟಾದ ವಿಕಲ್ಪಗಳನ್ನು ಆ ಸಮಾಧಿಯಿಂದ ಚೆನ್ನಾಗಿ ಸುಟ್ಟು,
ನಿಷ್ಕ್ರಿಯನೂ ನಿರ್ವಿಕಲ್ಪನೂ ಆಗಿ ಬಾಬ್ರಹ್ಮಾಕಾರದಿಂದ ಸುಖವಾಗಿರುತ್ತಾನೆ.
 
[ಇಲ್ಲಿ ಸಮಾಧಿಯನ್ನೂ ಸಮಾಧಿಯ ಫಲವನ್ನೂ ಹೇಳಿದೆ.
[^೧] ಮನಸ್ಸನ್ನು ನಿಗ್ರಹಿಸಿದವನಾಗಿ.
[^೨]ಬಾಹ್ಯೇಂದ್ರಿಯಗಳನ್ನು ನಿಗ್ರಹಿಸಿದವನಾಗಿ,
[^೩] ಹೊರಗಿನ ವೃತ್ತಿಗಳನ್ನು ಅವಲಂಬಿಸದೆ.]