This page has been fully proofread once and needs a second look.

೧೫]
 
ವಿವೇಕಚೂಡಾಮಣಿ
 
೨ ವಸ್ತುವನ್ನು ಯಥಾರ್ಥವಾಗಿ ನಿರ್ಧರಿಸಲು ಅನುಕೂಲವಾಗಿರುವ ಮಾನಸ

ವ್ಯಾಪಾರವು ವಿಚಾರವೆನಿಸುವುದು.
 
]
 
ಅಧಿಕಾರಿಣಮಾಶಾಸ್ತ್ರತೇ ಫಲಸಿದ್ಧಿರ್ವಿಶೇಷತಃ ।

ಉಪಾಯಾ ದೇಶ-ಕಾಲಾದ್ಯಾಃ ಸಂತ್ಯ ಸ್ಮಿನ್ ಸಹಕಾರಿಣಃ ॥ ೧೪ ॥
 

 
ಫಲಸಿದ್ಧಿ -ಧಿಃ = ಫಲಪ್ರಾಪ್ತಿಯು, ಅಧಿಕಾರಿಣಂ =ಅಧಿಕಾರಿಯನ್ನು, ವಿಶೇಷತಃ
=
ವಿಶೇಷವಾಗಿ,
ಆಶಾಸ್ತ್ರ -ತೇ = ಬಯಸುತ್ತದೆ; ಅಸ್ಮಿನ್ = ಈ ವಿಷಯದಲ್ಲಿ, ದೇಶ.
 
ವಿಶೇಷವಾಗಿ
-
ಕಾಲಾದ್ಯಾಸಿ =
8
ಯಾಃ = ದೇಶಕಾಲಾದಿಗಳು, ಸಹಕಾರಿಣಃ -= ಸಹಕಾರಿಗಳಾದ, ಉಪಾಯಾ
ಯಾಃ
ಸಂತಿ = ಸಾಧನಗಳಾಗಿವೆ.
 

 
೧೪. (ಬ್ರಹ್ಮಜ್ಞಾನವೆಂಬ) ಫಲಪ್ರಾಪ್ತಿಯು (ಶಮ-ದಮಾದಿಗಳಿಂದ

ಕೂಡಿದ) ಅಧಿಕಾರಿಯನ್ನು ವಿಶೇಷವಾಗಿ ಅಪೇಕ್ಷಿಸುತ್ತದೆ. ಈ ವಿಷಯದಲ್ಲಿ

ದೇಶ ಕಾಲ ಮೊದಲಾದುವು ಸಹಾಯಕ ಸಾಧನಗಳಾಗಿವೆ.
 

 
[ಮುಮುಕ್ಷುವು ಮುಖ್ಯವಾಗಿ ಸಮರ್ಥನಾಗಿರಬೇಕು; ಏಕೆಂದರೆ ಒಳಗಿನ ಸಾಮ
-
ರ್ಥ್ಯವೇ ಫಲವನ್ನು ಕೊಡುವುದೇ ವಿನಾ ಇತರ ಹೊರಗಿನ ಉಪಕರಣಗಳಲ್ಲ. ಕರ್ಮ

ಮಾರ್ಗದಲ್ಲಿ ನಿರತರಾಗಿರುವವರು ಯದಾಹವನೀಯೇ ಜುಹೋತಿ, ಸಾಯಂ

ಜುಹೋತಿ ಎಂದು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಅಸಾಧಾರಣವಾದ ದೇಶಕಾಲಾದಿ
-
ಗಳನ್ನು ಅವಲಂಬಿಸಬೇಕಾಗಿರುತ್ತದೆ. ಆದರೆ ಬ್ರಹ್ಮಜ್ಞಾನಕ್ಕೆ ಅಂಥ ದೇಶಕಾಲಗಳ

ನಿಯಮವಿಲ್ಲ. ಅವನಿಗೆ ನಿರ್ಜನಾದಿ ಪ್ರದೇಶಗಳು, ಅನುಕೂಲವಾದ ಮನಸ್ಸಾ
ಸಮಾ-
ಧಾನದ ಕಾಲ, ಸತ್ಸಂಗ ಇವೇ ಮೊದಲಾದುವು ಸಹಕಾರಿ -ಕಾರಣಗಳಾಗಿರುತ್ತವೆ.]
 

 
ಅತೋ ವಿಚಾರಃ ಕರ್ತವೋವ್ಯೋ ಜಿಜ್ಞಾಸೋರಾತ್ಮವಸ್ತುನಃ ।

ಸಮಾಸಾದ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಮ್ ॥ ೧೫ ॥
 

 
ಅತಃ -= ಆದುದರಿಂದ, ಬ್ರಹ್ಮವಿದುತ್ತಮಂ -= ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದ
,
ದಯಾಸಿಂಧುಂ -= ದಯಾಸಾಗರನಾದ, ಗುರುಂ -= ಗುರುವನ್ನು, ಸಮಾಸಾದ್ಯ
=
ಹೊಂದಿ ,ಜಿಜ್ಞಾಸೋ - ಜಿಜ್ಞಾಸುವಿಗೆ, ಆತ್ಮವಸ್ತುನಃ = ಆತ್ಮತತ್ತ್ವದ, ವಿಚಾರಃ
=
ವಿಚಾರವು, ಕರ್ತವ್ಯಃ - ಮಾಡತಕ್ಕದ್ದಾಗಿದೆ.
 

 
೧೫. ಆದುದರಿಂದ ಜಿಜ್ಞಾಸುವು ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೂ ದಯಾ

ಸಾಗರನೂ ಆದ ಗುರುವನ್ನು[^೧] ಹೊಂದಿ ಆತ್ಮತತ್ತ್ವದ ವಿಚಾರವನ್ನು ಮಾಡ
-
ಬೇಕು.
 

 
[^] ಗು-ಶಬ್ದವು ಅಂಧಕಾರವನ್ನೂ ರು-ಶಬ್ದವು ಅದರ ನಾಶವನ್ನೂ ಸೂಚಿಸುತ್ತವೆ;

ಅಂಧಕಾರವನ್ನು ಎಂದರೆ ಅಜ್ಞಾನವೆಂಬ ಹೃದಯಾಂಧಕಾರವನ್ನು ನಾಶಮಾಡು