This page has not been fully proofread.

೧೫]
 
ವಿವೇಕಚೂಡಾಮಣಿ
 
೨ ವಸ್ತುವನ್ನು ಯಥಾರ್ಥವಾಗಿ ನಿರ್ಧರಿಸಲು ಅನುಕೂಲವಾಗಿರುವ ಮಾನಸ
ವ್ಯಾಪಾರವು ವಿಚಾರವೆನಿಸುವುದು.
 
ಅಧಿಕಾರಿಣಮಾಶಾಸ್ತ್ರ ಫಲಸಿದ್ಧಿರ್ವಿಶೇಷತಃ ।
ಉಪಾಯಾ ದೇಶ-ಕಾಲಾದ್ಯಾಃ ಸಂತ್ಯ ಸ್ಮಿನ್ ಸಹಕಾರಿಣಃ ॥ ೧೪ ॥
 
ಫಲಸಿದ್ಧಿ - ಫಲಪ್ರಾಪ್ತಿಯು ಅಧಿಕಾರಿಣಂ ಅಧಿಕಾರಿಯನ್ನು ವಿಶೇಷತಃ
ಆಶಾಸ್ತ್ರ - ಬಯಸುತ್ತದೆ; ಅಸ್ಮಿನ್ = ಈ ವಿಷಯದಲ್ಲಿ ದೇಶ.
 
ವಿಶೇಷವಾಗಿ
ಕಾಲಾದ್ಯಾಸಿ =
8 = ದೇಶಕಾಲಾದಿಗಳು ಸಹಕಾರಿಣಃ - ಸಹಕಾರಿಗಳಾದ ಉಪಾಯಾ
ಸಂತಿ = ಸಾಧನಗಳಾಗಿವೆ.
 
೧೪. (ಬ್ರಹ್ಮಜ್ಞಾನವೆಂಬ) ಫಲಪ್ರಾಪ್ತಿಯು (ಶಮದಮಾದಿಗಳಿಂದ
ಕೂಡಿದ) ಅಧಿಕಾರಿಯನ್ನು ವಿಶೇಷವಾಗಿ ಅಪೇಕ್ಷಿಸುತ್ತದೆ. ಈ ವಿಷಯದಲ್ಲಿ
ದೇಶ ಕಾಲ ಮೊದಲಾದುವು ಸಹಾಯಕ ಸಾಧನಗಳಾಗಿವೆ.
 
[ಮುಮುಕ್ಷುವು ಮುಖ್ಯವಾಗಿ ಸಮರ್ಥನಾಗಿರಬೇಕು; ಏಕೆಂದರೆ ಒಳಗಿನ ಸಾಮ
ರ್ಥವೇ ಫಲವನ್ನು ಕೊಡುವುದೇ ವಿನಾ ಇತರ ಹೊರಗಿನ ಉಪಕರಣಗಳಲ್ಲ. ಕರ್ಮ
ಮಾರ್ಗದಲ್ಲಿ ನಿರತರಾಗಿರುವವರು ಯದಾಹವನೀಯೇ ಜುಹೋತಿ, ಸಾಯಂ
ಜುಹೋತಿ ಎಂದು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಅಸಾಧಾರಣವಾದ ದೇಶಕಾಲಾದಿ
ಗಳನ್ನು ಅವಲಂಬಿಸಬೇಕಾಗಿರುತ್ತದೆ. ಆದರೆ ಬ್ರಹ್ಮಜ್ಞಾನಕ್ಕೆ ಅಂಥ ದೇಶಕಾಲಗಳ
ನಿಯಮವಿಲ್ಲ. ಅವನಿಗೆ ನಿರ್ಜನಾದಿ ಪ್ರದೇಶಗಳು, ಅನುಕೂಲವಾದ ಮನಸ್ಸಾ
ಧಾನದ ಕಾಲ, ಸತ್ಸಂಗ ಇವೇ ಮೊದಲಾದುವು ಸಹಕಾರಿ ಕಾರಣಗಳಾಗಿರುತ್ತವೆ.]
 
ಅತೋ ವಿಚಾರಃ ಕರ್ತವೋ ಜಿಜ್ಞಾಸೋರಾತ್ಮವಸ್ತುನಃ ।
ಸಮಾಸಾದ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಮ್ ॥ ೧೫ ॥
 
ಅತಃ - ಆದುದರಿಂದ ಬ್ರಹ್ಮವಿದುತ್ತಮಂ - ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದ
ದಯಾಸಿಂಧುಂ - ದಯಾಸಾಗರನಾದ ಗುರುಂ - ಗುರುವನ್ನು ಸಮಾಸಾದ್ಯ
ಹೊಂದಿ ಜಿಜ್ಞಾಸೋ - ಜಿಜ್ಞಾಸುವಿಗೆ ಆತ್ಮವಸ್ತುನಃ = ಆತ್ಮತತ್ತ್ವದ ವಿಚಾರಃ
ವಿಚಾರವು ಕರ್ತವ್ಯಃ - ಮಾಡತಕ್ಕದ್ದಾಗಿದೆ.
 
೧೫. ಆದುದರಿಂದ ಜಿಜ್ಞಾಸುವು ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೂ ದಯಾ
ಸಾಗರನೂ ಆದ ಗುರುವನ್ನು ಹೊಂದಿ ಆತ್ಮತತ್ತ್ವದ ವಿಚಾರವನ್ನು ಮಾಡ
ಬೇಕು.
 
[೧ ಗು-ಶಬ್ದವು ಅಂಧಕಾರವನ್ನೂ ರು-ಶಬ್ದವು ಅದರ ನಾಶವನ್ನೂ ಸೂಚಿಸುತ್ತವೆ;
ಅಂಧಕಾರವನ್ನು ಎಂದರೆ ಅಜ್ಞಾನವೆಂಬ ಹೃದಯಾಂಧಕಾರವನ್ನು ನಾಶಮಾಡು