This page has been fully proofread once and needs a second look.

ನಿಃಸಂಶಯೇನ ಭವತಿ ಪ್ರತಿಬಂಧಶನ್ಯೋ
ವಿಕ್ಷೇಪಣಂ ನ ಹಿ ತದಾ ಯದಿ ಚೇನ್ಮೃಷಾರ್ಥೇ ॥ ೩೪೩ ॥
 

ನಿಃಶೇಷಂ = ನಿಃಶೇಷವಾಗಿ, ಆವರಣಶಕ್ತಿ-ನಿವೃತ್ತಿ- ಅಭಾವೇ = ಆವರಣ-
ಶಕ್ತಿಯ ಅಭಾವವಾಗದಿದ್ದರೆ, ವಿಕ್ಷೇಪಶಕ್ತಿ-ವಿಜಯಃ = ವಿಕ್ಷೇಪಶಕ್ತಿಯ ವಿಜಯವು,
ವಿಧಾತುಂ = ಸಾಧಿಸಲು, ವಿಷಮಃ = ಕಷ್ಟ; ದೃಗ್-ದೃಶ್ಯಯೋಃ = ದೃಗ್ ದೃಶ್ಯಗಳ,
ಸ್ಫುಟ ಪಯೋಜಲವತ್ = ಸ್ಪುಫುಟವಾದ ಹಾಲುನೀರುಗಳಂತೆ ,ವಿಭಾಗೇ [ಸತಿ] =
ವಿವೇಚನೆಯಿರುತ್ತಿರಲು, ತದಾ = ಆಗ, ಆತ್ಮನಿ = ಆತ್ಮನಲ್ಲಿ, ಸ್ವಭಾವಾತ್ = ತಾನಾ-
ಗಿಯೆಯೇ, ಆವರಣಂ = ಆವರಣವು, ನಶ್ಯೇತ್ = ನಾಶವಾಗುವುದು; ಮೃಷಾರ್ಥೇ =
ಮಿಥ್ಯೇಯಾದ ಅನಾತ್ಮನಲ್ಲಿ, ವಿಕ್ಷೇಪಣಂ = ವಿಕ್ಷೇಪವು, ನ ಹಿ ಚೇತ್ ಯದಿ = ಆಗ-
ದಿದ್ದರೆ, ತದಾ = ಆಗ, ನಿಃ ಸಂಶಯೇನ = ನಿಃ ಸಂಶಯವಾಗಿ, ಪ್ರತಿಬಂಧಶೂನ್ಯಃ
ಭವತಿ = ಪ್ರತಿಬಂಧವಿಲ್ಲದೆ ಆಗುವುದು.
 
೩೪೩. ಆವರಣಶಕ್ತಿಯನ್ನು ನಿಃಶೇಷವಾಗಿ ತೊಲಗಿಸಿಕೊಳ್ಳದಿದ್ದರೆ
ವಿಕ್ಷೇಪಶಕ್ತಿಯನ್ನು ಜಯಿಸಿಕೊಳ್ಳುವುದು ಕಷ್ಟ. ದೃಗ್ರೂಪನಾದ ಆತ್ಮ,
ದೃಶ್ಯವಾದ ಜಗತ್ತು ಇವೆರಡನ್ನೂ-- (ಹಂಸವು) ಹಾಲುನೀರುಗಳನ್ನು ಸ್ಫುಟ-
ವಾಗಿ ವಿಂಗಡಿಸುವಂತೆ--ವಿವೇಚನೆ ಮಾಡಿದಾಗ ಆ ಆವರಣವು ಆತ್ಮನಲ್ಲಿ
ತಾನಾಗಿಯೇ ನಾಶವಾಗುವುದು. ಮಿಥ್ಯಾಭೂತವಾದ ಅನಾತ್ಮನಲ್ಲಿ (ಮನಸ್ಸು)
ವಿಕ್ಷೇಪ ಹೊಂದದಿದ್ದರೆ (ವಿಕ್ಷೇಪಶಕ್ತಿಯನ್ನು ಗೆಲ್ಲುವುದು) ನಿಃಸಂಶಯವಾಗಿ
ಪ್ರತಿಬಂಧವಿಲ್ಲದೆ ಆಗುವುದು.
 
ಸಮ್ಯಗ್ ವಿವೇಕಃ ಸ್ಫುಟ ಬೋಧಜನ್ಯೋ
ವಿಭಜ ದೃಗ್-ದೃಶ್ಯ-ಪದಾರ್ಥ-ತತ್ತ್ವಮ್ ।
ಛಿನತ್ತಿ ಮಾಯಾಕೃತ-ಮೋಹಬಂಧಂ
ಯಸ್ಮಾದ್ವಿಮುಕ್ತಸ್ಯ ಪುನರ್ನ ಸಂಸ್ಕೃಸೃತಿಃ ॥ ೩೪೪ ॥
 
ಸ್ಫುಟಬೋಧಜನ್ಯಃ = ಸ್ಪುಟವಾದ ಜ್ಞಾನದಿಂದ ಉಂಟಾದ, ಸಮ್ಯಗ್-
ವಿವೇಕಃ = ಸಮ್ಯಗ್ ವಿವೇಕವು, ದೃಗ್-ದೃಶ್ಯ-ಪದಾರ್ಥ-ತತ್ತ್ವಂ = ದೃಕ್ ಮತ್ತು
ದೃಶ್ಯ ಎಂಬ ಪದಾರ್ಥಗಳ ತತ್ತ್ವವನ್ನು, ವಿಭಜ್ಯ = ವಿಂಗಡಿಸಿ, ಮಾಯಾಕೃತ-
ಮೋಹಬಂಧಂ = ಮಾಯೆಯಿಂದ ಆದ ಮೋಹವೆಂಬ ಬಂಧವನ್ನು, ಛಿನತ್ತಿ - ಕತ್ತರಿಸು
ತ್ತದೆ; ಯಸ್ಮಾತ್ = ಯಾವುದರಿಂದ, ವಿಮುಕ್ತಸ್ಯ = ಮುಕ್ತನಾದವನಿಗೆ, ಪುನಃ =
ಮತ್ತೆ, ನ ಸಂಸ್ಕೃಸೃತಿಃ = ಸಂಸಾರವಿಲ್ಲವೊ.
 
೩೪೪. ಸ್ಫುಟವಾದ ಜ್ಞಾನದಿಂದ ಉತ್ಪನ್ನವಾದ[^೧] ಸಮ್ಯಗ್ ವಿವೇಕವು[^೨]
ದೃಗ್ರೂಪನಾದ ಆತ್ಮ, ದೃಶ್ಯರೂಪವಾದ ಪ್ರಪಂಚ-- ಎಂಬ ಪದಾರ್ಥಗಳ