This page has been fully proofread once and needs a second look.

ಆರೂಢಶಕ್ತೇರಹಮೋ ವಿನಾಶಃ
ಕರ್ತುನ್ನ ಶಕ್ಯಃ ಸಹಸಾಽಪಿ ಪಂಡಿತೈಃ ।
ಯೇ ನಿರ್ವಿಕಲ್ಪಾಖ್ಯ-ಸಮಾಧಿ-ನಿಶ್ಚಲಾ-
ಸ್ತಾನಂತರಾಽನಂತ-ಭವಾ ಹಿ ವಾಸನಾ ॥ ೩೪೧ ॥
 
ಯೇ = ಯಾರು, ನಿರ್ವಿಕಲ್ಪಾಖ್ಯ-ಸಮಾಧಿ-ನಿಶ್ಚಲಾಃ = ನಿರ್ವಿಕಲ್ಪವೆಂಬ-
ಸಮಾಧಿಯಲ್ಲಿ ನೆಲೆಗೊಂಡಿರುವರೋ, ತಾನ್ ಅ೦ತರಾ = ಅವರನ್ನು ಬಿಟ್ಟರೆ, ಆರೂಢ-
ಶಕ್ತೇಃ = ಪ್ರಬಲವಾದ ಶಕ್ತಿಯುಳ್ಳ, ಅಹಮಃ = ಅಹಂಕಾರದ, ವಿನಾಶಃ = ನಾಶವು,
ಪಂಡಿತೈಃ ಅಪಿ = ಜ್ಞಾನಿಗಳಿಂದಲೂ, ಸಹಸಾ = ಕೂಡಲೇ, ಕರ್ತುಂ = ಮಾಡಲು,
ನ ಶಕ್ಯಃ = ಶಕ್ಯವಲ್ಲ; ಹಿ = ಏಕೆಂದರೆ, ವಾಸನಾಃ = ಸಂಸ್ಕಾರಗಳು, ಅನಂತ-ಭವಾಃ =
ಅನೇಕ ಜನ್ಮಗಳಿಂದ ಸಂಪಾದಿಸಲ್ಪಟ್ಟವು.
 
೩೪೧. ಯಾರು ನಿರ್ವಿಕಲ್ಪವೆಂಬ ಸಮಾಧಿಯಲ್ಲಿ ನೆಲೆಗೊಂಡಿರುವರೊ
ಅವರನ್ನು ಬಿಟ್ಟರೆ ಇತರರು ಜ್ಞಾನಿಗಳಾಗಿದ್ದರೂ ಪ್ರಬಲವಾದ ಶಕ್ತಿಯುಳ್ಳ
ಅಹಂಕಾರವನ್ನು ಕೂಡಲೇ ನಾಶಮಾಡಲು ಅವರಿಂದ ಆಗುವುದಿಲ್ಲ; ಏಕೆಂದರೆ
ಸಂಸ್ಕಾರಗಳು ಅನೇಕ ಜನ್ಮಗಳಿಂದ ಸಂಪಾದಿಸಲ್ಪಟ್ಟು ಬಂದಿರುತ್ತವೆ.
 
ಅಹಂಬುದ್ಧ್ಯೈವ ಮೋಹಿನ್ಯಾ ಯೋಜಯಿತ್ವಾಽಽವೃತೇರ್ಬಲಾತ್ ।
ವಿಕ್ಷೇಪಶಕ್ತಿಃ ಪುರುಷಂ ವಿಕ್ಷೇಪಯತಿ ತದ್ಗುಣೈಃ ॥ ೩೪೨ ॥
 
ವಿಕ್ಷೇಪಶಕ್ತಿಃ = ವಿಕ್ಷೇಪಶಕ್ತಿಯು, ಆವೃತೇಃ ಬಲಾತ್ = ಆವರಣಶಕ್ತಿಯ
ಬಲದ ಮೂಲಕ, ಪುರುಷಂ = ಮನುಷ್ಯನನ್ನು, ಅಹಂಬುದ್ಧ್ಯಾ ಏವ = ಅಹಂಬುದ್ಧಿ-
ಯೆಂಬ, ಮೋಹಿನ್ಯಾ = ಮೋಹಿನಿಯೊಡನೆ, ಯೋಜಯಿತ್ವಾ = ಸೇರಿಸಿ, ತದ್ಗುಣೈಃ =
ಅದರ ಗುಣಗಳಿಂದ, ವಿಕ್ಷೇಪಯತಿ = ವಿಕ್ಷೇಪಗೊಳಿಸುತ್ತದೆ.
 
೩೪೨. ವಿಕ್ಷೇಪಶಕ್ತಿಯು ಆವರಣಶಕ್ತಿಯ ಬಲದ ಮೂಲಕ ಮನುಷ್ಯ-
ನನ್ನು ಅಹಂಬುದ್ಧಿಯೆಂಬ ಮೋಹಿನಿಯೊಂದಿಗೆ ಸೇರಿಸಿ ಅದರ ಗುಣಗಳಿಂದ[^೧]
ಅವನನ್ನು ವಿಕ್ಷೇಪಗೊಳಿಸುತ್ತದೆ.
 
[^೧] ಕರ್ತತ್ವವೇ ಮೊದಲಾದ.]
 
ವಿಕ್ಷೇಪಶಕ್ತಿ-ವಿಜಯೋ ವಿಷಮೋ ವಿಧಾತುಂ
ನಿಃಶೇಷಮಾವರಣಶಕ್ತಿ-ನಿವೃತ್ತ್ಯಭಾವೇ ।
ದೃಗ್-ದೃಶ್ಯಯೋಃ ಸ್ಫುಟಪಯೋಜಲವದ್ವಿಭಾಗೇ
ನಶ್ಯೇತ್ ತದಾವರಣಮಾತ್ಮನಿ ಚ ಸ್ವಭಾವಾತ್ ।