This page has not been fully proofread.

೩೪೦]
 
ವಿವೇಕಚೂಡಾಮಣಿ
 
ನಿತ್ಯ. ಆತ್ಮ ನಿಷ್ಠಾ. ಪರೈಃ - ನಿತ್ಯಾತ್ಮ ನಿಷ್ಠೆಯಲ್ಲಿ ಆಸಕ್ತರಾದ ಆತ್ಮನಿ = ತನ್ನಲ್ಲಿ
ಸದಾನಂದ ಇಷ್ಟುಭಿಃ = ನಿತ್ಯಾನಂದವನ್ನು ಬಯಸುವ ತತ್ತ್ವಜ್ಞೆತಿ - ಜ್ಞಾನಿಗಳಿಂದ
ಯತ್ನತಃ - ಪ್ರಯತ್ನಪೂರ್ವಕವಾಗಿ ಕರಣೀಯಂ - (ದೃಶ್ಯದ ಅಗ್ರಹಣವು ಮಾಡ
ಲ್ಪಡತಕ್ಕದ್ದು.
 
೧೭೭
 
೩೩೯. ದೇಹಾತ್ಮಭಾವದಿಂದ ಕೂಡಿ, ವಿಷಯಾನುಭವದಲ್ಲಿ ನೆಲೆಗೊಂಡ
ಮನಸ್ಸುಳ್ಳವನಾಗಿ, ಆಯಾ ಕರ್ಮವನ್ನು ಮಾಡುತ್ತಿರುವವನಿಗೆ ದೃಶ್ಯ
ಜಗತ್ತನ್ನು ವರಿಗ್ರಹಿಸದಿರುವಿಕೆಯು ಹೇಗೆ ಸಾಧ್ಯವಾಗುತ್ತದೆ? ಸಮಸ್ತ
ಧರ್ಮಗಳನ್ನೂ ಕರ್ಮಗಳನ್ನೂ ವಿಷಯಗಳನ್ನೂ ತೊರೆದು ನಿತ್ಯಾತ್ಮ
 
ನಿಷ್ಠೆಯಲ್ಲಿ ಆಸಕ್ತರಾಗಿ ತಮ್ಮಲ್ಲಿ ಸದಾನಂದವನ್ನು ಬಯಸುವ ತತ್ತ್ವಜ್ಞ
ರಿಂದಲೇ (ಈ ದೃಶ್ಯ ಜಗತ್ತಿನ ಅವರಿಗ್ರಹವು ಪ್ರಯತ್ನ ಪೂರ್ವಕವಾಗಿ ಮಾಡ
ಲ್ಪಡತಕ್ಕದ್ದು.
 
[೧ ವಿಷಯಲಾಭಕ್ಕೋಸ್ಕರ.
೨ ವೈದಿಕ ಧರ್ಮಗಳನ್ನು,
೩ ಲೌಕಿಕಕರ್ಮಗಳನ್ನು,
ಇಶಬ್ದಾದಿ. ವಿಷಯಗಳನ್ನು.]
 
ಸರ್ವಾತ್ಮಸಿದ್ಧಯೇ ಭಿಕೋಃ ಕೃತ-ಶ್ರವಣ-ಕರ್ಮಣಃ ।
ಸಮಾಧಿಂ ವಿದಧಾತೇಷಾ ಶಾಂತೋ ದಾಂತ ಇತಿ ಶ್ರುತಿಃ ॥ ೩೪೦ ॥
 
=
 
ಕೃತಶ್ರವಣ-ಕರ್ಮಣಃ ವೇದಾಂತಶ್ರವಣವನ್ನು ಮಾಡಿರುವ ಭಿಕೋ
ಭಿಕ್ಷುವಿಗೆ ಸರ್ವಾತ್ಮ. ಸಿದ್ಧಯೇ = ಸರ್ವಾತ್ಮಭಾವದ ಸಿದ್ಧಿಗೋಸ್ಕರ ಶಾಂತಃ
ದಾಂತಃ = ಶಾಂತನು, ದಾಂತನು ಇತಿ = ಎಂಬ ಏಷಾ ಶ್ರುತಿಃ - ಈ ಶ್ರುತಿಯು
ಸಮಾಧಿಂ = ಸಮಾಧಿಯನ್ನು ವಿದಧಾತಿ - ವಿಧಿಸುತ್ತದೆ.
 
೩೪೦. ವೇದಾಂತವಾಕ್ಯದ ಶ್ರವಣವನ್ನು ಮಾಡಿರುವ ಭಿಕ್ಷುವಿಗೆ
ಸರ್ವಾತ್ಮಭಾವದ ಸಿದ್ಧಿಗೋಸ್ಕರ 'ಶಾಂತನೂ ದಾಂತನ" ಎಂಬ ಈ
ಶ್ರುತಿಯು ಸಮಾಧಿಯನ್ನು ವಿಧಿಸುತ್ತದೆ.
 
[೧ ಆದುದರಿಂದ ಹೀಗೆ ಅರಿತುಕೊಂಡಿರುವವನು ಶಾಂತನ ದಾಂತನೂ ಉಪ
ರತನೂ ತಿತಿಕ್ಷುವೂ ಸಮಾಹಿತನೂ ಆಗಿ ತನ್ನ ಶರೀರದಲ್ಲಿಯೇ ಆತ್ಮನನ್ನು ನೋಡು
ತಾನೆ, ಸರ್ವವನ್ನೂ ಆತ್ಮನನ್ನಾಗಿ ನೋಡುತ್ತಾನೆ' ತಸ್ಮಾದೇವಂವಿಚ್ಛಾಂತೋ
ದಾಂತ ಉಪರತಸ್ತಿತಿಕ್ಷುಃ ಸಮಾಹಿತೋ ತಾತ್ಮನ್ಯವಾತ್ಮಾನಂ ಪಶ್ಯತಿ,
ಸರ್ವನಾತ್ಮಾನಂ ಪಶ್ಯತಿ (ಬೃಹದಾರಣ್ಯಕ ಉ. ೪. ೪. ೨೩). ]