This page has been fully proofread once and needs a second look.

೩೩೭. ಸ್ಥಾವರ -ಜಂಗಮಗಳಲ್ಲೆಲ್ಲ ಒಳಗೂ ಹೊರಗೂ ತನ್ನ ಆತ್ಮನನ್ನೇ
ತಿಳಿದುಕೊಂಡು, ಆತ್ಮನನ್ನೇ ಅವುಗಳ ಆಧಾರವೆಂದು ಅರಿತುಕೊಂಡು, ಸಮಸ್ತ
ಉಪಾಧಿಗಳನ್ನೂ ಬಿಟ್ಟವನಾಗಿ, ಪರಿಪೂರ್ಣಸ್ವರೂಪನಾಗಿಯೂ ಸರ್ವಾತ್ಮ
ಸ್ವರೂಪದಿಂದಲೂ ಯಾವನು ಇರುವನೋ ಅವನೇ ಮುಕ್ತನು.
 
ಸರ್ವಾತ್ಮನಾ ಬಂಧವಿಮುಕ್ತಿ ಹೇತುಃ
ಸರ್ವಾತ್ಮಭಾವಾನ್ನ ಪರೋಽಸ್ತಿ ಕಶ್ಚಿತ್ ।
ದೃಶ್ಯಾಗ್ರಹೇ ಸತ್ಯುಪಪದ್ಯತೇಽಸೌ
ಸರ್ವಾತ್ಮಭಾವೋಽಸ್ಯ ಸದಾಽಽತ್ಮನಿಷ್ಠಯಾ ॥ ೩೩೮ ॥
 
ಸರ್ವಾತ್ಮನಾ = ಹೇಗೆ ನೋಡಿದರೂ, ಸರ್ವಾತ್ಮಭಾವಾತ್ = ಸರ್ವಾತ್ಮಭಾವ-
ಕ್ಕಿಂತ, ಪರಃ = ಬೇರೆಯಾದ, ಕಶ್ಚಿತ್ = ಯಾವುದೊಂದೂ, ಬಂಧವಿಮುಕ್ತಿಹೇತುಃ
ನ = ಬಂಧವಿಮುಕ್ತಿಗೆ ಕಾರಣವಾಗಲಾರದು; ಅಸ್ಯ = ಇವನಿಗೆ, ಅಸೌ ಸರ್ವಾತ್ಮ-
ಭಾವಃ = ಈ ಸರ್ವಾತ್ಮಭಾವವು, ಸದಾ = ಯಾವಾಗಲೂ, ಆತ್ಮನಿಷ್ಠಯಾ = ಆತ್ಮ
ನಿಷ್ಠೆಯ ಮೂಲಕ, ದೃಶ್ಯ-ಅಗ್ರಹೇ ಸತಿ = ದೃಶ್ಯವನ್ನು ಗ್ರಹಿಸದಿದ್ದಾಗ, ಉಪ-
ಪದ್ಯತೇ = ಉಂಟಾಗುತ್ತದೆ.
 
೩೩೮. ಸಂಸಾರಬಂಧದಿಂದ ಮುಕ್ತನಾಗುವುದಕ್ಕೆ ಸರ್ವಾತ್ಮಭಾವ-
ಕ್ಕಿಂತ ಬೇರೆ ಯಾವ ಕಾರಣವೂ ಸರ್ವಪ್ರಕಾರದಿಂದಲೂ ಇರುವುದಿಲ್ಲ.
ಇವನಿಗೆ ಈ ಸರ್ವಾತ್ಮಭಾವವು ಸದಾ ಆತ್ಮನಿಷ್ಠೆಯ ಮೂಲಕ ದೃಶ್ಯ
ಜಗತ್ತನ್ನು ಗ್ರಹಿಸದಿದ್ದಾಗ ಉಂಟಾಗುತ್ತದೆ.
 
ದೃಶ್ಯಸ್ಯಾಗ್ರಹಣಂ ಕಥಂ ನು ಘಟತೇ ದೇಹಾತ್ಮನಾ ತಿಷ್ಠತೋ
ಬಾಹ್ಯಾರ್ಥಾನುಭವ-ಪ್ರಸಕ್ತ-ಮನಸಸ್ತತ್ತಕ್ಕ್ರಿಯಾಂ ಕುರ್ವತಃ ।
ಸಂನ್ಯಸ್ತಾಖಿಲ-ಧರ್ಮ-ಕರ್ಮ-ವಿಷಯೈರ್ನಿತ್ಯಾತ್ಮನಿಷ್ಠಾರೈ-
ಸ್ತತ್ತ್ವಜ್ಞೈಃ ಕರಣೀಯಮಾತ್ಮನಿ ಸದಾನಂದೆಚ್ಛುಭೀರ್ಯತ್ನತಃ ॥ ೩೩೯ ॥
 
ದೇಹಾತ್ಮನಾ = ದೇಹಾತ್ಮಭಾವದಿಂದ, ತಿಷ್ಠತಃ = ಇರುತ್ತಿರುವವನಿಗೆ, ಬಾಹ್ಯ-
ಅರ್ಥ-ಅನುಭವ-ಪ್ರಸಕ್ತ-ಮನಸಃ = ವಿಷಯಾನುಭವದಲ್ಲಿ ನೆಲೆಗೊಂಡ ಮನಸ್ಸುಳ್ಳ-
ವನಿಗೆ, ತತ್-ತತ್-ಕ್ರಿಯಾಂ = ಆಯಾ ಕರ್ಮವನ್ನು, ಕುರ್ವತಃ = ಮಾಡುತ್ತಿರು-
ವವನಿಗೆ, ದೃಶ್ಯಸ್ಯ = ದೃಶ್ಯಪ್ರಪಂಚದ, ಅಗ್ರಹಣಂ = ಪರಿಗ್ರಹಿಸದಿರೋಣವು, ಕಥಂ
ನು ಘಟತೇ = ಹೇಗೆ ಸಾಧ್ಯವಾಗುತ್ತದೆ? ಸಂನ್ಯಸ್ತ-ಅಖಿಲ-ಧರ್ಮ-ಕರ್ಮ-
ವಿಷಯೈಃ = ಸರ್ವಧರ್ಮಗಳನ್ನೂ ಕರ್ಮಗಳನ್ನೂ ವಿಷಯಗಳನ್ನೂ ಬಿಟ್ಟಿರುವ