This page has been fully proofread once and needs a second look.

೩೩೫. ಪಂಡಿತನೂ ಸದಸದ್ವಿವೇಕಿಯೂ ಶ್ರುತಿಪ್ರಮಾಣವನ್ನು ನಂಬಿ-
ರುವವನೂ ಪರಮಾರ್ಥದರ್ಶಿಯೂ ಆದ ಯಾವ ಮುಮುಕ್ಷುವು ತಾನೇ
ತಿಳಿದೂ ತಿಳಿದೂ--ಮಗುವಿನಂತೆ-- ತನ್ನ ಪತನಕ್ಕೆ ಕಾರಣವಾದ ಅಸದ್ವಸ್ತು-
ವನ್ನು ಆಶ್ರಯಿಸಿಯಾನು?
 
ದೇಹಾದಿ-ಸಂಸಕ್ತಿಮತೋ ನ ಮುಕ್ತಿ-
ರ್ಮುಕ್ತಸ್ಯ ದೇಹಾದ್ಯಭಿಮತ್ಯಭಾವಃ ।
ಸುಪ್ತಸ್ಯ ನೋ ಜಾಗರಣಂ ನ ಜಾಗ್ರತಃ
ಸ್ವಪ್ನಸ್ತಯೋರ್ಭಿನ್ನ-ಗುಣಾಶ್ರಯತ್ವಾತ್ ॥ ೩೩೬ ॥
 
ದೇಹಾದಿ-ಸಂಸಕ್ತಿಮತಃ = ಶರೀರಾದಿಗಳಲ್ಲಿ ಅಭಿಮಾನವುಳ್ಳವನಿಗೆ, ಮುಕ್ತಿಃ
ನ = ಮುಕ್ತಿಯಿಲ್ಲ; ಮುಕ್ತಸ್ಯ = ಮುಕ್ತನಿಗೆ, ದೇಹಾದಿ-ಅಭಿಮತಿ-ಅಭಾವಃ =
ಶರೀರಾದಿಗಳಲ್ಲಿ ಅಭಿಮಾನವಿರುವುದಿಲ್ಲ; ಸುಪ್ತಸ್ಯ = ನಿದ್ರಿಸುತ್ತಿರುವವನಿಗೆ, ನ ಉ
ಜಾಗರಣಂ = ಎಚ್ಚರವಿಲ್ಲ, ಜಾಗ್ರತಃ = ಎಚ್ಚರದಲ್ಲಿರುವವನಿಗೆ, ಸ್ವಪ್ನಃ ನ = ನಿದ್ರೆ-
ಯಿಲ್ಲ; ತಯೋಃ = ಈ ಅವಸ್ಥೆಗಳೆರಡೂ, ಭಿನ್ನ-ಗುಣ-ಆಶ್ರಯತ್ವಾತ್ = ಪರಸ್ಪರ
ವಿರುದ್ಧವಾದ ಗುಣಗಳನ್ನು ಆಶ್ರಯಿಸಿರುವುದರಿಂದ.
 
೩೩೬. ಶರೀರಾದಿಗಳಲ್ಲಿ ಅಭಿಮಾನವುಳ್ಳವನಿಗೆ ಮುಕ್ತಿಯಿಲ್ಲ, ಮುಕ್ತ-
ನಾದವನಿಗೆ ಶರೀರಾದಿಗಳಲ್ಲಿ ಅಭಿಮಾನವಿರುವುದಿಲ್ಲ. ನಿದ್ರಿಸುತ್ತಿರುವವನಿಗೆ
ಎಚ್ಚರವಿಲ್ಲ, ಎಚ್ಚರದಲ್ಲಿರುವವನಿಗೆ ನಿದ್ರೆಯಿಲ್ಲ; ಏಕೆಂದರೆ ಈ ಅವಸ್ಥೆಗಳು
ಪರಸ್ಪರ ವಿರುದ್ಧ ಗುಣಗಳನ್ನು ಆಶ್ರಯಿಸಿರುತ್ತವೆ.
 
ಅಂತರ್ಬಹಿಃ ಸ್ವಂ ಸ್ಥಿರಜಂಗಮೇಷು
ಜ್ಞಾತ್ವಾಽಽತ್ಮನಾಽಽಧಾರತಯಾ ವಿಲೋಕ್ಯ ।
ತ್ಯಕಾಕ್ತಾಖಿಲೋಪಾಧಿರಖಂಡರೂಪಃ
ಪೂರ್ಣಾತ್ಮನಾ ಯಃ ಸ್ಥಿತ ಏಷ ಮುಕ್ತಃ ॥ ೩೩೭ ॥
 
ಸ್ಥಿರ-ಜಂಗಮೇಷು = ಸ್ಥಾವರ ಜಂಗಮಗಳಲ್ಲಿ, ಅಂತಃ = ಒಳಗೂ, ಬಹಿಃ =
ಹೊರಗೂ, ಸ್ವಂ= ತನ್ನ ಆತ್ಮನನ್ನೇ, ಜ್ಞಾತ್ವಾ = ತಿಳಿದು, ಆತ್ಮನಾ = ತನ್ನ ಮೂಲಕವೇ,
ಆಧಾರತಯಾ = ಆಧಾರಭಾವದಿಂದಲೇ, ವಿಲೋಕ್ಯ = ತಿಳಿದು, ತ್ಯಕ್ತ-ಅಖಿಲ-
ಉಪಾಧಿಃ = ಸಮಸ್ತ ಉಪಾಧಿಗಳನ್ನು ಬಿಟ್ಟವನಾಗಿ, ಅಖಂಡರೂಪಃ = ಪರಿಪೂರ್ಣ
ಸ್ವರೂಪನಾಗಿ, ಪೂರ್ಣಾತ್ಮನಾ = ಸರ್ವಾತ್ಮಸ್ವರೂಪದಿಂದ, ಯಃ = ಯಾವನು, ಸ್ಥಿತಃ =
ಇರುವನೋ, ಏಷಃ = ಇವನೇ, ಮುಕ್ತಃ = ಮುಕ್ತನು.