This page has not been fully proofread.

ವಿವೇಕಚೂಡಾಮಣಿ
 
೩೩೫. ಪಂಡಿತನೂ ಸದಸದ್ವಿವೇಕಿಯ ಶ್ರುತಿ ಪ್ರಮಾಣವನ್ನು ನಂಬಿ
ರುವವನೂ ಪರಮಾರ್ಥದರ್ಶಿಯೂ ಆದ ಯಾವ ಮುಮುಕ್ಷುವು ತಾನೇ
ತಿಳಿದೂ ತಿಳಿದೂ-ಮಗುವಿನಂತೆ ತನ್ನ ಪತನಕ್ಕೆ ಕಾರಣವಾದ ಅಸದ್ವಸ್ತು
ವನ್ನು ಆಶ್ರಯಿಸಿಯಾನು?
 
೩೩೭]
 
೧೭೫
 
ದೇಹಾದಿ ಸಂಸಕ್ತಿಮತೋ ನ ಮುಕ್ತಿ-
ರ್ಮುಕ್ತಸ್ಯ ದೇಹಾದ್ಯಭಿಮತ್ಯಭಾವಃ ।
ಸುಪ್ತಸ್ಯ ನೋ ಜಾಗರಣಂ ನ ಜಾಗ್ರತಃ
 
ಸ್ವಪ್ನಸ್ತಯೋರ್ಭಿ-ಗುಣಾಶ್ರಯತ್ನಾತ್ ॥ ೩೩೬ ।
 
ದೇಹಾದಿ. ಸಂಸಕ್ತಿ ಮತಃ-ಶರೀರಾದಿಗಳಲ್ಲಿ ಅಭಿಮಾನವುಳ್ಳವನಿಗೆ ಮುಕ್ತಿ
ನ = ಮುಕ್ತಿಯಿಲ್ಲ; ಮುಕ್ತಸ್ಯ = ಮುಕ್ತನಿಗೆ ದೇಹಾದಿ. ಅಭಿಮತಿ ಅಭಾವಃ -
ಶರೀರಾದಿಗಳಲ್ಲಿ ಅಭಿಮಾನವಿರುವುದಿಲ್ಲ; ಸುಪ್ತಸ್ಯ - ನಿದ್ರಿಸುತ್ತಿರುವವನಿಗೆ ನ ಉ
ಜಾಗರಣಂ = ಎಚ್ಚರವಿಲ್ಲ, ಜಾಗ್ರತಃ - ಎಚ್ಚರದಲ್ಲಿರುವವನಿಗೆ ಸ್ವಪ್ನ ನ ನಿದ್ರೆ
ಜಿಲ್ಲ; ತಯೋಃ – ಈ ಅವಸ್ಥೆಗಳೆರಡೂ ಭಿನ್ನ ಗುಣ ಆಶ್ರಯತ್ನಾತ್ - ಪರಸ್ಪರ
ವಿರುದ್ಧವಾದ ಗುಣಗಳನ್ನು ಆಶ್ರಯಿಸಿರುವುದರಿಂದ.
 
೩೩೬. ಶರೀರಾದಿಗಳಲ್ಲಿ ಅಭಿಮಾನವುಳ್ಳವನಿಗೆ ಮುಕ್ತಿಯಿಲ್ಲ, ಮುಕ್ತ
ನಾದವನಿಗೆ ಶರೀರಾದಿಗಳಲ್ಲಿ ಅಭಿಮಾನವಿರುವುದಿಲ್ಲ. ನಿದ್ರಿಸುತ್ತಿರುವವನಿಗೆ
ಎಚ್ಚರವಿಲ್ಲ, ಎಚ್ಚರದಲ್ಲಿರುವವನಿಗೆ ನಿದ್ರೆಯಿಲ್ಲ; ಏಕೆಂದರೆ ಈ ಅವಸ್ಥೆಗಳು
ಪರಸ್ಪರ ವಿರುದ್ಧ ಗುಣಗಳನ್ನು ಆಶ್ರಯಿಸಿರುತ್ತವೆ.
 
ಅಂತರ್ಬಹಿಃ ಸ್ವಂ ಸ್ಥಿರಜಂಗಮೇನು
ಜ್ಞಾತ್ವಾತ್ಮನಾಧಾರತಯಾ ವಿಲೋಕ್ಯ ।
ತ್ಯಕಾಖಿಲೋಪಾಧಿರಖಂಡರೂಪಃ
 
ಪೂರ್ಣಾತ್ಮನಾ ಯಃ ಸ್ಥಿತ ಏಷ ಮುಕ್ತಃ ॥ ೩೩೭ ॥
 

 
ಸ್ಥಿರ. ಜಂಗ ಮೇನು - ಸ್ಥಾವರ ಜಂಗಮಗಳಲ್ಲಿ ಅಂತಃ = ಒಳಗೂ ಬಹಿಃ -
ಹೊರಗೂ ಸ್ವಂ- ತನ್ನ ಆತ್ಮನನ್ನೇ ಜ್ಞಾತಾ – ತಿಳಿದು, ಆತ್ಮನಾ - ತನ್ನ ಮೂಲಕವೇ
ಆಧಾರತಯಾ - ಆಧಾರಭಾವದಿಂದಲೇ ವಿಲೋಕ್ಯ - ತಿಳಿದು
ತ್ಯ - ಅಖಿಲ-
ಉಪಾಧಿಃ = ಸಮಸ್ತ ಉಪಾಧಿಗಳನ್ನು ಬಿಟ್ಟವನಾಗಿ ಅಖಂಡ ರೂಪಃ = ಪರಿಪೂರ್ಣ
ಸ್ವರೂಪನಾಗಿ ಪೂರ್ಣಾತ್ಮನಾ - ಸರ್ವಾತ್ಮಸ್ವರೂಪದಿಂದ ಯಃ = ಯಾವನು ಸ್ಥಿತಃ
ಇರುವನೋ ಏಷಃ = ಇವನೇ ಮುಕ್ತಃ = ಮುಕ್ತನು.