2023-03-13 15:17:06 by Vidyadhar Bhat
This page has been fully proofread once and needs a second look.
ಯತಿಃ = ಯತ್ನಶೀಲನು, ಬಂಧಹೇತುಂ = ಬಂಧಕ್ಕೆ ಕಾರಣವಾದ, ಅಸತ್-
ಅನುಸಂಧಿಂ = ಅಸತ್ತಿನ ಅನುಸಂಧಾನವನ್ನು, ವಿಹಾಯ = ತೊರೆದು, ಅಯಂ = ಇವನು,
ಸ್ವಯಮ್ ಅಹಂ = ನಾನೇ, ಆಸ್ಮಿ= ಆಗಿರುವೆನು, ಇತಿ = ಎಂದು, ಆತ್ಮದೃಷ್ಟ್ಯಾಏವ =
ಆತ್ಮದೃಷ್ಟಿಯಿಂದಲೇ, ತಿಷ್ಠೇತ್ = ನಿಲ್ಲಬೇಕು; ಸ್ವಾನುಭೂತ್ಯಾ = ಆತ್ಮಾನುಭವದಿಂದ,
ಬ್ರಹ್ಮಣಿ = ಬ್ರಹ್ಮದಲ್ಲಿ, ನಿಷ್ಠಾ = ನಿಷ್ಠೆಯು, ಸುಖಯತಿ = ಸುಖವನ್ನು ಕೊಡುತ್ತದೆ,
ಪ್ರತೀತಂ = ತೋರಿಬರುತ್ತಿರುವ, ಅವಿದ್ಯಾ-ಕಾರ್ಯ-ದುಃಖಂ = ಅವಿದ್ಯಾಕಾರ್ಯ-
ವಾದ ದುಃಖವನ್ನು, ಪರಂ ಹರತಿ = ಅತ್ಯಂತವಾಗಿ ಹೋಗಲಾಡಿಸುತ್ತದೆ.
೩೩೨. ಪ್ರಯತ್ನಶೀಲನಾದವನು ಬಂಧಕ್ಕೆ ಕಾರಣವಾದ ಅಸದ್ವಸ್ತುವಿನ
ಅನುಸಂಧಾನವನ್ನು ತೊರೆದು, 'ನಾನೇ ಇವನಾಗಿರುತ್ತೇನೆ' ಎಂದು ಆತ್ಮ
ದೃಷ್ಟಿಯಿಂದಲೇ ನಿಲ್ಲಬೇಕು. ಆತ್ಮಾನುಭವದಿಂದ ಬ್ರಹ್ಮದಲ್ಲಿಯೇ ನಿಷ್ಠೆ-
ಯನ್ನು ಹೊಂದುವುದು ಸುಖಗೊಳಿಸುತ್ತದೆ ಮತ್ತು ಅವಿದ್ಯೆಯ ಕಾರ್ಯ-
ವಾಗಿ ತೋರಿಬರುತ್ತಿರುವ ದುಃಖವನ್ನೂ ಆತ್ಯಂತಿಕವಾಗಿ ಹೋಗಲಾಡಿಸು-
ತ್ತದೆ.
ಬಾಹ್ಯಾನುಸಂಧಿಃ ಪರಿವರ್ಧಯೇತ್ ಫಲಂ
ದುರ್ವಾಸನಾಮೇವ ತತಸ್ತತೋಽಧಿಕಾಮ್ ।
ಜ್ಞಾತ್ವಾ ವಿವೇಕೈಃ ಪರಿಹೃತ್ಯ ಬಾಹ್ಯಂ
ಸ್ವಾತ್ಮಾನುಸಂಧಿಂ ವಿದಧೀತ ನಿತ್ಯಮ್ ।। ೩೩೩ ॥
ಬಾಹ್ಯ-ಅನುಸಂಧಿಃ = ವಿಷಯಚಿಂತನೆಯು, ತತಃ ತತಃ = ಪುನಃ ಪುನಃ,
ಅಧಿಕಾಂ = ಅಧಿಕವಾಗುವ, ದುರ್ವಾಸನಾಂ = ಮಲಿನವಾಸನೆಯೆಂಬ, ಫಲಮ್
ಏವ = ಫಲವನ್ನೇ, ಪರಿವರ್ಧಯೇತ್ = ಬೆಳೆಯಿಸುತ್ತದೆ; [ಯತಿಯು] ಜ್ಞಾತ್ವಾ =
[ಇದನ್ನು] ಅರಿತುಕೊಂಡು, ವಿವೇಕೈಃ = ವಿವೇಚನೆಗಳಿಂದ, ಬಾಹ್ಯಂ = ವಿಷಯ ಚಿಂತನೆ-
ಯನ್ನು, ಪರಿಹೃತ್ಯ = ತೊರೆದು, ಸ್ವ-ಆತ್ಮ-ಅನುಸಂಧಿಂ = ಆತ್ಮಚಿಂತನೆಯನ್ನು, ನಿತ್ಯಂ =
ಯಾವಾಗಲೂ, ವಿದಧೀತ = ಮಾಡಬೇಕು.
೩೩೩. ವಿಷಯಚಿಂತನೆಯು ಪುನಃಪುನಃ ಹೆಚ್ಚಾಗುವ ಮಲಿನವಾಸನೆ-
ಯೆಂಬ ಫಲವನ್ನೇ ಬೆಳೆಯಿಸುತ್ತದೆ. (ಯತಿಯು) ಇದನ್ನು[^೧] ಅರಿತುಕೊಂಡು
ವಿವೇಚನೆಯಿಂದ ವಿಷಯಚಿಂತನೆಯನ್ನು ತೊರೆದು ಆತ್ಮಚಿಂತನೆಯನ್ನೇ
ಯಾವಾಗಲೂ ಮಾಡಬೇಕು.
[^೧] 'ವಾಸನಾವೃದ್ಧಿಯಿಂದ ಕರ್ಮವೂ ಕರ್ಮ ವೃದ್ಧಿಯಿಂದ ವಾಸನೆಯೂ ಬೆಳೆಯು-
ವುದು' (೩೧೨). ]