This page has not been fully proofread.

ವಿವೇಕಚೂಡಾಮಣಿ
 
ಯತಿಃ = ಯತ್ನಶೀಲನು ಬಂಧಹೇತುಂ ಬಂಧಕ್ಕೆ ಕಾರಣವಾದ ಅಸತ್
ಅನುಸಂಧಿಂ ಅಸತ್ತಿನ ಅನುಸಂಧಾನವನ್ನು ವಿಹಾಯ ತೊರೆದು ಅಯಂ ಇವನು
ಸ್ವಯಮ್ ಅಹಂ ನಾನೇ ಆಸ್ಮಿ= ಆಗಿರುವೆನು ಇತಿ ಎಂದು ಆತ್ಮದೃಷ್ಟಾ, ಏವ-
ಆತ್ಮದೃಷ್ಟಿಯಿಂದಲೇ ತಿಷ್ಯತ್ - ನಿಲ್ಲಬೇಕು; ಸ್ವಾನುಭೂತ್ಯಾ ಆತ್ಮಾನುಭವದಿಂದ
ಬ್ರಹ್ಮಣಿ- ಬ್ರಹ್ಮದಲ್ಲಿ ನಿಷ್ಕಾ - ನಿಷ್ಠೆಯು ಸುಖಯತಿ - ಸುಖವನ್ನು ಕೊಡುತ್ತದೆ,
ಪ್ರತೀತಂ - ತೋರಿಬರುತ್ತಿರುವ ಅವಿದ್ಯಾ ಕಾರ್ಯ-ದುಃಖಂ = ಅವಿದ್ಯಾಕ
ಕಾರ್ಯ
ವಾದ ದುಃಖವನ್ನು ಪರಂ ಹರತಿ .. - ಅತ್ಯಂತವಾಗಿ ಹೋಗಲಾಡಿಸುತ್ತದೆ.
 
೩೩೩]
 
೧೭೩
 
೩೩೨. ಪ್ರಯತ್ನಶೀಲನಾದವನು ಬಂಧಕ್ಕೆ ಕಾರಣವಾದ ಅಸದ್ವಸ್ತುವಿನ
ಅನುಸಂಧಾನವನ್ನು ತೊರೆದು, 'ನಾನೇ ಇವನಾಗಿರುತ್ತೇನೆ' ಎಂದು ಆತ್ಮ
ದೃಷ್ಟಿಯಿಂದಲೇ ನಿಲ್ಲಬೇಕು. ಆತ್ಮಾನುಭವದಿಂದ ಬ್ರಹ್ಮದಲ್ಲಿಯೇ ನಿಷ್ಠೆ
ಯನ್ನು ಹೊಂದುವುದು ಸುಖಗೊಳಿಸುತ್ತದೆ ಮತ್ತು ಅವಿದ್ಯೆಯ ಕಾರ್ಯ
ವಾಗಿ ತೋರಿಬರುತ್ತಿರುವ ದುಃಖವನ್ನೂ ಆತ್ಯಂತಿಕವಾಗಿ ಹೋಗಲಾಡಿಸು
ತ್ತದೆ.
 
ಬಾಹ್ಯಾನುಸಂಧಿಃ ಪರಿವರ್ಧಯೇತ್ ಫಲಂ
ದುರ್ವಾಸನಾಮೇವ ತತಸ್ತತೋsಧಿಕಾಮ್ ।
ಜ್ಞಾತಾ ವಿವೇಕೈಃ ಪರಿಷ್ಕೃತ್ಯ ಬಾಹ್ಯಂ
ಸ್ವಾತ್ಮಾನುಸಂಧಿಂ ವಿದಧೀತ ನಿತ್ಯಮ್ । ೩೩೩ ॥
 
ಬಾಹ್ಯ. ಅನುಸಂಧಿಃ = ವಿಷಯಚಿಂತನೆಯು ತತಃ ತತಃ = ಪುನಃ ಪುನಃ
ಅಧಿಕಾರ – ಅಧಿಕವಾಗುವ ದುರ್ವಾಸನಾಂ – ಮಲಿನವಾಸನೆಯೆಂಬ ಫಲ
ಏವ ಫಲವನ್ನೇ ಪರಿವರ್ಧಯೇತ್ - ಬೆಳೆಯಿಸುತ್ತದೆ; [ಯತಿಯು] ಜ್ಞಾತ್ವಾ -
[ಇದನ್ನು ಅರಿತುಕೊಂಡು ವಿವೇಕೈ ವಿವೇಚನೆಗಳಿಂದ ಬಾಹ್ಯಂ - ವಿಷಯ ಚಿಂತನೆ
ಯನ್ನು ಪರಿಹೃತ್ಯ- ತೊರೆದು ಸ್ವ. ಆತ್ಮ ಅನುಸಂಧಿಂ ಆತ್ಮಚಿಂತನೆಯನ್ನು ನಿತ್ಯ
ಯಾವಾಗಲೂ ವಿದಧೀತ ಮಾಡಬೇಕು.
 

 
೩೩೩. ವಿಷಯಚಿಂತನೆಯು ಪುನಃಪುನಃ ಹೆಚ್ಚಾಗುವ ಮಲಿನವಾಸನೆ
ಯೆಂಬ ಫಲವನ್ನೇ ಬೆಳೆಯಿಸುತ್ತದೆ. (ಯತಿಯು) ಇದನ್ನು ಅರಿತುಕೊಂಡು
ವಿವೇಚನೆಯಿಂದ ವಿಷಯಚಿಂತನೆಯನ್ನು ತೊರೆದು ಆತ್ಮಚಿಂತನೆಯನ್ನೇ
ಯಾವಾಗಲೂ ಮಾಡಬೇಕು.
 
[೧ ವಾಸನಾವೃದ್ಧಿಯಿಂದ ಕರ್ಮವೂ ಕರ್ಮ ವೃದ್ಧಿಯಿಂದ ವಾಸನೆಯೂ ಬೆಳೆಯು
 
ವುದು' (೩೧೨). ]