This page has not been fully proofread.

ವಿವೇಕಚೂಡಾಮಣಿ
 
[೩೨೭
 
೩೨೬. ಅದರಿಂದ ಸ್ವರೂಪ ಚ್ಯುತಿಯು ಉಂಟಾಗುತ್ತದೆ. ಸ್ವರೂಪದಿಂದ
ಜಾರಿದವನು ಕೆಳಕ್ಕೆ ಬೀಳುತ್ತಾನೆ. ಕೆಳಕ್ಕೆ ಬಿದ್ದವನು ನಾಶವಾಗುವನೇ
ಹೊರತು ಪುನಃ ಅಭಿವೃದ್ಧಿಯನ್ನು ಪಡೆಯುವುದಿಲ್ಲ. ಆದುದರಿಂದ ಎಲ್ಲ
ಅನರ್ಥಗಳಿಗೂ ಕಾರಣವಾದ ವಿಷಯಚಿಂತೆಯನ್ನು ಬಿಡಬೇಕು.
 
[ಗೀತಾ ೨. ೬೨-೬೩ ನೋಡಿ.]
 
೧೭
 
ಅತಃ ಪ್ರಮಾದಾನ್ನ ಪರೋಽಸ್ತಿ ಮೃತ್ಯು-
ರ್ವಿವೇಕಿನೋ ಬ್ರಹ್ಮವಿದಃ ಸಮಾದ್ ।
ಸಮಾಹಿತಃ ಸಿದ್ಧಿಮುತಿ ಸಮ್ಯಕ್
 
ಸಮಾಹಿತಾತ್ಮಾ ಭವ ಸಾವಧಾನಃ ॥ ೩೨೭ ।
 
ಅತಃ . ಆದುದರಿಂದ ವಿವೇಕಿನಃ - ವಿವೇಕಿಯಾದ ಬ್ರಹ್ಮವಿದಃ = ಬ್ರಹ್ಮ
ಜ್ಞಾನಿಗೆ ಸಮಾಧ ಸಮಾಧಿಯಲ್ಲಿ ಪ್ರಮಾದಾತ್ = ಎಚ್ಚರಿಕೆ ತಪ್ಪುವುದಕ್ಕಿಂತ
ಪರಃ – ಬೇರೊಂದು ಮೃತ್ಯುಃ ಮೃತ್ಯುವು ನ ಅಸ್ತಿ-ಇಲ್ಲವು; ಸಮ್ಯಕ್ ಚೆನ್ನಾಗಿ
ಸಮಾಹಿತಃ - ಸಮಾಹಿತನಾದವನೇ ಸಿದ್ಧಿಂ – ಸಿದ್ಧಿಯನ್ನು ಉಪೈತಿ - ಹೊಂದು
ತಾನೆ; [ಆದುದರಿಂದ ಸಾವಧಾನಃ – ಎಚ್ಚರಿಕೆಯುಳ್ಳವನಾಗಿ ಸಮಾಹಿತಾತ್ಮಾ
ಸಮಾಹಿತವಾದ ಚಿತ್ರವುಳ್ಳವನಾಗು.
 
೩೨೭. ಆದುದರಿಂದ ವಿವೇಕಿಯಾದ ಬ್ರಹ್ಮಜ್ಞಾನಿಗೆ ಸಮಾಧಿಯಲ್ಲಿ
ಎಚ್ಚರಿಕೆ ತಪ್ಪುವುದಕ್ಕಿಂತ ಬೇರೊಂದು ಮೃತ್ಯುವಿರುವುದಿಲ್ಲ. ಚೆನ್ನಾಗಿ
ಸಮಾಹಿತನಾದವನೇ ಸಿದ್ಧಿಯನ್ನು ಹೊಂದುತ್ತಾನೆ. ಆದುದರಿಂದ ಎಚ್ಚರಿಕೆ
ಯಿಂದ ಮನಸ್ಸನ್ನು ಸಮಾಧಿಯಲ್ಲಿಡು.
 
ಜೀವತೋ ಯಸ್ಯ ಕೈವಲ್ಯಂ ವಿದೇಹ ಸ ಚ ಕೇವಲಃ ।
ಯಂಚಿತ್ರಶ್ಯತೋ ಭೇದಂ ಭಯಂ ತೇ ಯಜುಃಶ್ರುರ್ತಿ
 
॥ ೩೨೮ ।
 
ಜೀವತಃ ಬದುಕಿರುವ ಯಸ್ಯ ಯಾವನಿಗೆ ಕೈವಲ್ಯ೦=ಕೈವಲ್ಯವು [ಆಗಿರು
ವುದೋ] ನಿದೇಹೇ ಚ = ದೇಹಾನಂತರದಲ್ಲಿಯೂ ಸಃ = ಅವನು ಕೇವಲಃ = ಕೇವ
ಲನು; ಯತ್ ಕಿಂಚಿತ್ ಭೇದಂ - ಸ್ವಲ್ಪ ಭೇದವನ್ನೂ ಪಶ್ಯತಃ ನೋಡುವವನಿಗೆ
ಭಯಂ = ಭಯವನ್ನು ಯಜುಃಶ್ರುತಿಃ ಬೂತೇ = ಯಜುರ್ವೇದ ಶ್ರುತಿಯು
ಹೇಳುತ್ತದೆ.
 
w
 
೩೨೮. ಬದುಕಿರುವಾಗ ಯಾವನಿಗೆ ಕೈವಲ್ಯವುಂಟಾಗಿರುವುದೋ ಅವ
ನಿಗೇ ದೇಹಾನಂತರದಲ್ಲಿಯೂ ಕೈವಲ್ಯವುಂಟಾಗುತ್ತದೆ. ಸ್ವಲ್ಪ ಭೇದವನ್ನು