This page has not been fully proofread.

ವಿವೇಕಚೂಡಾಮಣಿ
 
[೧೩
 
(ಫಲಾಭಿಸಂಧಿಯಿಲ್ಲದೆ ಮಾಡಿದ ಕರ್ಮವು ಚಿತ್ತ ಶುದ್ಧಿಯ ಮೂಲಕ ಆತ್ಮಜ್ಞಾನಕ್ಕೆ
ಅವಕಾಶವನ್ನುಂಟ
ಎಂಟುಮಾಡುತ್ತದೆ ಎಂಬುದು ಅಭಿಪ್ರಾಯ.
 

 
ಸಮ್ಯಗ್ವಿಚಾರತಃ ಸಿದ್ಧಾ ರಜ್ಜು-ತಾವಧಾರಣಾ ।
ಭ್ರಾಂತ್ಯೋದಿತ-ಮಹಾಸರ್ಪ-ಭಯದುಃಖವಿನಾಶಿನೀ । ೧೨ ॥
 
ಭ್ರಾಂತ್ಯಾ = ಭ್ರಾಂತಿಯಿಂದ ಉದಿತ-ಮಹಾಸರ್ಪ-ಭಯದುಃಖ, ವಿನಾ-
ಶಿನೀ - ಉದಿತವಾದ ಮಹಾಸರ್ಪದಿಂದ ಉಂಟಾದ ಭಯದುಃಖಗಳನ್ನು ಹೋಗ
ರಜ್ಜು-ತತ್ತ್ವ-ಅವಧಾರಣಾ - ಹಗ್ಗವೆಂಬ ನಿಜಸ್ಥಿತಿಯ ನಿಶ್ಚಯವು
ಸಮ್ಯಗ್ - ವಿಚಾರತಃ = ಸಮ್ಯಗ್ವಿಚಾರದಿಂದಲೇ ಸಿದ್ಧಾ - ಸಿದ್ಧವಾಗುವುದು.
 
ಲಾಡಿಸುವ
 
a
 
೧೨. ಭ್ರಾಂತಿಜನಿತವಾದ ಮಹಾಸರ್ಪದಿಂದ ಉಂಟಾಗುವ ಭಯ
ದುಃಖಗಳನ್ನು ಹೋಗಲಾಡಿಸುವ ಹಗ್ಗವೆಂಬ ನಿಜಸ್ಥಿತಿಯ ನಿಶ್ಚಯವು
ಸಮ್ಯಗ್ವಿಚಾರದಿಂದಲೇ ಸಿದ್ಧವಾಗುವುದು.
 
[ನಸುಗತ್ತಲೆಯಲ್ಲಿ ಬಿದ್ದಿರುವ ಹಗ್ಗವನ್ನು ಹಾವೆಂದು ಭಾವಿಸಿಕೊಂಡು ಹೆದರಿದ
ಮನುಷ್ಯನು ಒಂದು ದೀಪವನ್ನು ತಂದು ಇದು ಹಗ್ಗ, ಹಾವಲ್ಲ' ಎಂದು ವಿಚಾರದ
ಮೂಲಕ ವಸ್ತು ತತ್ತ್ವವನ್ನು ಅರಿತುಕೊಂಡು ಭಯವನ್ನು ಬಿಡುವುದು ಎಲ್ಲರಿಗೂ
ತಿಳಿದ ವಿಷಯ. ಹೀಗೆಯೇ ಶರೀರೇಂದ್ರಿಯ ಸಂಘಾತವನ್ನು ಆತ್ಮನೆಂದು ಭಾವಿಸಿ
ಕೊಂಡವನು ಆತ್ಮನ ಸ್ವರೂಪವನ್ನು ನಿರ್ಧರಿಸಿದ ಮೇಲೆ ಭ್ರಾಂತಿಯಿಂದ ಉಂಟಾಗಿದ್ದ
ಭಯದುಃಖಗಳನ್ನು ಬಿಡುತ್ತಾನೆ.
 
ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ ।
ನ ಸ್ನಾನೇನ ನ ದಾನೇನ ಪ್ರಾಣಾಯಾಮ-ಶತೇನ ವಾ ॥ ೧೩ ॥
 
ಅರ್ಥಸ್ಯ - ತತ್ತ್ವದ ನಿಶ್ಚಯಃ = ನಿಶ್ಚಯವು ಹಿತೋಕ್ತಿತಃ - ಆಪ್ತವಾಕ್ಯ
ದಿಂದಲೂ ವಿಚಾರೇಣ - ವಿಚಾರದಿಂದಲೂ ದೃಷ್ಟಃ = ಕಂಡುಬರುತ್ತದೆ; ಸ್ನಾನೇನ
ಸ್ನಾನಮಾಡುವುದರಿಂದಲೂ ನ- ಇಲ್ಲ, ದಾನೇನ - ದಾನದಿಂದಲೂ ವಾ ಅಥವಾ
ಪ್ರಾಣಾಯಾಮ-ಶತೇನ - ನೂರಾರು ಪ್ರಾಣಾಯಾಮಗಳಿಂದಲೂ ನ = ಇಲ್ಲ.
 
P
 
C
 
೧೩. ತತ್ತ್ವನಿಶ್ಚಯವು ಆಪ್ತವಾಕ್ಯವನ್ನು ಅನುಸರಿಸಿದ ವಿಚಾರದಿಂದ
ಸಿದ್ಧಿಸುತ್ತದೆಯೇ ವಿನಾ ಸ್ನಾನದಿಂದಾಗಲಿ ದಾನದಿಂದಾಗಲಿ ಅಥವಾ ನೂರಾರು
ಪ್ರಾಣಾಯಾಮಗಳಿಂದಾಗಲಿ ಸಿದ್ಧಿಸುವುದಿಲ್ಲ.
 
[೧ ಆಪ್ತರಾದ ಆಚಾರ್ಯರು ಉಪದೇಶಮಾಡುವ ಯಥಾರ್ಥವಾದ ತು
ಹಿತೋಕ್ತಿ ಎನಿಸುವುದು.