This page has not been fully proofread.

ವಿವೇಕಚೂಡಾಮಣಿ
 
ಯಥಾ ಹೇಗೆ ಪ್ರಮಾದತಃ - ಪ್ರಮಾದದಿಂದ ಪ್ರಚ್ಯುತ ಕೇಲಿ. ಕಂದುಕಃ-
ಜಾರಿದ ಆಟದ ಚೆಂಡು ಸೋಪಾನ. ಪಂಕ್ = ಮೆಟ್ಟಿಲುಗಳ ಸಾಲಿನಲ್ಲಿ ಪತಿತಃ -
ಬೀಳುವುದೊ ತಥಾ - ಹಾಗೆಯೇ ಚಿತ್ರಂ - ಚಿತ್ರವು ಲಕ್ಷಚ್ಯುತಂ ಚೇತ್ ಯದಿ =
ತನ್ನ ಗುರಿಯಿಂದ ಚ್ಯುತವಾದರೆ ಬಹಿರ್ಮುಖಂ=ಬಹಿರ್ಮುಖವಾಗಿ ತತಃ ತತಃ .
ಅಲ್ಲಲ್ಲಿ ಸನ್ನಿಪತೇತ್ - ಬಿದ್ದು ಬಿಡುತ್ತದೆ.
 
=
 
೩೨೬]
 
೩೨೪,
ಚೆಂಡು ಹೇಗೆ ಕೆಳಕ್ಕೆ ಕೆಳಕ್ಕೆ ಹೋಗುವುದೋ
 
ಪ್ರಮಾದವಶದಿಂದ ಮೆಟ್ಟಿಲುಗಳ ಸಾಲಿನ ಮೇಲೆ ಜಾರಿದ ಆಟದ
ಹಾಗೆಯೇ ಆತ್ಮನೆಂಬ ಗುರಿ
ಯಿಂದ ಜಾರಿದ ಚಿತ್ತವು ಬಹಿರ್ಮುಖವಾಗಿ ಅಲ್ಲಲ್ಲಿ ಕೆಳಕ್ಕೆ ಬಿದ್ದು ಓಡುತ್ತದೆ.
 
ವಿಷಯೇಷ್ಯಾವಿಶಚೇತಃ ಸಂಕಲ್ಪಯತಿ ತಪ್ಪು ಣಾನ್ ।
ಸಮ್ಯಕ್ ಸಂಕಲ್ಪ ನಾತ್ ಕಾಮಃ ಕಾಮಾತ್ ಪುಂಸಃ
 
೧೬೯
 
ಪ್ರವರ್ತನಮ್ ॥ ೩೨೫ ॥
 
ವಿಷಯೇಸು = ವಿಷಯವಸ್ತುಗಳಲ್ಲಿ ಆನಿಶತ್ ಚೇತಃ - • ಪ್ರವೇಶಿಸುತ್ತಿರುವ
ಮನಸ್ಸು ತತ್-ಗುಣಾನ್ , ಅವುಗಳ ಗುಣಗಳನ್ನು ಸಂಕಲ್ಪಯತಿ - ಚಿಂತಿಸುತ್ತದೆ;
ಸಮ್ಯಕ್ ಸಂಕಲ್ಪ ನಾತ್ , ಚೆನ್ನಾಗಿ ಚಿಂತಿಸುವುದರಿಂದ ಕಾಮಃ – ಬಯಕೆಯು
[ಉಂಟಾಗುತ್ತದೆ; ಕಾಮಾತ=ಬಯಕೆಯಿಂದ ಪುಂಸಃ ಮನುಷ್ಯನ ಪ್ರವರ್ತನಂ
ಪ್ರವೃತ್ತಿಯು [ಉಂಟಾಗುತ್ತದೆ].
 
೩೨೫. ವಿಷಯವಸ್ತುಗಳಲ್ಲಿ ಪ್ರವೇಶಿಸುತ್ತಿರುವ ಮನಸ್ಸು ಅವುಗಳ
ಗುಣಗಳನ್ನು ಚಿಂತಿಸುತ್ತದೆ. ಅವುಗಳನ್ನು ಚೆನ್ನಾಗಿ ಚಿಂತಿಸುವುದರಿಂದ
ಅವುಗಳಲ್ಲಿ ಬಯಕೆಯುಂಟಾಗುತ್ತದೆ. ಬಯಕೆಯಿಂದ ಮನುಷ್ಯನು ಕರ್ಮ
ದಲ್ಲಿ ಪ್ರವರ್ತಿಸುತ್ತಾನೆ.
 
ತತಃ ಸ್ವರೂಪ-ವಿಭ್ರಂಶೋ ವಿಭ್ರಷ್ಟ ಸ್ತು ಪತತ್ಯಧಃ ।
ಪತಿತಸ್ಯ ವಿನಾ ನಾಶಂ ಪುನರ್ನಾರೋಹ ಈಕ್ಷ್ಯತೇ ।
ಸಂಕಲ್ಪಂ ವರ್ಜಯೇತ್ ತಸ್ಮಾತ್ ಸರ್ವಾನರ್ಥಸ್ಯ ಕಾರಣ
 
॥ ೩೨೬ ।
 
ತತಃ – ಅದರ ದೆಸೆಯಿಂದ ಸ್ವರೂಪ ವಿಭ್ರಂಶಃ = ಸ್ವರೂಪಚ್ಯುತಿಯು;
ವಿಭ್ರಷ್ಟ * ತು- ಭ್ರಷ್ಟನಾದವನು ಅಧಃ = ಕೆಳಕ್ಕೆ ಪತತಿ ಬೀಳುತ್ತಾನೆ; ಪತಿತಸ್ಯ
ಪತಿತನಾದವನಿಗೆ ನಾಶಂ ವಿನಾ - ನಾಶವೇ ಹೊರತು ಪುನಃ – ಮತ್ತೆ ಆರೋಹಃ
ಅಭಿವೃದ್ಧಿಯು ನ ಈಕತೇ - ಕಂಡುಬರುವುದಿಲ್ಲ; ತಸ್ಮಾತ್ = ಆದುದರಿಂದ
ಸರ್ವ ಅನರ್ಥಸ್ಯ - ಎಲ್ಲ ಅನರ್ಥಗಳಿಗೆ ಕಾರಣಂ = ಕಾರಣವಾದ ಸಂಕಲ್ಪ -
ವಿಷಯಚಿಂತನೆಯನ್ನು ವರ್ಜಯೇತ್ - ಬಿಡಬೇಕು,