This page has not been fully proofread.

೩೨೧]
 
ವಿವೇಕಚೂಡಾಮಣಿ
 
ಹೊರಗೂ ಒಳಗೂ ಸಮಾಹಿತಃ ಸನ್ = ಸಮಾಹಿತನಾಗಿ ಕರ್ಮಬಂಧ ಸತಿ -
ಪ್ರಾರಬ್ಧ ಕರ್ಮವು ಇನ್ನೂ ಇದ್ದರೆ ಕಾಲಂ = ಕಾಲವನ್ನು ನಯಥಾಃ - ಕಳೆ.
ಕಾಣುತ್ತಿರುವ ದೃಶ್ಯ ಜಗತ್ತನ್ನು ಲಯಮಾಡಿಕೊಂಡು ಸನ್ಮಾ
ತ್ರವೂ ಆನಂದಘನವೂ ಆದ ಬ್ರಹ್ಮವನ್ನೇ ಭಾವಿಸುತ್ತ, ಒಳಗೂ ಹೊರಗೂ
ಸಮಾಹಿತನಾಗಿ, ಕರ್ಮಬಂಧವು ಇನ್ನೂ ಇದ್ದರೆ ಕಾಲವನ್ನು ಕಳೆ.
 
೩೧೯
 
೧೬೭
 
ಒಂದು ವೇಳೆ ಪ್ರಾರಬ್ಧವಶದಿಂದ ಪ್ರಪಂಚವು ತೋರುತ್ತಿದ್ದರೆ ಆಗ ಏನು ಮಾಡ
ಬೇಕೆಂದು ಹೇಳಿದೆ.]
 
ಪ್ರಮಾದೋ ಬ್ರಹ್ಮನಿಷ್ಠಾಯಾಂ ನ ಕರ್ತವ್ಯಃ ಕದಾಚನ ।
ಪ್ರಮಾದೋ ಮೃತ್ಯುರಿತ್ಸಾಹ ಭಗವಾನ್ ಬ್ರಹ್ಮಣಃ ಸುತಃ ॥ ೩೨೦ ॥
 
ಬ್ರಹ್ಮನಿಷ್ಠಾಯಾಂ - ಬ್ರಹ್ಮನಿಷ್ಠೆಯಲ್ಲಿ ಪ್ರಮಾದಃ - ಅನವಧಾನತೆಯು
ಕದಾಚನ ಎಂದಿಗೂ ಕರ್ತವ್ಯ- ಮಾಡತಕ್ಕದ್ದಲ್ಲ; ಪ್ರಮಾದಃ- ಪ್ರಮಾದವೇ
ಮೃತ್ಯು – ಮೃತ್ಯುವು ಇತಿ - ಎಂದು ಭಗವಾನ್ - ಭಗವಂತನಾದ ಬ್ರಹ್ಮಣಃ
ಸುತಃ = ಬ್ರಹ್ಮಕುಮಾರನು ಆಹ = ಹೇಳುತ್ತಾನೆ.
 
೩೨೦. ಬ್ರಹ್ಮನಿಷ್ಠೆಯಲ್ಲಿ ಎಂದಿಗೂ ಎಚ್ಚರತಪ್ಪ ಕೂಡದು. 'ಪ್ರಮಾ
ದವೇ ಮೃತ್ಯುವು' ಎಂದು ಭಗವಂತನಾದ ಬ್ರಹ್ಮಕುಮಾರನು ಹೇಳುತ್ತಾನೆ.
 
[೧ ಇಲ್ಲಿ ಬ್ರಹ್ಮಕುಮಾರನೆಂದು ಸೂಚಿಸಿರುವುದು ಸನತ್ಕುಮಾರನನ್ನು, ಇವನು
ಧೃತರಾಷ್ಟ್ರನಿಗೆ ಮಾಡಿದ ಉಪದೇಶದಲ್ಲಿ 'ಪ್ರಮಾದವನ್ನೇ ಮೃತ್ಯುವೆಂದು ನಾನು
ಹೇಳುತ್ತೇನೆ' ಪ್ರಮಾದಂ ವೈ ಮೃತ್ಯು ಮಹಂ ಬ್ರವೀಮಿ ಎಂಬ ಪ್ರಸಿದ್ಧವಾದ
ವಾಕ್ಯವು ಕಂಡುಬರುತ್ತದೆ. ಮಹಾಭಾರತದ ಉದ್ಯೋಗ ಪರ್ವದ೪೦-೪೫ ಅಧ್ಯಾಯ
ಗಳನ್ನು ಸನತ್ಸುಜಾತ- ಸಂವಾದವು ಒಳಕೊಂಡಿದೆ.]
 
ನ ಪ್ರಮಾದಾದನರ್ಥೋಽನೋ ಜ್ಞಾನಿನಃ ಸ್ವಸ್ವರೂಪತಃ ।
ತತೋ ಮೋಹಸ್ತತೋsಹಂಧೀಸ್ತತೋ ಬಂಧಸ್ತತೋ ವ್ಯಥಾ
 
=
 
ಜ್ಞಾನಿನಃ-ಜ್ಞಾನಿಯಾದವನಿಗೆ ಸ್ವಸ್ವರೂಪತಃ ತನ್ನ ಸ್ವರೂಪದಿಂದ ಪ್ರಮಾ
ದಾತ್ - ಎಚ್ಚರತಪ್ಪುವುದಕ್ಕಿಂತ ಅನ್ಯಃ -
8 = ಬೇರೆ ಅನರ್ಥಃ = ಕೇಡು ನ= ಇರು
ವುದಿಲ್ಲ; ತತಃ - ಅದರಿಂದ ಮೋಹಃ ಮೋಹವೂ ತತಃ ಅದರಿಂದ ಅಹಂ-ಧೀಃ-
ಅಹಂಕಾರವೂ ತತಃ = ಅದರಿಂದ ಬಂಧಃ = ಬಂಧವೂ ತತಃ – ಅದರಿಂದ ವ್ಯಥಾ.
ವ್ಯಥೆಯೂ [ಉಂಟಾಗುತ್ತವೆ].