This page has not been fully proofread.

೧೬೬
 
ವಿವೇಕಚೂಡಾಮಣಿ
 
[೩೧೮
 
ಅಂಧಕಾರವು ಅತಿ ಪ್ರಕೃಷ್ಣಾ ಅಪಿ= = ಎಷ್ಟು ನಿಬಿಡವಾಗಿದ್ದರೂ ಅರುಣ ಪ್ರಭಾಯಾಂ=
ಅರುಣಪ್ರಭೆಯಲ್ಲಿ ಸಾಧು ವಿಲೀಯತೇ - ಸಂಪೂರ್ಣವಾಗಿ ನಾಶವಾಗುತ್ತದೆ.
 
೩೧೭, ಅಂಧಕಾರವು ಎಷ್ಟೇ ನಿಬಿಡವಾಗಿದ್ದರೂ ಅರುಣೋದಯ
ವಾದಾಗ ಸಂಪೂರ್ಣವಾಗಿ ನಾಶವಾಗುವಂತೆ ಸದ್ದವಾಸನೆಯ ಪ್ರಕಾಶವು
ಹಬ್ಬಿಕೊಂಡರೆ ಈ ಅಹಂಕಾರಾದಿ.ವಾಸನೆಯು ನಾಶವಾಗುತ್ತದೆ.
 
ತಮಸ್ತಮಃಕಾರ್ಯಮನರ್ಥಜಾಲಂ
ನ ದೃಶ್ಯತೇ ಸತ್ಯುದಿತೇ ದಿನೇಶೇ ।
ತಥಾದ್ವಯಾನಂದ-ರಸಾನುಭೂತ
 
ನ ವಾsಸ್ತಿ ಬಂದೋ ನ ಚ ದುಃಖಗಂಧಃ ॥ ೩೧೮ ॥
ದಿನೇಶ ಉದಿತೇ ಸತಿ = ಸೂರ್ಯನು ಉದಯಿಸುತ್ತಿರುವಾಗ ತಮಃ =
ಕತ್ತಲೆಯೂ ತಮಃ ಕಾರ್ಯ- ಕತ್ತಲೆಯಿಂದಾಗುವ ಅನರ್ಥಜಾಲಂ = ಅನರ್ಥ
ಸಂಕುಲವೂ [ಯಥಾ - ಹೇಗೆ) ನ ದೃಶ್ಯತೇ - ಕಂಡುಬರುವುದಿಲ್ಲವೊ ತಥಾ =
ಹಾಗೆಯೇ ಅದ್ವಯ ಆನಂದರಸ ಅನುಭೂತ್ (ಸತ್ಯಾಂ]- ಅದ್ವಯ ಬ್ರಹ್ಮಾನಂದ
ರಸದ ಅನುಭವವು ಆಗುತ್ತಿರುವಾಗ ಬಂಧಃ – ಬಂಧವು ನ ನಾ ಆಸ್ತಿ ಇರುವು
ದಿಲ್ಲ, ದುಃಖಗಂಧಃ ಚ – ಮತ್ತು ದುಃಖಗಂಧವು ನ - ಇರುವುದಿಲ್ಲ.
 
E
 

 
೩೧೮. ಸೂರ್ಯನು ಉದಯಿಸಿದರೆ ಕತ್ತಲೆಯಾಗಲಿ ಅದರಿಂದಾಗುವ
ಅನರ್ಥಗಳ ಸಮೂಹವಾಗಲಿ ಹೇಗೆ ಕಂಡುಬರುವುದಿಲ್ಲವೋ ಹಾಗೆಯೇ
ಅದ್ವಯ ಬ್ರಹ್ಮಾನಂದ ರಸದ ಅನುಭವವಾಗುತ್ತಿರುವಾಗ ಬಂಧವೂ ಇರುವು
ದಿಲ್ಲ, ದುಃಖದ ಗಂಧವೂ ಇರುವುದಿಲ್ಲ.
 
[೧ "ಏಕತ್ವವನ್ನು ನೋಡುತ್ತಿರುವವನಿಗೆ ಮೋಹವೆಲ್ಲಿ? ಶೋಕವೆಲ್ಲಿ? ತತ್ರ ಕೋ
ಮೋಹಃ ಕಶೋಕ ಏಕತ್ವಮನುಪಶ್ಯತಃ (ಈಶಾವಾಸ್ಯ ಉ. ೭). 1
 
ದೃಶ್ಯಂ ಪ್ರತೀತಂ ಪ್ರವಿಲಾಪಯನ್ ಸ್ವಯಂ
ಸನ್ಮಾತ್ರಮಾನಂದಘನಂ ವಿಭಾವಯನ್ ।
ಸಮಾಹಿತಃ ಸನ್ ಬಹಿರಂತರಂ ನಾ
 
ಕಾಲಂ ನಯಥಾಃ ಸತಿ ಕರ್ಮಬಂಧ ॥ ೩೧೯
 
ಪ್ರತೀತಂ = ಕಾಣುತ್ತಿರುವ ದೃಶ್ಯಂ ದೃಶ್ಯ ಜಗತ್ತನ್ನು ಪ್ರವಿಲಾಪಯನ್
ಸನ್ - ಲಯಮಾಡಿಕೊಂಡು ಸನ್ಮಾತ್ರಂ = ಸನ್ಮಾತ್ರವಾದ ಆನಂದಘನಂ - ಆನಂದ
ಘನವಾದ [ಬ್ರಹ್ಮವನ್ನು ವಿಭಾವಯನ್ - ಭಾವಿಸುತ್ತ ಬಹಿಃ ಅಂತರಂ ವಾ -