This page has been fully proofread once and needs a second look.

ವಿವೇಕಚೂಡಾಮಣಿ
 
೧೧

 
[^೩
]
 
'ಮನಸ್ಸಿನಿಂದಲೇ ತನ್ನನ್ನು ಉದ್ಧರಿಸಿಕೊಳ್ಳಬೇಕು, ತನ್ನನ್ನು ಕುಗ್ಗಿಸಿಕೊಳ್ಳ
-
ಬಾರದು; ಏಕೆಂದರೆ (ಶುದ್ಧವಾದ) ಮನಸ್ಸೇ ತನ್ನ ಬಂಧು, (ವಿಷಯಗಳಲ್ಲಿ ಅನು
-
ರಕ್ತವಾದ) ಮನಸ್ಸೇ ತನ್ನ ಶತ್ರು' ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವ
-
ಸಾದಯೇತ್ । ಆತ್ಮವ ಮೈವಹ್ಯಾ ತ್ಮನೋ ಬಂಧುರಾತ್ಮೈವ ರಿಪುರಾತ್ಮನಃ || (ಗೀತಾ
 

೬, ೫.)]
 

 

 
ಸಂನ್ಯಸ್ಯ ಸರ್ವಕರ್ಮಾಣಿ ಭವಬಂಧ-ವಿಮುಕ್ತಯೇ ।

ಯತ್ಯತಾಂ ಪಂಡಿತೈರ್ಧಿಧೀರೈರಾತ್ಮಾಭ್ಯಾಸ ಉಪಸ್ಥಿತೈಃ ॥ ೧೦ ॥
 

 
ಸರ್ವಕರ್ಮಾಣಿ -= ಸರ್ವಕರ್ಮಗಳನ್ನು, ಸಂನ್ಯಸ್ಯ -= ತ್ಯಜಿಸಿ, ಭವಬಂಧ-

ವಿಮುಕ್ತಯೇ-= ಸಂಸಾರವೆಂಬ ಕಟ್ಟಿನಿಂದ ಬಿಡಿಸಿಕೊಳ್ಳಲು, ಆತ್ಮಾಭ್ಯಾಸೇ = ಆತ್ಮ

ಚಿಂತನದಲ್ಲಿ, ಉಪಸ್ಥಿತೈಃ = ನಿಷ್ಠರಾದ, ಧೀರೈಃ = ಧೀಮಂತರಾದ, ಪಂಡಿತೈಃ-=ವಿವೇಕಿ
-
ಗಳಿ೦ದ, ಯತ್ಯ ತಾಂ = ಪ್ರಯತ್ನವು ಮಾಡಲ್ಪಡಲಿ.
 

 
೧೦. ಆತ್ಮಚಿಂತನದಲ್ಲಿ[^೧] ನಿಷ್ಠೆಯುಳ್ಳವರೂ ಧೀಮಂತರೂ[^೨] ಆದ

ವಿವೇಕಿಗಳು ಸರ್ವಕರ್ಮಗಳನ್ನೂ[^೩] ತ್ಯಜಿಸಿ ಸಂಸಾರವೆಂಬ ಕಟ್ಟಿನಿಂದ ಬಿಡಿಸಿ
-
ಕೊಳ್ಳಲು ಪ್ರಯತ್ನಿಸಲಿ.
 

 
[^] ಬ್ರಹ್ಮವಿಷಯವನ್ನೇ ಯಾವಾಗಲೂ ಚಿಂತಿಸುತ್ತ, ಅದನ್ನೇ ಮಾತಾಡುತ್ತ,

ಅದಕ್ಕೆ ವಿರುದ್ಧವಾದ ಭಾವನೆಗಳನ್ನು ನಿರಾಕರಿಸುತ್ತ, ಅದರಲ್ಲೇ ತನ್ಮಯವಾಗಿರು
-
ವುದು ಆತ್ಮಾಭ್ಯಾಸ, ತಚ್ಚಿಂತನಂ ತತ್ಕಥನಮನ್ಯೋsನ್ಯಂ ತತ್ವ ಬೋಧನಮ್ ।

ಏತದೇಕಪರತ್ವಂ ಚ ಬ್ರಹ್ಮಾಭ್ಯಾಸಂ ವಿದುರ್ಬುಧಾಃ।
 

[^

 
]ತಮ್ಮ ಬುದ್ಧಿಯನ್ನು ವಶದಲ್ಲಿಟ್ಟಿರುವವರು.
 
2
 

[^೩]
ಕರ್ಮಕಾಂಡದಲ್ಲಿ ಹೇಳಿರುವ ಕಾಮ್ಯಕರ್ಮಗಳನ್ನು.]
 

 
ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ ।

ವಸ್ತು ಸಿದ್ಧಿರ್ವಿಚಾರೇಣ ನ ಕಿಂಚಿತ್ ಕರ್ಮಕೋಟಿಭಿಃ || ೧೧
 
ಕರ್ಮ -
||
 
ಕರ್ಮ =
ಕರ್ಮವು, ಚಿತ್ರಸ್ಯ -ತಸ್ಯ = ಚಿತ್ರದತದ, ಶುದ್ಧಯೇ - ಶುದ್ಧಿಗಾಗಿ, ವಸ್ತು.
-
ಉಪಲಬ್ಧಯೇ -= ಪರವಸ್ತುವಿನ ಸಾಕ್ಷಾತ್ಕಾರಕ್ಕಾಗಿ, ನ ತು- = ಅಲ್ಲ; ವಸ್ತು ಸಿದ್ಧಿ-
ಧಿಃ =
ವಸ್ತು ಸಾಕ್ಷಾತ್ಕಾರವು, ವಿಚಾರೇಣ -= ವಿಚಾರದಿಂದ [ಉಂಟಾಗುವುದು], ಕರ್ಮ.
-
ಕೋಟಿಭಿಃ = ಕೋಟಿ ಕರ್ಮಗಳಿಂದಲೂ, ನ ಕಿಂಚಿತ್ = ಏನೂ ಆಗುವುದಿಲ್ಲ.
 

 
೧೧. ಕರ್ಮವು ಚಿತ್ತ ಶುದ್ಧಿಗಾಗಿ ಇರುವುದೇ ಹೊರತು ಪರವಸ್ತುವಿನ

ಸಾಕ್ಷಾತ್ಕಾರಕ್ಕಾಗಿ ಅಲ್ಲ. ವಸ್ತುಸಾಕ್ಷಾತ್ಕಾರವು ವಿಚಾರದಿಂದ ಉಂಟಾಗು

ವುದೇ ವಿನಾ ಕೋಟಿಕರ್ಮಗಳಿಂದಲೂ ಆಗುವುದಿಲ್ಲ.