This page has been fully proofread once and needs a second look.

ದೇಹೇ = ಶರೀರದಲ್ಲಿ, ಯಾವತ್ ವಾ = ಎಲ್ಲಿಯ ವರೆಗೆ, ಯತ್ ಕಿಂಚಿತ್ =
ಸ್ವಲ್ಪವಾದರೂ, ವಿಷ-ದೋಷ-ಸ್ಫೂರ್ತಿಃ ಅಸ್ತಿ ಚೇತ್ = ವಿಷದೋಷದ ವ್ಯಾಪ್ತಿ
ಯಿರುವುದೊ, [ಅಲ್ಲಿಯ ವರೆಗೆ] ಆರೋಗ್ಯಾಯ ಕಥಂ ಭವೇತ್ = ಆರೋಗ್ಯವು
ಹೇಗೆ ಲಭಿಸೀತು? ತದ್ವತ್ = ಹಾಗೆಯೇ, ಅಹಂತಾ ಅಪಿ = ಅಹಂಕಾರವೂ ಕೂಡ
[ಎಲ್ಲಿಯ ವರೆಗೆ ಇರುವುದೋ ಅಲ್ಲಿಯ ವರೆಗೆ] ಯೋಗಿನಃ = ಯೋಗಿಗೆ, ಮುಕ್ತ್ಯೈ
[ಕಥಂ ಭವೇತ್] = ಮುಕ್ತಿಯು ಹೇಗೆ ಲಭಿಸೀತು?
 
೩೦೨. ಎಲ್ಲಿಯ ವರೆಗೆ ಶರೀರದಲ್ಲಿ ಸ್ವಲ್ಪವಾದರೂ ವಿಷದೋಷವಿರು-
ವುದೋ ಅಲ್ಲಿಯ ವರೆಗೆ ಆರೋಗ್ಯವು ಹೇಗೆ ಲಭಿಸಿತು? ಹಾಗೆಯೇ
ಅಹಂಕಾರವಿರುವ ವರೆಗೂ ಯೋಗಿಗೆ ಮುಕ್ತಿಯು (ಹೇಗೆ ಲಭಿಸಿತು)?
 
ಅಹಮೋಽತ್ಯಂತ-ನಿವೃತ್ತ್ಯಾ ತತ್ಕೃತ-ನಾನಾವಿಕಲ್ಪ-ಸಂಕೃಹೃತ್ಯಾ ।
ಪ್ರತ್ಯಕ್-ತತ್ತ್ವ-ವಿವೇಕಾದಯಮಹಮಸ್ಮೀತಿ ವಿಂದತೇ ತತ್ತ್ವಮ್ ॥ ೩೦೩ ॥
 
ಅಹಮಃ = ಅಹಂಕಾರದ, ಅತ್ಯಂತ-ನಿವೃತ್ತ್ಯಾ = ಸಂಪೂರ್ಣವರಿಹಾರದಿಂದ,
ತತ್- ಕೃತ-ನಾನಾ-ವಿಕಲ್ಪ-ಸಂಹೃತ್ಯಾ = ಅದರಿಂದಾದ ವಿವಿಧ ಕಲ್ಪನೆಗಳ ನಿರೋಧ-
ದಿಂದ, ಪ್ರತ್ಯಕ್-ತತ್ತ್ವ-ವಿವೇಕಾತ್ = ಆತ್ಮ-ಯಾಥಾತ್ಮ್ಯದ ವಿವೇಚನೆಯಿಂದ,
ಅಯಮ್ ಅಹಮ್ ಅಸ್ಮಿ = ಇವನೇ ನಾನು, ಇತಿ = ಎಂದು, ತತ್ತ್ವಂ= ಪರಮಾತ್ಮ
ತತ್ತ್ವವನ್ನು, ವಿಂದತೇ = ಹೊಂದುತ್ತಾನೆ.
 
೩೦೩. ಅಹಂಕಾರದ ಸಂಪೂರ್ಣ ನಿವೃತ್ತಿಯಿಂದಲೂ ಅದರಿಂದಾದ
ವಿವಿಧ ಕಲ್ಪನೆಗಳ ನಿರೋಧದಿಂದಲೂ ಆತ್ಮ-ಯಾಘಾತ್ಮದ ವಿವೇಚನೆಯಿಂ-
ದಲೂ 'ಇವನೇ ನಾನು' ಎಂದು ಪರಮಾತ್ಮ -ತತ್ತ್ವವನ್ನು ಹೊಂದುತ್ತಾನೆ.
 
ಅಹಂಕಾರೇ ಕರ್ತರ್ಯಹಮಿತಿ ಮತಿಂ ಮುಂಚ ಸಹಸಾ
ವಿಕಾರಾತ್ಮನ್ಯಾತ್ಮಪ್ರತಿಫಲ-ಜುಷಿ ಸ್ವಸ್ಥಿತಿ-ಮುಷಿ ।
ಯದಧ್ಯಾಸಾತ್ ಪ್ರಾಸ್ತಾ ಜನಿ-ಮೃತಿ-ಜರಾ-ದುಃಖಬಹುಲಾ
ಪ್ರತೀಚಶ್ಚಿನ್ಮೂರ್ತೇಸ್ತವ ಸುಖತನೋಃ ಸಂಸ್ಕೃತಿರಿಯಮ್ ॥ ೩೦೪ ॥
 
ಸ್ವಸ್ಥಿತಿ-ಮುಷಿ= ಆತ್ಮಸ್ವರೂಪವನ್ನು ಮರೆಮಾಡುವ, ಆತ್ಮಪ್ರತಿಫಲ-ಜುಷಿ =
ಆತ್ಮಪ್ರತಿಬಿಂಬವನ್ನು ಹೊಂದಿರುವ, ವಿಕಾರಾತ್ಮನಿ = ವಿಕಾರರೂಪವಾದ, ಕರ್ತರಿ =
ಕರ್ತೃವಾದ, ಅಹಂಕಾರೇ = ಅಹಂಕಾರದಲ್ಲಿ, ಅಹಮ್ ಇತಿ = 'ನಾನು ಎಂಬ,
ಮತಿಂ = ಬುದ್ಧಿಯನ್ನು, ಸಹಸಾ = ಕೂಡಲೇ, ಮುಂಚ = ಬಿಡು; ಯತ್-ಅಧ್ಯಾ-
ಸಾತ್ = ಯಾವುದರ ಅಧ್ಯಾಸದಿಂದ, ಚಿನ್ಮೂರ್ತೆಃತೇಃ = ಚಿನ್ಮೂರ್ತಿಯಾದ, ಸುಖ-