This page has not been fully proofread.

೧೫೮
 
ವಿವೇಕಚೂಡಾಮಣಿ
 
[೩೦೧
 
ವಿನಾಶೇ [ಸತಿ] - ನಾಶವುಂಟಾದಾಗ ಪ್ರತಿಬಂಧಶೂನ್ಯಃ - ಪ್ರತಿಬಂಧರಹಿತವಾದ
ಬ್ರಹ್ಮಾತ್ಮಭಾವಃ = ಬ್ರಹ್ಮಾತ್ಮಸ್ವರೂಪವು ಉಂಟಾಗುತ್ತದೆ.
 
೩೦೦. ಈ ಶರೀರದಲ್ಲಿ ಯಾವುದು 'ನಾನು ಇಂಥವನು' ಎಂದು ತೋರಿ
ಕೊಳ್ಳುವುದೊ ಮತ್ತು ಅಜ್ಞಾನದ ಮೂಲಕ ಅತಿಮೂಢವಾದ ಬುದ್ಧಿ
ಯಿಂದ ಕಲ್ಪಿತವಾಗಿದೆಯೊ ಆ ಅಹಂಕಾರವನ್ನೇ ಸಂಪೂರ್ಣವಾಗಿ ನಾಶ
ಮಾಡಿದಾಗ ಪ್ರತಿಬಂಧರಹಿತವಾದ ಬ್ರಹ್ಮಾತ್ಮಸ್ವರೂಪವು ಉಂಟಾಗುತ್ತದೆ.
 
ಭಿರ್ಮಸ್ತಕೈಃ ।
 
ಬ್ರಹ್ಮಾನಂದನಿಧಿರ್ಮಹಾಬಲವತಾಽಹಂಕಾರ-ಘೋರಾಹಿನಾ
ಸಂವೇಷ್ಟಾತ್ಮನಿ ರಕ್ಷತೇ ಗುಣಮಶ್ಚಂಡೈ
ವಿಜ್ಞಾನಾಖ್ಯ-ಮಹಾಸಿನಾ ದ್ಯುತಿಮತಾ ವಿಚ್ಛಿದ ಶೀರ್ಷತ್ರಯಂ
ನಿರ್ಮೂಲಾ ಹಿಮಿಮಂ ನಿಧಿಂ ಸುಖಕರಂ ಧೀರೋಽನುಭೋಕುಂ
ಕ್ಷಮಃ ॥ ೩೦೧ ॥
 
ಬ್ರಹ್ಮಾನಂದ ನಿಧಿಃ - ಬ್ರಹ್ಮಾನಂದವೆಂಬ ನಿಧಿಯು ಬಲವತಾ ಮಹಾಬಲ
ವುಳ್ಳ ಅಹಂಕಾರ ಘೋರ. ಅಹಿನಾ - ಅಹಂಕಾರವೆಂಬ ಘೋರಸರ್ಪದಿಂದ ಗುಣ-
ಮಃ – ಗುಣಮಯವಾದ ಚಂಡೈ - ರೋಷಗೊಂಡಿರುವ ತ್ರಿಭಿಃ ಮಸ್ತಕೈ =
ಮೂರು ಹೆಡೆಗಳಿಂದ ಸಂವೇಷ್ಟ - ಸುತ್ತಿಕೊಂಡು ಆತ್ಮನಿ - ತನ್ನಲ್ಲಿ ರಕ್ಷತೇ
ರಕ್ಷಿಸಲ್ಪಡುತ್ತದೆ; ದ್ಯುತಿಮತಾ – ಥಳಥಳಿಸುತ್ತಿರುವ ವಿಜ್ಞಾನಾಖ್ಯ ಮಹಾ-
ಅಸಿನಾ - ಬ್ರಹ್ಮಜ್ಞಾನವೆಂಬ ದೊಡ್ಡ ಕತ್ತಿಯಿಂದ ಶೀರ್ಷತ್ರಯಂ = ಮೂರು ಹೆಡೆ
ಗಳನ್ನೂ ವಿಚ್ಛಿದ ಕತ್ತರಿಸಿ ಇಮಮ್ ಅಹಿಂ-ಈ ಸರ್ಪವನ್ನು ನಿರ್ಮೂಲ್ಯ -ನಾಶ
ಗೊಳಿಸಿ ಸುಖಕರು - ಆನಂದವನ್ನುಂಟುಮಾಡುವ ನಿಧಿಂ = ನಿಧಿಯನ್ನು ಅನು.
ಭೋಕುಂ – ಅನುಭವಿಸಲು ಧೀರಃ - ಧೀಮಂತನಾದವನು ಕ್ರಮಃ - ಶಕ್ತನು.
 
-
 
೩೦೧. ಮಹಾ ಬಲವುಳ್ಳ ಅಹಂಕಾರವೆಂಬ ಘೋರಸರ್ಪವು ಬ್ರಹ್ಮಾ
ನಂದವೆಂಬ ನಿಧಿಯನ್ನು ಸರಜಸ್ತಮೋಗುಣಗಳೆಂಬ ರೋಷಗೊಂಡಿ
ರುವ ಮೂರು ಹೆಡೆಗಳಿಂದ ಸುತ್ತಿಕೊಂಡು ತನ್ನಲ್ಲಿ ರಕ್ಷಿಸಿಕೊಂಡಿರುತ್ತದೆ.
ಬ್ರಹ್ಮಜ್ಞಾನವೆಂಬ ಥಸಥಳಿಸುತ್ತಿರುವ ದೊಡ್ಡ ಕತ್ತಿಯಿಂದ ಮೂರು ಹೆಡೆ
ಗಳನ್ನೂ ಕತ್ತರಿಸಿ, ಈ ಸರ್ಪವನ್ನು ನಾಶಮಾಡಿ, ಆನಂದಕರವಾದ ಈ ನಿಧಿ -
ಯನ್ನು ಅನುಭವಿಸಲು ಧೀಮಂತನಾದವನೇ ಶಕ್ತನಾಗಿರುತ್ತಾನೆ.
 
ಯಾವಾ ಯಂಚಿದ್ವಿಷ-ದೋಷ-ಸ್ಫೂರ್ತಿರಸ್ತಿ ಚೇದ್ದೇಹೇ ।
ಕಥಮಾರೋಗ್ಯಾಯ ಭವೇತ್ ತದ್ವದಹಂತಾಪಿ ಯೋಗಿನೋ
 
ಮುಕ್ತ ॥ ೩೦೨ ॥
 
483