This page has not been fully proofread.

ವಿವೇಕಚೂಡಾಮಣಿ
 
200]
 
ಯಾವತ್ ಸ್ಮಾತ್ ಸ್ವಸ್ಯ ಸಂಬಂಧೋsಹಂಕಾರೇಣ ದುರಾತ್ಮನಾ ।

ತಾವನ್ನ ಲೇಶಮಾತ್ರಾಪಿ ಮುಕ್ತಿ ವಾರ್ತಾ ವಿಲಕ್ಷಣಾ ॥ ೨೯೮ ॥
 
೧೫೭
 

 
 
ಸ್ವಸ್ಯ - ತನಗೆ ದುರಾತ್ಮನಾ = ದುಷ್ಟ ಸ್ವಭಾವದ ಅಹಂಕಾರೇಣ - ಅಹಂ.

ಕಾರದೊಂದಿಗೆ ಯಾವತ್ = ಎಲ್ಲಿಯ ವರೆಗೆ ಸಂಬಂಧಃ ಸ್ಯಾತ್ = ಸಂಬಂಧವಿರು

ವುದೋ ತಾವತ್ ಅಲ್ಲಿಯ ವರೆಗೆ ವಿಲಕ್ಷಣಾ ವಿಲಕ್ಷಣವಾದ ಮುಕ್ತಿ ವಾರ್ತಾ

ಮೋಕ್ಷದ ಸುದ್ದಿ ಯು ಲೇಶಮಾತ್ರಾ ಅಪಿ ನ - ಲೇಶಮಾತ್ರವೂ ಇರುವುದಿಲ್ಲ.

೨೯೮. ದುಷ್ಟ ಸ್ವಭಾವದ ಅಹಂಕಾರದೊಂದಿಗೆ ಎಲ್ಲಿಯ ವರೆಗೆ ತನಗೆ

ಸಂಬಂಧವಿರುವುದೋ ಅಲ್ಲಿಯ ವರೆಗೂ ವಿಲಕ್ಷಣವಾದ ಮೋಕ್ಷದ ಸುದ್ದಿಯು

ಲೇಶಮಾತ್ರವೂ ಇರುವುದಿಲ್ಲ.
 

 
[ ಸಂಸಾರವಿರುದ್ಧವೂ ನಿತ್ಯ-ನಿರತಿಶಯ- ಸುಖಸ್ವರೂಪವೂ ಆದ.]
 

 
ಅಹಂಕಾರ-ಗ್ರಹಾನ್ನುಃ ಸ್ವರೂಪಮುಪಪದ್ಯತೇ ।

ಚಂದ್ರವಮಲಃ ಪೂರ್ಣಃ ಸದಾನಂದಃ ಸ್ವಯಂಪ್ರಭಃ ॥ ೨೯೯ ॥

ಅಹಂಕಾರ-ಗ್ರಹಾತ್ ಅಹಂಕಾರವೆಂಬ ರಾಹುವಿನಿಂದ ಮುಕ್ತಃ ಬಿಡಲ್ಪ.

ಟ್ಟವನು ಚಂದ್ರವತ್ – ಚಂದ್ರನಂತೆ ವಿಮಲಃ = ವಿಮಲನೂ ಪೂರ್ಣಃ - ಪರಿ.

ಪೂರ್ಣನೂ ಸದಾನಂದಃ । ನಿತ್ಯಾನಂದನೂ ಸ್ವಯಂಪ್ರಭಃ = ಸ್ವಯಂವ್ರಕಾಶನೂ

[ಆಗಿ] ಸ್ವರೂಪಂ = ನಿಜಸ್ವರೂಪವನ್ನು ಉಪಪದ್ಯತೇ - ಹೊಂದುತ್ತಾನೆ.
 

 
೨೯೯. ಅಹಂಕಾರವೆಂಬ ರಾಹುವಿನಿಂದ ಬಿಡಲ್ಪಟ್ಟವನು ಚಂದ್ರನಂತೆ

ವಿಮಲನೂ ಪರಿಪೂರ್ಣನೂ ನಿತ್ಯಾನಂದನೂ ಸ್ವಯಂಪ್ರಕಾಶನೂ ಆಗಿ ತನ್ನ

ನಿಜಸ್ವರೂಪವನ್ನು ಹೊಂದುತ್ತಾನೆ.
 

 
ಯೋ ವಾ ಪುರೇ ಸೋಽಹಮಿತಿ ಪ್ರತೀತೋ

ಬುದ್ಧಾ, ಪ್ರಕಪ್ರಸ್ತಮಸಾತಿಮೂಢಯಾ ।

ತಸ್ಯೆವ ನಿಃಶೇಷತಯಾ ವಿನಾಶೇ

ಬ್ರಹ್ಮಾತ್ಮಭಾವಃ ಪ್ರತಿಬಂಧಶೂನ್ಯ
 

 
॥ ೩೦೦ ॥
 

 
ಪುರೇ – ಶರೀರದಲ್ಲಿ ಯಃ = ಯಾವುದು ಸಃ ಅಹಮ್ - ನಾನು ಇಂಥವನು

ಇತಿ - ಎಂದು ಪ್ರತೀತಃ = ತೋರಿಕೊಳ್ಳುವುದೋ ತಮಸಾ - ಅಜ್ಞಾನದಿಂದ ಅತಿ-

ಮೂಢಯಾ - ಅತಿ ಮೂಢವಾದ ಬುದ್ಧಾ - ಬುದ್ಧಿಯಿಂದ ಪ್ರಕೃಪ್ತಃ = ಕಲ್ಪಿತ
 

 
ವಾಗಿದೆಯೊ ತಸ್ಯ ಏವ ಆ ಅಹಂಕಾರಕ್ಕೆ
 
=
 

 
=
 
ನಿಃಶೇಷತಯಾ - ಸಂಪೂರ್ಣವಾಗಿ