This page has been fully proofread once and needs a second look.

ಕೂಡ ಇರುವುದು ಕಂಡುಬರುತ್ತದೆ. 'ಜನ್ಮರಹಿತನೂ ನಿತ್ಯನೂ' ಎಂದು
ಶ್ರುತಿಯೇ ಹೇಳುತ್ತದೆ.[^೧] ಆದುದರಿಂದ ಪ್ರತ್ಯಗಾತ್ಮನು ಸ್ಥೂಲಸೂಕ್ಷ್ಮ ಗಳಿ-
ಗಿಂತ ಭಿನ್ನವಾಗಿರುತ್ತಾನೆ.
 
[^೧] ಕರ ಉ. ೧. ೨. ೧೮.]
 
ವಿಕಾರಿಣಾಂ ಸರ್ವವಿಕಾರವೇತ್ತಾ
ನಿತ್ಯೋಽವಿಕಾರೋ ಭವಿತುಂ ಸಮರ್ಹತಿ ।
ಮನೋರಥ-ಸ್ವಪ್ನ-ಸುಷುಪ್ತಿಷು ಸ್ಫುಟಂ
ಪುನಃ ಪುನರ್ದೃಷ್ಟಮಸತ್ತ್ವಮೇತಯೋಃ ॥ ೨೯೪ ॥
 
[ಆತ್ಮನು] ವಿಕಾರಿಣಾಂ =ವಿಕಾರವುಳ್ಳ ವಸ್ತುಗಳ, ಸರ್ವ-ವಿಕಾರವೇತ್ತಾ =
ಸರ್ವ ವಿಕಾರಗಳನ್ನು ಅರಿಯುವವನೂ, ನಿತ್ಯಃ = ನಿತ್ಯನೂ, ಅವಿಕಾರಃ = ಅವಿಕಾರಿಯೂ,
ಭವಿತುಂ ಸಮರ್ಹತಿ = ಆಗಲು ಅರ್ಹನಾಗಿರುತ್ತಾನೆ; ಮನೋರಥ-ಸ್ವಪ್ನ-
ಸುಷುಪ್ತಿಷು = ಮನೋರಥ ಸ್ವಪ್ನ ಸುಷುಪ್ತಿ-- ಇವುಗಳಲ್ಲಿ, ಏತಯೋಃ = [ದೇಹ-
ಅಹಂಕಾರಗಳೆಂಬ] ಇವೆರಡರ, ಅಸತ್ತ್ವಂ = ಮಿಥ್ಯಾ ಸ್ವರೂಪವು, ಪುನಃ ಪುನಃ = ಪದೇ
ಪದೇ, ದೃಷ್ಟಂ = ನೋಡಲ್ಪಟ್ಟಿದೆ.
 
೨೯೪,. ವಿಕಾರವುಳ್ಳ ವಸ್ತುಗಳ ಸರ್ವವಿಕಾರಗಳನ್ನೂ ಅರಿಯುತ್ತಿರುವ
ಆತ್ಮನು ನಿತ್ಯನೂ ಅವಿಕಾರಿಯೂ ಆಗಿರಬೇಕು.
ಮನೋರಥ ಸ್ವಪ್ನ ಸುಷುಪ್ತಿ-- ಇವುಗಳಲ್ಲಿ, ದೇಹ ಅಹಂಕಾರಗಳೆಂಬ ಇವೆರಡರ ಮಿಥ್ಯಾತ್ವ
ವನ್ನು[^೧] ಪುನಃ ಪುನಃ ನೋಡಬಹುದು.
 
[^] ಏಕೆಂದರೆ ಸುಷುಪ್ತಿಯಲ್ಲಿ ಅಹಂಕಾರವು ಕಂಡುಬರುವುದಿಲ್ಲ; ಸ್ವಪ್ನ ಸುಷುಪ್ತಿ-
ಗಳಲ್ಲಿ ಸ್ಕೂಥೂಲದೇಹವು ಕಂಡುಬರುವುದಿಲ್ಲ.]
 
ಅತೋಽಭಿಮಾನಂ ತ್ಯಜ ಮಾಂಸಪಿಂಡೇ
ಪಿಂಡಾಭಿಮಾನಿನ್ಯಪಿ ಬುದ್ಧಿ ಕಲ್ಪಿತೇ ।
ಕಾಲತ್ರಯಾಬಾಧ್ಯಮಖಂಡ-ಬೋಧಂ
ಜ್ಞಾತ್ವಾ ಸ್ವಮಾತ್ಮಾನಮುಪೈಹಿ ಶಾಂತಿಮ್ ॥ ೨೯೫ ॥
 
ಅತಃ = ಆದುದರಿಂದ, ಮಾಂಸಪಿಂಡೇ = ಮಾಂಸಪಿಂಡದಲ್ಲಿಯೂ, ಬುದ್ಧಿ-
ಕಲ್ಪಿತೇ = ಬುದ್ಧಿಯಿಂದ ಕಲ್ಪಿತವಾದ, ಪಿಂಡಾಭಿಮಾನಿನಿ ಅಪಿ = ದೇಹಾಭಿಮಾನಿ
ಎಂಬ ಅಹಂಕಾರದಲ್ಲಿಯೂ, ಅಭಿಮಾನಂ = ಅಭಿಮಾನವನ್ನು, ತ್ಯಜ = ಬಿಡು;
ಕಾಲತ್ರಯ-ಅಬಾಧ್ಯಂ = ತ್ರಿಕಾಲದಲ್ಲಿಯೂ ಬಾಧಿತವಾಗದ, ಅಖಂಡಬೋಧಂ=
ಅಖಂಡಜ್ಞಾನಸ್ವರೂಪನಾದ, ಸ್ವಮ್ ಆತ್ಮಾನಂ = ನಿನ್ನ ಆತ್ಮನನ್ನು, ಜ್ಞಾತ್ವಾ =
ಅರಿತುಕೊಂಡು, ಶಾಂತಿಂ = ಶಾಂತಿಯನ್ನು, ಉಪೈಹಿ = ಹೊಂದು.